ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಎಸ್ಪಿ ಉಮಾ ಪ್ರಶಾಂತ್ ಅವರು ಫೋನ್ ಇನ್ ಕಾರ್ಯಕ್ರಮ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ಕರೆಗಳು ಬಂದಿದ್ದು, ಜಿಲ್ಲೆಯ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.
ದಾವಣಗೆರೆ ಜನರ ದೂರುಗಳೇನು?
ದಾವಣಗೆರೆ ನಗರದ ಆಂಜನೇಯ ಬಡಾವಣೆ ನಿವಾಸಿಯೊಬ್ಬರು ಕರೆ ಮಾಡಿ ಮಾತನಾಡಿದರು. ದಾವಣಗೆರೆ ನಗರದ ಅನುಭವ ಮಂಟಪ ಶಾಲೆ -ಕಾಲೇಜು, ಕಾಲೇಜುಗಳ ಹತ್ತಿರ ಕೆಲವು ಯುವಕರು ಕಾರುಗಳಲ್ಲಿ ಕುಳಿತುಕೊಂಡು ರಾತ್ರಿ 9 ಗಂಟೆಯಿಂದ ಡ್ರಿಂಕ್ಸ್ ಮಾಡುತ್ತಾರೆ. ಕಾರಿನಲ್ಲಿ ಕುಳಿತುಕೊಂಡು ಫುಡ್ ಆರ್ಡರ್ ಮಾಡಿ ತಿನ್ನುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಈ ಭಾಗದಲ್ಲಿ ಕೆಲವು ಹುಡುಗ ಹುಡುಗಿಯರು ಅನೈತಿಕ ಚಟುವಟಿಕೆಗಳು ಕೂಡ ಮಾಡುತ್ತಾರೆ ಎಂದು ದೂರು ಹೇಳಿದರು.
READ ALSO THIS STORY: ಆತ್ಮಹತ್ಯೆಗೆ ಯತ್ನಿಸಿದ್ದ ಚಂದ್ರಶೇಖರ್ ಸಂಕೊಳ್ ಪುತ್ರಿ ಹಾಗೂ ಪುತ್ರನ ಸ್ಥಿತಿ ಈಗ ಹೇಗಿದೆ?
ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಉಮಾ ಪ್ರಶಾಂತ್ ಅವರು, ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ದಾವಣಗೆರೆ ನಗರದ ಕೆಬಿ ಬಡಾವಣೆ ವ್ಯಕ್ತಿಯೊಬ್ಬರು ಕರೆ ಮಾಡಿ ಮಾತನಾಡಿ ನನಗೆ ವಯಸ್ಸಾಗಿದೆ ನಾಲ್ಕು ಲಕ್ಷ ಹಣ ನೀಡಿದ್ದೇನೆ. ಒಬ್ಬ ವ್ಯಕ್ತಿ ಚೆಕ್ಕ್ಕು ಕೊಟ್ಟು ತೆಗೆದುಕೊಂಡು ಹೋಗಿದ್ದಾನೆ. ಆದರೆ ಈ ಹಣ ಇನ್ನು ವಾಪಸ್ಸು ಕೊಟ್ಟಿಲ್ಲ. ಈ ಸಮಸ್ಯೆಯನ್ನು ಪರಿಹಾರ ಮಾಡಕೊಡಬೇಕು ಎಂದು ಕೋರಿದರು. ಇದಕ್ಕೆ ಎಸ್ಪಿ ಅವರು,ಇದು ಸಿವಿಲ್ ವ್ಯಾಜ್ಯವಾಗಿರುತ್ತದೆ. ಆದರೂ ಕೂಡ ನೀವು ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿ, ಕ್ರಿಮಿನಲ್ ಪ್ರಕರಣವಾಗಿದ್ದರೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ದಾವಣಗೆರೆ ನಗರದ ನಿಟ್ಟುವಳ್ಳಿಯಲ್ಲಿರುವ ರಾಷ್ಟ್ರೋತ್ಥಾನ ಸ್ಕೂಲ್ ಮುಖ್ಯ ಗೇಟ್ ಹತ್ತಿರ ಹಾದು ಹೋಗುವ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಟ್ರಾಫಿಕ್ ದಟ್ಟಣೆ ಉಂಟಾಗಿ ಶಾಲಾ ಮಕ್ಕಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಗಮನಕ್ಕೆ ತಂದರು. ನಂತರ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿಈ ಬಗ್ಗೆ ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದರು.
