ದಾವಣಗೆರೆ: ಹಾಸ್ಟೆಲ್ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ಅನೇಕ ಶಿಫಾರಸುನೊಂದಿಗೆ ಆಗಮಿಸುತ್ತಿದ್ದು ಯಾವುದೇ ಅರ್ಹ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶದಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕೆಂದು ಬಿಸಿಎಂ ಇಲಾಖೆ ಅಧಿಕಾರಿಗಳಿಗೆ
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸೂಚನೆ ನೀಡಿದರು.
ಅವರು ಜಿಲ್ಲಾ ಪಂಚಾಯತ್‍ನಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಮಾತನಾಡಿದ ಮಾಯಕೊಂಡ ಶಾಸಕ ಕೆ. ಎಸ್. ಬಸವಂತಪ್ಪ ಸಭೆಯಲ್ಲಿ ಪ್ರಸ್ತಾಪಿಸಿದರು.
ಬಸವಾಪಟ್ಟಣ ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿಗಳ ಊಟಕ್ಕೆ ಗುತ್ತಿಗೆದಾರರು ಬಸ್‍ನಲ್ಲಿ ಅಡುಗೆ ಸಾಮಗ್ರಿ ಕಳುಹಿಸಿದಲ್ಲಿ ಮಾತ್ರ ಊಟ, ಇಲ್ಲವೆಂದರೆ ಇಲ್ಲ. ಆ ಬಸ್‍ಗಾಗಿ ಮಕ್ಕಳು ಕಾಯುತ್ತಿರುತ್ತಾರೆ. ವಾರ್ಡನ್ ಸ್ಥಳೀಯವಾಗಿ ಅಂಗಡಿಯಿಂದ ಸಾಮಗ್ರಿ ಖರೀದಿ ಮಾಡಿ ಹಾಸ್ಟೆಲ್ ನಡೆಸುತ್ತಾರೆ. ಆದರೆ ಆಹಾರ ಪೂರೈಕೆಯಾಗಿ ಟೆಂಡರ್ ಕರೆದಿದ್ದರೂ ಎಲ್ಲೊ ಕುಳಿತು ಕಾಗದದಲ್ಲಿ ವ್ಯವಹಾರ ಮಾಡುತ್ತಿರುತ್ತಾರೆ. ಇದು ಎಲ್ಲಾ ಇಲಾಖೆಗಳ ಹಾಸ್ಟೆಲ್‍ನಲ್ಲಿ ನಡೆಯುತ್ತಿದೆ. ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆದು ಟೆಂಡರ್ ದಾರರೇ ಸಾಮಗ್ರಿ ಹಾಸ್ಟೆಲ್‍ಗೆ ನೀಡುವಂತಾಗಬೇಕೆಂದರು.





Leave a comment