ದಾವಣಗೆರೆ: ದಾವಣಗೆರೆ ಜಿಲ್ಲೆಯನ್ನು ಡ್ರಗ್ಸ್ ಮುಕ್ತವನ್ನಾಗಿಸಲು ಪಣ ತೊಟ್ಟಿರುವ ಜಿಲ್ಲಾ ಪೊಲೀಸ್ ಇಲಾಖೆಯು ಸಮರ ಮುಂದುವರಿಸಿದೆ. ಸಿಂಥೆಟಿಕ್ ಡ್ರಗ್ಸ್ ಕೇಸ್ ನಲ್ಲಿ ಮತ್ತೊಬ್ಬನನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 11ಕ್ಕೇರಿಕೆಯಾಗಿದೆ.
READ ALSO THIS STORY: ಶಾಸಕ ಬಿ. ಪಿ. ಹರೀಶ್ ವಿರುದ್ದ ಜಾತಿನಿಂದನೆ ಕೇಸ್: ರೊಚ್ಚಿಗೆದ್ದ ಕೇಸರಿಪಡೆಯಿಂದ ಬೃಹತ್ ಹೋರಾಟಕ್ಕೆ ನಿರ್ಧಾರ!
ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಶಿವರಾಜ್ ಬಂಧಿತ ಆರೋಪಿ. ಈತನ ಬಂಧನದೊಂದಿಗೆ ಬಂಧಿತರ ಸಂಖ್ಯೆ 11ಕ್ಕೇರಿಕೆಯಾಗಿದೆ. ನಗರದ ಪಿಜೆ ಬಡಾವಣೆಯಲ್ಲಿ ತಾನು ಮದುವೆಯಾಗಿದ್ದ ಮಾವನ ಮನೆಯಲ್ಲಿ
ವಾಸವಿದ್ದ ಶಿವರಾಜ್ ಆರ್ ಟಿಒ ಕಚೇರಿಯಲ್ಲಿ ಏಜೆಂಟ್ ಆಗಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.
ಈತನು ಡ್ರಗ್ಸ್ ಜಾಲದೊಂದಿಗೆ ಸಂಪರ್ಕ ಹೊಂದಿದ್ದ. ಮಾತ್ರವಲ್ಲ, ಆರೋಪಿಗಳು ಬಂಧನವಾದ ಬಳಿಕ ಸುಮ್ಮನಿರದೇ ಆರೋಪಿಗಳ ಮೊಬೈಲ್ ಗೆ ಕರೆ ಮಾಡಿದ್ದಾನೆ. ಮಾಹಿತಿ ಸಂಗ್ರಹಿಸುವ ಕೆಲಸವನ್ನೂ ಮಾಡುತ್ತಿದ್ದ. ಮಾತ್ರವಲ್ಲ, ಪೊಲೀಸರು
ವಿಚಾರಣೆಗೆ ಕರೆದಾಗ ತನಗೇನೂ ಗೊತ್ತಿಲ್ಲ ಎಂದು ಬಡಾಬಡಾಯಿಸಿ ತಪ್ಪಿಸಿಕೊಂಡಿದ್ದ. ಡ್ರಗ್ಸ್ ಜಾಲದ ಜೊತೆ ಸಂಪರ್ಕ ಹೊಂದಿದ್ದ ಈತನ ಬಗ್ಗೆ ಮಾಹಿತಿ ಕಲೆ ಹಾಕುತ್ತಲೇ ಇದ್ದ ಪೊಲೀಸರು ಸಾಕ್ಷ್ಯ ಸಂಗ್ರಹಿಸಿ ಕೊನೆಗೂ ಬಂಧಿಸಿದ್ದಾರೆ.