ದಾವಣಗೆರೆ ತಾಲೂಕು ಬಸವಾಪುರ ಗ್ರಾಮದ ನಿವಾಸಿಯೊಬ್ಬರು ಕರೆ ಮಾಡಿ ಮಾತನಾಡಿ ನಾನು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದಾಗ ದಾವಣಗೆರೆ ನಗರದ ಹದಡಿ ರಸ್ತೆಯ ಸರ್ ಎಂ ವಿ ಕಾಲೇಜು ಹತ್ತಿರ ಟ್ರಾಫಿಕ್ ಪೊಲೀಸರು ನನ್ನ ಗಾಡಿಯನ್ನು ಹಿಡಿದು ಫೈನ್ ಹಾಕಿದರು. ನಾನು ನಂತರ ಫೈನ್ ಅಮೌಂಟ್ ಅನ್ನು ಕಟ್ಟುವುದಾಗಿ ತಿಳಿಸಿದಾಗ ವೈಯಕ್ತಿಕವಾಗಿ ನಿನಗೆ ಯೋಗ್ಯತೆ ಇಲ್ಲ ಎಂದು ನಿಂದನೆ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ ಎಂದು ನೊಂದು ನುಡಿದರು.
ನಂತರ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ: ಈ ಬಗ್ಗೆ ಸದರಿ ಪೊಲೀಸ್ ಸಿಬ್ಬಂದಿಗಳ ಮೇಲೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ದಾವಣಗೆರೆ ನಗರನಿವಾಸಿ ಕರೆ ಮಾಡಿ ಮಾತನಾಡಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ420 ಕಲಂ ಅಡಿ ಕಂಪ್ಲೇಂಟ್ ಆಗಿದೆ. ಕೋರ್ಟ್ ನಿಂದ ಸಮನ್ಸ್ ಬಂದರೂ ಕೂಡಾ ಪೊಲೀಸರು ಅಪರಾಧಿಗೆ ಸಮನ್ಸ್ ಜಾರಿ ಮಾಡುತ್ತಿಲ್ಲ ಎಂದರು. ನಂತರ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿರುತ್ತಾರೆ.
ದಾವಣಗೆರೆ ನಗರದ ರಾಜೀವ್ ಗಾಂಧಿ ಬಡಾವಣೆ ನಿವಾಸಿ ಮಹಿಳೆ ಕರೆ ಮಾಡಿ ಮಾತನಾಡಿ ನಗರದ ವಿಜಯನಗರ ಬಡಾವಣೆಯಲ್ಲಿ 30 * 40 ಸೈಟ್ ಇದೆ. ಯಾರೋ ಬಂದು ಈ ಸೈಟಿಗೆ ಬೋರ್ಡ್ ಹಾಕಿದ್ದಾನೆ. ಕರೆ ಮಾಡಿ ಸೆಟಲ್‌ಮೆಂಟ್ ಮಾಡಿಕೊಳ್ಳೋಣ ಎಂದು ಬೆದರಿಕೆ ಹಾಕುತ್ತಿದ್ದಾನೆ. ಈ ಬಗ್ಗೆ ದಿನಾಂಕ 05/01/2026 ರಂದು ದಾವಣಗೆರೆ ಎಸ್ಪಿ ಕಚೇರಿಯ ಟಪಾಲ್ ಗೆ ಅರ್ಜಿ ನೀಡಿದ್ದೇವೆ ಎಂದು ಹೇಳಿದರು.
ನಂತರ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ: ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಪೊಲೀಸ್ ಠಾಣೆಗೆ ದೂರು ನೀಡಿ. ನಾನು ಮಾತನಾಡುತ್ತೇನೆ ಎಂದರು.
