Home ದಾವಣಗೆರೆ ಫೆ. 22ರಿಂದ ಆರಂಭವಾಗೋ ದಾವಣಗೆರೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯಲ್ಲಿ ಪ್ರತಿನಿತ್ಯ 2 ಲಕ್ಷ ಭಕ್ತರು: ಏನೆಲ್ಲಾ ಸೂಚನೆ ಕೊಡಲಾಗಿದೆ ಗೊತ್ತಾ?
ದಾವಣಗೆರೆನವದೆಹಲಿಬೆಂಗಳೂರು

ಫೆ. 22ರಿಂದ ಆರಂಭವಾಗೋ ದಾವಣಗೆರೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯಲ್ಲಿ ಪ್ರತಿನಿತ್ಯ 2 ಲಕ್ಷ ಭಕ್ತರು: ಏನೆಲ್ಲಾ ಸೂಚನೆ ಕೊಡಲಾಗಿದೆ ಗೊತ್ತಾ?

Share
ದಾವಣಗೆರೆ
Share

ದಾವಣಗೆರೆ: ಫೆಬ್ರವರಿ 22 ರಿಂದ ಆರಂಭವಾಗುವ ನಗರದೇವತೆ ಶ್ರೀ ದುರ್ಗಾಂಭಿಕ ದೇವಿ ಜಾತ್ರೆಯನ್ನು ವ್ಯವಸ್ಥಿತವಾಗಿ ಆಚರಿಸಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

READ ALSO THIS STORY: ದಾವಣಗೆರೆ ನಗರದೇವತೆ ಶ್ರೀ ದುರ್ಗಾಂಭಿಕ ದೇವಿ ಜಾತ್ರೆಗೆ ಪ್ರಾಣಿಬಲಿ ನಿಷೇಧ

ಅವರು ಶ್ರೀ ದುರ್ಗಾಂಬಿಕದೇವಿ ಜಾತ್ರೆ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರದೇವತೆ ಶ್ರೀ ದುರ್ಗಾಂಬಿಕ ದೇವಿ ಜಾತ್ರೆಯು ನಡೆಯುವ ದಿನಗಳಂದು ದೇವಸ್ಥಾನದ ಸುತ್ತಮುತ್ತಲು ಸ್ವಚ್ಚತೆಯನ್ನು ಕಾಪಾಡಬೇಕು, ವಿದ್ಯುತ್ ಅಲಂಕಾರ ಇರುವುದರಿಂದ ವಿದ್ಯುತ್ ಅನ್ನು ನಿರಂತರವಾಗಿ ಪೂರೈಸಬೇಕು. ಅದರಲ್ಲಿಯೂ ರಾತ್ರಿ ವೇಳೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಗದಂತೆ ಕ್ರಮವಹಿಸಬೇಕು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಂಗಡಿಗಳನ್ನು ತೆರೆಯಬೇಕು ಎಂದು ಸೂಚನೆ ನೀಡಿದರು.

ನಗರದೇವತೆ ಶ್ರೀದುರ್ಗಾಂಬಿಕದೇವಿ ಜಾತ್ರೆಗೆ ಪ್ರತಿದಿನ ಅಂದಾಜು 2 ಲಕ್ಷ ಜನ ಬರುವ ಸಾಧ್ಯತೆ ಇರುವುದರಿಂದ ನಿರಂತರ ಕುಡಿಯುವ ನೀರು ಸರಬರಾಜು, ಶೌಚಾಲಯಗಳು, ಆರೋಗ್ಯ ತಪಾಸಣಾ ಕೇಂದ್ರಗಳು, ಅಂಬುಲೆನ್ಸ್ , ಅಗ್ನಿಶಾಮಕ ವಾಹನಗಳು ವ್ಯವಸ್ಥಿತವಾಗಿ ಇರುವಂತೆ ನೋಡಿಕೊಳ್ಳಬೇಕು. ದುರ್ಗಾಂಭಿಕ ದೇವಿಯ ರಥ ಸಂಚರಿಸುವ ಸ್ಥಳ ಮತ್ತು ದೇವಸ್ಥಾನದ ಸುತ್ತಮುತ್ತಲು ಗುಂಡಿಗಳನ್ನು ಮುಚ್ಚಬೇಕು.

ಚರಂಡಿಗಳನ್ನು ಸ್ವಚ್ಚಗೊಳಿಸಬೇಕು, ಜನದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸುರಕ್ಷತೆ ಮತ್ತು ಸ್ವಚ್ಚತೆಗೆ ಹೆಚ್ಚು ಆದ್ಯತೆಯನ್ನು ನೀಡುವಂತೆ ತಿಳಿಸಿದರು. ದೇವಸ್ಥಾನದ ಸುತ್ತಮುತ್ತಲು, ಪ್ರಸಾದ ತಯಾರಿಸುವ ಸ್ಥಳದಲ್ಲಿ, ದೇವಸ್ಥಾನದ ಪ್ರವೇಶ ದ್ವಾರಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ, ಸುಗಮ ಸಂಗೀತ, ಕ್ರೀಡೆಗಳು ಮತ್ತು ಅಗತ್ಯವಿರುವ ಸ್ಥಳದಲ್ಲಿ ಸಿಸಿಟಿವಿಗಳನ್ನು ಕಡ್ಡಾಯವಾಗಿ ಅಳವಡಿಸಿ ನಿಗಾವಹಿಸಬೇಕು ಎಂದರು.

Share

Leave a comment

Leave a Reply

Your email address will not be published. Required fields are marked *