ಅಲ್ಲಿ ಇಲ್ಲಿ ಪಂಚಾಯಿತಿ ಕೂಡ ನಡೆಸುತ್ತಿದ್ದ. ಮಾಹಿತಿಯನ್ನೂ ಪೊಲೀಸರಿಗೆ ನೀಡುವ ನೆಪದಲ್ಲಿ ಪೊಲೀಸರಿಗೆ ಪಂಗನಾಮ ಹಾಕಿದ್ದ ಎಂದು ಹೇಳಲಾಗುತ್ತಿದೆ. ವೀರಶೈವ ಲಿಂಗಾಯತ ಮಹಾಸಭಾದ ಯುವ ಘಟಕದ ಜಿಲ್ಲಾಧ್ಯಕ್ಷನೆಂದು ಬ್ಯಾನರ್, ಬಂಟಿಂಗ್ಸ್ ಹಾಕಿ ಲೀಡರ್ ಎಂಬಂತೆ ಫೋಸ್ ನೀಡುತ್ತಿದ್ದ. ಡ್ರಗ್ಸ್ ಕೇಸ್ ನಲ್ಲಿ ಯಾರ್ಯಾರೊಟ್ಟಿಗೆ ಸಂಪರ್ಕ ಹೊಂದಿದ್ದ? ಈತನು ಹೆಬ್ಬಾಳಕ್ಕೆ ಹೋಗಿ ರಾಜಸ್ತಾನದಿಂದ ಬರುತ್ತಿದ್ದ ಡ್ರಗ್ಸ್ ಅನ್ನು ಸ್ವೀಕರಿಸಿ ಬಂದು ಹೇಳಿದವರಿಗೆ ನೀಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಆದರೆ ಪೊಲೀಸರು ಈ ಮಾಹಿತಿ ಖಚಿತಪಡಿಸಿಲ್ಲ.
ಸಿಂಥೆಟಿಕ್ ಡ್ರಗ್ಸ್ ಕೇಸ್ ಬಯಲಾಗುತ್ತಿದ್ದಂತೆ ಹುಷಾರಾಗಿದ್ದರೂ ಈತನು ತನ್ನ ಚಾಳಿ ಮುಂದುವರಿಸಿದ್ದ. ಆರೋಪಿಗಳ ಜೊತೆ ಫೋನ್ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ವಿಚಾರಣೆ ವೇಳೆ ವಿಚಾರಿಸಿದಾಗ ಬಾಯಿ ಬಿಟ್ಟಿಲ್ಲ. ಸುಳ್ಳು ಹೇಳಿದ್ದಾನೆ. ಆ ನಂತರ ಪೊಲೀಸರು ಪಕ್ಕಾ ಮಾಹಿತಿ ಕಲೆ ಹಾಕಿ ಕೊನೆಗೂ ಈತನನ್ನು ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನ ಬಂಧನ ಖಚಿತಪಡಿಸಿರುವ ಪೊಲೀಸರು ಉಳಿದ ಆರೋಪಿಗಳಿಗೆ ಬಲೆ ಬೀಸಿದ್ದಾರೆ ಎಂದು
ತಿಳಿದು ಬಂದಿದೆ.
ಏನಿದು ಸಿಂಥೆಟಿಕ್ ಡ್ರಗ್ಸ್ ಕೇಸ್?
ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ. ಹೆಚ್. ಪಟೇಲ್ ಬಡಾವಣೆಯ ಪಾರ್ಕ್ ನಲ್ಲಿ ನಾಲ್ವರು ತಮ್ಮ ಬಳಿ ಅಕ್ರಮವಾಗಿ ಗಾಂಜಾ ಮತ್ತು ಮಾದಕ ವಸ್ತುಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಕುರಿತ ಖಚಿತ ವರ್ತಮಾನದ ಮೇರೆಗೆ ವಿದ್ಯಾನಗರ ಪೊಲೀಸರು ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಕಾಂಗ್ರೆಸ್ ಮುಖಂಡ ಶಾಮನೂರು ವೇದಮೂರ್ತಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು. ಈ ವೇಳೆ ಹತ್ತು ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳು ಹಾಗೂ ಮಾರಾಟ ಮಾಡಿದ ಒಂದು ಲಕ್ಷ ರೂಪಾಯಿ ಸಿಕ್ಕಿತ್ತು.