ದಾವಣಗೆರೆ ನಗರದ ಜಯನಗರ B. Block ನ ವ್ಯಕ್ತಿಯೊಬ್ಬರು ಕರೆ ಮಾಡಿ ಮಾತನಾಡಿ 2022 ರಲ್ಲಿ ದಾವಣಗೆರೆ ನಗರದ ಕೆಟಿಜೆ ಪೊಲೀಸ್ ಠಾಣಾ ವ್ಯಾಪ್ತಿಯ ಜಯ ನಗರ ಬಿ ಬ್ಲಾಕ್ ನಲ್ಲಿ ಬಂಗಾರ ಕಳ್ಳತನವಾಗಿತ್ತು. ಇತ್ತೀಚಿಗೆ ಅಂತರ್ ರಾಜ್ಯ ಕಳ್ಳರು ಸಿಕ್ಕಿದ್ದಾರೆ ಹಾಗೂ ಬಂಗಾರ ಸಿಕ್ಕಿದೆ ಎಂದು ಹೇಳುತ್ತಾರೆ ಆದರೆ ನನಗೆ ಇನ್ನೂ ಬಂಗಾರ ತಲುಪಿಲ್ಲ ಎಂದು ಹೇಳಿದರು.
ನಂತರ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ: ನಿಮ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ರಾಜ್ಯ ಕಳ್ಳರು ಸಿಕ್ಕಲ್ಲಿ ಖಂಡಿತ ನೀವು ಕಳೆದುಕೊಂಡ ಬಂಗಾರವನ್ನು ಹಿಂದಿರುಗಿಸಲಾಗುವುದು . ಈ ಬಗ್ಗೆ ನಿಮಗೆ ಖಂಡಿತ ಮಾಹಿತಿ ನೀಡಲಾಗುತ್ತದೆ ಎಂದರು.
ದಾವಣಗೆರೆ ನಗರದ ತರಳಬಾಳು ನಗರದ ನಿವಾಸಿ ಕರೆ ಮಾಡಿ ಮಾತನಾಡಿ ಪ್ರತಿದಿನ ಸಂಜೆ ನಾಲ್ಕು ಗಂಟೆಯಿಂದ ಅಪ್ರಾಪ್ತ ಮಕ್ಕಳು ಬೈಕುಗಳನ್ನ ಓಡಿಸುತ್ತಿದ್ದಾರೆ. ಪೋಷಕರು ಅವರ ಕೈಲಿ ಬೈಕ್ ಗಳನ್ನು ಕೊಡುತ್ತಿದ್ದಾರೆ. ಜೋರಾಗಿ ಸೌಂಡ್ ಮಾಡೋದು ಹಾಗೂ ಜೋರಾಗಿ ಬೈಕ್ ಗಳನ್ನು ಹೊಡಿಸುವುದು ಮಾಡುತ್ತಿರುತ್ತಾರೆ. ಇದರಿಂದ ಅಪಘಾತಗಳು ಉಂಟಾಗುತ್ತಿರುತ್ತವೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುತ್ತದೆ ಎಂದು ಎಸ್ಪಿ ಗಮನಕ್ಕೆ ತಂದರು. ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ: ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದಾವಣಗೆರೆ ನಗರದ ವ್ಯಕ್ತಿ ಒಬ್ಬರು ಕರೆ ಮಾಡಿ ಮಾತನಾಡಿ ನನ್ನ ಟು ವೀಲರ್ ಫ್ರಾಡ್ ಆಗಿದೆ. ಪ್ರತಿ ತಿಂಗಳು ನೋಟಿಸ್ ಬರುತ್ತಿದೆ. ಮುಂದಿನ process ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ ಎಂದರು. ಇದಕ್ಕೆ ಎಸ್ಪಿ ಅವರು ಈಗಾಗಲೇ ಎಫ್ಐಆರ್ ಹಾಗಿದೆ. ಈ ಪ್ರಕರಣವನ್ನು ದಾವಣಗೆರೆ ಸಿಟಿ ಡಿವೈಎಸ್ಪಿ ರವರು ತನಿಖೆ ಕೈಗೊಳ್ಳುತ್ತಾರೆ ಎಂದರು.
ದಾವಣಗೆರೆ ತಾಲ್ಲೂಕು ಅವರಗೊಳ್ಳ ಗ್ರಾಮ ಪಂಚಾಯ್ತಿ ಸದಸ್ಯರವರು ಕರೆ ಮಾಡಿ ಮಾತನಾಡಿ ನಮ್ಮ ಗ್ರಾಮದ ಅಂಗನವಾಡಿ ಶಾಲೆಗಳ ಮೈದಾನಗಳಲ್ಲಿ ರಾತ್ರಿ ಸಂಜೆ 7 ರಿಂದ 9 ಗಂಟೆಯ ನಂತರ ಕೆಲ ಯುವಕರು ಡ್ರಿಂಕ್ಸ್ ಮಾಡುವುದು, ಸಿಗರೇಟ್ ಸೇವನೆ ಮಾಡುವುದನ್ನು ಮಾಡುತ್ತಿರುತ್ತಾರೆ ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುತ್ತದೆ ಎನ್ನುವ ದೂರಿಗೆ ಪೊಲೀಸ್ ಅಧೀಕ್ಷಕರು ಮಾತನಾಡಿ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು
ಎಂದು ತಿಳಿಸಿರುತ್ತಾರೆ.
