ಬೆಂಗಳೂರು: ಕಾಂಗ್ರೆಸ್ ಬಂದಿದೆ. ಕರ್ನಾಟಕದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಬಿಜೆಪಿ ಆರೋಪಿಸಿದೆ.
ಜೇವರ್ಗಿಯ ತಹಶೀಲ್ದಾರ್ ತಮ್ಮ ಕೆಳಹಂತದ ಅಧಿಕಾರಿಗಳಿಂದ ಬಹಿರಂಗವಾಗಿಯೇ “ಮಂತ್ಲಿ ಮಾಮೂಲು” ಕೇಳುತ್ತಿದ್ದಾರೆ ಎಂದು ತಿಳಿಸಿದೆ.
ಸಿಎಂ ಸಿದ್ದರಾಮಯ್ಯ ಅವರೇ, ಡಿಸಿಎಂ ಡಿ. ಕೆ. ಶಿವಕುಮಾರ್ ಅವರೇಅವರೇ, ನಿಮ್ಮ ದುರಾಡಳಿತದಲ್ಲಿ ಲಂಚಾವತಾರ ಮಿತಿ ಮೀರಿದೆ ಎಂಬುದಕ್ಕೆ ತಹಶೀಲ್ದಾರ್ ಬಹಿರಂಗವಾಗಿಯೇ ತಿಂಗಳ ಮಾಮೂಲಿ ಕೇಳುತ್ತಿರುವ ವಿಡಿಯೋ ವೈರಲ್ ಆಗಿರುವುದೇ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕಲಬುರಗಿ ಸಂಸದರ ಶೂನ್ಯ ಅಭಿವೃದ್ಧಿ ಮಾಡೆಲ್!
ರಾಧಾಕೃಷ್ಣ ಅವರು ಒಂದೂವರೆ ವರ್ಷ ಸಂಸದರಾಗಿದ್ದರೂ ಕಲಬುರಗಿ ಅಭಿವೃದ್ಧಿಗೆ ಮಾಡಿದ್ದು ಏನು? MPLADS ಪೋರ್ಟಲ್ ತೆರೆದರೆ ಸಂಪೂರ್ಣ ಖಾಲಿ ಒಂದೇ ಒಂದು ಯೋಜನೆ ಇಲ್ಲ, ಮಾಡಿರುವ ಕೆಲಸದ ಮಾಹಿತಿ ಇಲ್ಲ, ಫಲಿತಾಂಶವಂತೂ ಇಲ್ಲವೇ ಇಲ್ಲ. ಅನುದಾನದ ಹಣವನ್ನು ಅಭಿವೃದ್ಧಿಗೆ ಬಳಸದೆ ಕಲಬುರಗಿಯನ್ನು ಕಡೆಗಣಿಸಿರುವ ಬಗ್ಗೆ ಜನತೆಗೆ ಉತ್ತರ ಕೊಡಬೇಕಿದೆ ಎಂದು ಆಗ್ರಹಿಸಿದೆ.





Leave a comment