ರಾಜಸ್ತಾನದ ಜೋಧಪುರದ ಹರ್ಮೀನ್ರಗರ್ ಮೇರಿಯನಾಡದ ರಾಮ್ ಸ್ವರೂಪ್, ರಾಜಸ್ತಾನದ ಜೋಧಪುರದ ಲೂಣಿ ಗ್ರಾಮದ ಅಡುಗೆ ಕೆಲಸ ಮಾಡುತ್ತಿದ್ದ ಧೋಲಾರಾಮ್, ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯಲ್ಲಿ ವಾಸವಿದ್ದು ಅಲ್ಯೂಮಿನಿಯಂ ಕೆಲಸ ಮಾಡುತ್ತಿದ್ದ ದೇವ್ ಕಿಶನ್, ಶಾಮನೂರು ಗ್ರಾಮದ ರಿಯಲ್ ಎಸ್ಟೇಟ್ ನಡೆಸುತ್ತಿದ್ದ ಎಸ್. ಜಿ. ವೇದಮೂರ್ತಿಯನ್ನು ಬಂಧಿಸಿದ್ದರು. ಆ ನಂತರ ಅಜೇಯ ಸೇರಿದಂತೆ ಒಟ್ಟು ಹತ್ತು ಮಂದಿ ಬಂಧಿಸಲಾಗಿತ್ತು. ಶಿವರಾಜ್ ಬಂಧನದಿಂದ ಈ ಕೇಸ್ ನಲ್ಲಿ ಬಂಧಿತರ ಸಂಖ್ಯೆ 11ಕ್ಕೇರಿದೆ.
ಘಟನೆ ಹಿನ್ನೆಲೆ:
ಡಿಸೆಂಬರ್ 22ರಂದು ಮಧ್ಯಾಹ್ನ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಹೆಚ್ ಪಟೇಲ್ ಬಡಾವಣೆಯ ಉದ್ಯಾನವನದಲ್ಲಿ ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ ಮಾಡುತ್ತಿರುವ ಕುರಿತಂತೆ ಖಚಿತ ವರ್ತಮಾನ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶರಣ ಬಸವೇಶ್ವರ ಬಿ. ಹಾಗೂ ವಿದ್ಯಾನಗರ ಠಾಣೆ ನಿರೀಕ್ಷಕಿ ಶಿಲ್ಪಾ ವೈ.ಎಸ್. ಅವರ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪಿಎಸ್ಐ ಜಿ. ನಾಗರಾಜ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಅಧಿಕಾರಿ ಸಿಬ್ಬಂದಿಗಳೊಂದಿಗೆ ಜೆ. ಹೆಚ್. ಪಟೇಲ್ ಬಡಾವಣೆಯ ಪಾರ್ಕ್ ಗೆ ತೆರಳಿತ್ತು.
ಈ ವೇಳೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತರ ಮೇಲೆ ದಾಳಿ ಮಾಡಿದ್ದು, ಪ್ರಕರಣಕ್ಕೆ ಸಂಭಂಧಿಸಿದಂತೆ ಆರೋಪಿತರು ಸಿಕ್ಕಿಬಿದ್ದಿದ್ದಾರೆ. ಆರೋಪಿತರಿಂದ ಅಂದಾಜು 10 ಲಕ್ಷ ರೂಪಾಯಿ ಮೌಲ್ಯದ ಒಟ್ಟು 90 ಗ್ರಾಂ
ಎಂ.ಡಿ.ಎಂ.ಎ ಹಾಗೂ 200 ಗ್ರಾಂ ಓಪಿಯಂ ಎಂಬ ಮಾದಕ ವಸ್ತುಗಳು ಹಾಗೂ ಮಾದಕ ವಸ್ತುಗಳನ್ನು ಮಾರಾಟ ಮಾಡಿ ಬಂದಿದ್ದ ಹಣ ರೂ 1,00,000 ನಗದು ಸೇರಿದಂತೆ 11 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಆರೋಪಿತರ ಹಿನ್ನೆಲೆ:
ಆರೋಪಿತ ರಾಮ್ ಸ್ವರೂಪ್ ಈತನ ಮೇಲೆ ರಾಜಸ್ಥಾನ ರಾಜ್ಯದ ಜೋಧಪುರದಲ್ಲಿ ಎನ್ ಡಿಪಿಎಸ್ ಹಾಗೂ ಆರ್ಮ್ಸ್ ಆಕ್ಟ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಬಂಧಿತರ ವಿವರ:
1. ಪರಶುರಾಮ್ @ ಪಾರಸ್, 37 ವರ್ಷ, ಪ್ರೈವುಡ್ ವ್ಯಾಪಾರಿ, ವಾಸ ಗೌರಮ್ಮ ನಿಲಯ, ರಾಜು ಮೆಡಿಕಲ್ಸ್ ಎದುರು, ಎಂ.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಸ್ವಂತ ವಿಳಾಸ: ಮಾಲೀಯೋ ಕಾ ಬಾಷ್, ಬೋಪಾಲ್ ಗಡ್ ಗ್ರಾಮ,
ಬೋಪಾಲ್ಗಡ್ ಪೊಲೀಸ್ ಠಾಣೆ ಎದುರು, ಜೋಧಪುರ, ರಾಜಸ್ಥಾನ.
