ದಾವಣಗೆರೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟಿಕೆಟ್ ಕೇಳಲು ಎಲ್ಲರಿಗೂ ಹಕ್ಕಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ಮುಸ್ಲಿಂರು, ಅಹಿಂದ, ಲಿಂಗಾಯತರು ಹಾಗೂ ಶಾಮನೂರು ಶಿವಶಂಕರಪ್ಪ ಕುಟುಂಬದವರು ಟಿಕೆಟ್ ಕೇಳಿದರೆ ತಪ್ಪಿಲ್ಲ. ಶಾಮನೂರು ಕುಟುಂಬದವರಿಗೆ ಟಿಕೆಟ್ ನೀಡದಿದ್ದರೆ ನನ್ನ ಅಣ್ಣನಿಗೆ ಟಿಕೆಟ್ ನೀಡುವಂತೆ ಕೇಳಿದ್ದೇನೆ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: ವಾಣಿಜ್ಯ ತೆರಿಗೆ ಇಲಾಖೆಯಿಂದ ವರ್ಷಕ್ಕೆ 372 ಕೋಟಿ ರೂ. ತೆರಿಗೆ ಸಂಗ್ರಹ ಗುರಿ: ಸಣ್ಣ ಸಣ್ಣ ಅಡಿಕೆ ವ್ಯಾಪಾರಿಗಳ ವಾಹನ ತಡೆದು ವಿಧಿಸಲಾಗ್ತಿದೆ ಟ್ಯಾಕ್ಸ್!
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಎಸ್. ಎಸ್. ಗಣೇಶ್ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಲಿ ಎಂದು ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಹೇಳಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಎಸ್. ಎಸ್. ಗಣೇಶ್ ಅವರು ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದರೆ ಅಭ್ಯರ್ಥಿ ಕಣಕ್ಕಿಳಿಸಲ್ಲ ಎಂದು ರವೀಂದ್ರನಾಥ್ ಅವರು ಹೇಳಲಿ. ಅವಿರೋಧವಾಗಿ ಆಯ್ಕೆ ಮಾಡಲು ಬಿಜೆಪಿಯವರು ಅವಕಾಶ ಮಾಡಿಕೊಡಲಿ. ಈ ಬಗ್ಗೆ ತೀರ್ಮಾನ ತೆಗೆದುಕೊಂಡು ಬಿಡೋಣ ಎಂದು ಹೇಳಿದರು.
ಮಕರ ಸಂಕ್ರಾಂತಿ ಬಳಿಕ ರಾಜ್ಯದಲ್ಲಿನ ನಾಯಕತ್ವ ಬದಲಾವಣೆ ವಿಚಾರ ಕುರಿತಂತೆ ಮಾತನಾಡುತ್ತೇನೆ. ಈಗ ಏನೂ ಮಾತನಾಡುವುದಿಲ್ಲ. ಸೂರ್ಯ ಪಥ ಬದಲಿಸುತ್ತಾನೆ. ಪಥ ಬದಲಿಸಿದ ಬಳಿಕ ಒಳ್ಳೆಯದಾಗಲಿದೆ ಎಂದು ಪುನರುಚ್ಚರಿಸಿದ ಅವರು, ಜನವರಿ 16ರ ಬಳಿಕ ಈ ಬಗ್ಗೆ ಮಾತನಾಡುತ್ತೇನೆ ಎಂದು ಶಿವಗಂಗಾ ಬಸವರಾಜ್ ತಿಳಿಸಿದರು.
- Basavaraju V. Shivaganga
- Basavaraju V. Shivaganga Congress Mla
- Basavaraju V. Shivaganga News
- Basavaraju V. Shivaganga Talk
- Mla
- ಚನ್ನಗಿರಿ ಕಾಂಗ್ರೆಸ್ ಶಾಸಕ
- ಬಸವರಾಜ್ ವಿ. ಶಿವಗಂಗಾ
- ಬಸವರಾಜ್ ವಿ. ಶಿವಗಂಗಾ ಗರಂ
- ಬಸವರಾಜ್ ವಿ. ಶಿವಗಂಗಾ ನ್ಯೂಸ್
- ಬಸವರಾಜ್ ವಿ. ಶಿವಗಂಗಾ ಮಾತು
- ಬಸವರಾಜ್ ವಿ. ಶಿವಗಂಗಾ ಸಿಟ್ಟು
- ಬಸವರಾಜ್ ವಿ. ಶಿವಗಂಗಾ- ಚನ್ನಗಿರಿ ಕಾಂಗ್ರೆಸ್ ಶಾಸಕ





Leave a comment