2. ಕೃಷ್ಣಮೂರ್ತಿ ಸಿಂಗಾರಾಮ್ 44 ವರ್ಷ, ಎಲೆಕ್ಟಿಕಲ್ ಕಂಟ್ರ್ಯಾಕ್ಟರ್ ಕೆಲಸ, 7ನೇ ಕ್ರಾಸ್, 11ನೇ ಮೇನ್, ಕುವೆಂಪು ನಗರ, ಅಪೋಲೋ ಮೆಡಿಕಲ್ಸ್ ಎದುರು, ಬಿಐಇಟಿ ರಸ್ತೆ, ಎಂ.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ. ಸ್ವಂತ
ವಿಳಾಸ: ಕಿಲಕ್ಕಮೇಡು ಗ್ರಾಮ, ಕೋನಾಪಟ್ಟಿ ಪೋಸ್ಟ್, ನಾಟ್ರಮ್ ಪಲ್ಲಿ ತಾಲೂಕು ತಿರುಪತ್ತೂರು, ತಮಿಳುನಾಡು.
3. ಮಂಜುನಾಥ.ಎಮ್ @ ಧೋನಿ 38 ವರ್ಷ, ಎಳನೀರು ವ್ಯಾಪಾರ, ವಾಸ ಚೌಡಾಂಬಿಕ ದೇವಸ್ಥಾನದ ಹತ್ತಿರ, ಜರಿಕಟ್ಟೆ ಗ್ರಾಮ ದಾವಣಗೆರೆ ತಾಲ್ಲೂಕು ದಾವಣಗೆರೆ ಜಿಲ್ಲೆ.
4. ಅನ್ವರ್ ಬಾಷಾ 50 ವರ್ಷ, ಕಂಟ್ರ್ಯಾಕ್ಟರ್, ವಾಸ ಇದ್ದಾ ಹತ್ತಿರ. ತುರ್ಚಘಟ್ಟ ಗ್ರಾಮ, ದಾವಣಗೆರೆ
ಜಿ. ಎಸ್. ವೇದಮೂರ್ತಿ ಸೇರಿದಂತೆ ನಾಲ್ವರನ್ನು ಮೊದಲು ಬಂಧಿಸಲಾಗಿತ್ತು. ಆ ನಂತರ ನಾಲ್ವರನ್ನು ಬಂಧಿಸಿದ್ದ ವಿದ್ಯಾನಗರ ಪೊಲೀಸರು ಅಜೇಯ ಸೇರಿದಂತೆ ಇಬ್ಬರನ್ನು ಬಂಧಿಸಿದ್ದರು. ಬಂಧಿತರ ಸಂಖ್ಯೆ 10ಕ್ಕೇರಿತ್ತು. ಈಗ ಶಿವರಾಜ್ ಬಂಧನದಿಂದ ಅರೆಸ್ಟ್ ಆದವರ ಸಂಖ್ಯೆ 11ಕ್ಕೇರಿಕೆಯಾಗಿದೆ.









Leave a comment