ದಾವಣಗೆರೆ ನಗರ ನಿವಾಸಿಯೊಬ್ಬರು ಕರೆ ಮಾಡಿ ಮಾತನಾಡಿ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿರುವ ಚಾಮುಂಡಿ ಬಾರ್ ಮತ್ತು ರೆಸ್ಟೋರೆಂಟ್ ಗೆ ಬರುವ ಮದ್ಯಪಾನ ಮಾಡುವವರು. ಎಲ್ಲಿಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದನ್ನು ಪ್ರಶ್ನೆ ಮಾಡಿದರೆ ಬಾರ್ ಮಾಲೀಕರು ಉಡಾಫೆ ಉತ್ತರ ಕೊಡುತ್ತಾರೆ. ಈ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯವರ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ನಂತರ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ: ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ದಾವಣಗೆರೆ ತಾಲೂಕಿನ ರಾಂಪುರ ಗ್ರಾಮದ ವ್ಯಕ್ತಿ ಕರೆ ಮಾಡಿ ಮಾತನಾಡಿ ದಾವಣಗೆರೆ ತಾಲೂಕಿನ ಜಗಳೂರು ರಸ್ತೆಯಲ್ಲಿ ಬರುವ ಗ್ರಾಮಗಳಾದ ರಾಂಪುರ, ಜಗಳೂರು ರಸ್ತೆ, ಹಾಗೂ ನಾಗರಕಟ್ಟೆ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಅವರು ಅಕ್ರಮ ಮದ್ಯ ಮಾರಾಟ ಪೋಲಿಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಗೆ ಬರುತ್ತದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ದಾವಣಗೆರೆ ನಗರದ ವ್ಯಕ್ತಿಯೊಬ್ಬರು ಕರೆ ಮಾಡಿ ಮಾತನಾಡಿ ದಾವಣಗೆರೆ ನಗರದ ಎಸಿ ಸರ್ಕಲ್ ಬಳಿ ತುಂಬಾ ಟ್ರಾಫಿಕ್ ಜಾಮ್ ಆಗುತ್ತಿದೆ. ಸಿಗ್ನಲ್ ಇದ್ರೂ ಕೂಡ ವಾಹನಗಳನ್ನು ಪಾಸ್ ಮಾಡುತ್ತಿದ್ದಾರೆ. ವಿನೋಬ ನಗರದ ಎರಡನೇ ಮೈನ್, 11ನೇ ಕ್ರಾಸ್ ನಲ್ಲಿ ಆಟೋದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ. ರಾತ್ರಿ 1 ಗಂಟೆಯಿಂದ 2 ಗಂಟೆಯವರೆಗೆ ಇದು ನಡೆಯುತ್ತದೆ ಎಂದು ತಿಳಿಸಿರುತ್ತಾರೆ.
ನಂತರ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ ಟ್ರಾಫಿಕ್ ದಟ್ಟಣೆ ಆಗುತ್ತಿರುವ ಬಗ್ಗೆ ಹೆಚ್ಚಿನ ಗಮನಹರಿಸಿ ಈ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದರು. ಗಾಂಜಾ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯಿದ್ದಲ್ಲಿ ನೀಡಿ . ಗಾಂಜಾ ಚಟುವಟಿಕೆಗಳ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ದಾವಣಗೆರೆ ನಗರದ ಪೊಲೀಸ್ ಲೇಔಟ್ ನ ಮಹಿಳೆ ಒಬ್ಬರು ಕರೆ ಮಾಡಿ ಮಾತನಾಡಿ ಪೋಲಿಸ್ ನವರು ನಮ್ಮ ಭಾಗಕ್ಕೆ ರಾತ್ರಿ ಮತ್ತು ಹಗಲು ಗಸ್ತು ಮಾಡಲು ಬರುತ್ತಿಲ್ಲ ಹಾಗೂ ಮನೆ ಮನೆ ಪೊಲೀಸ್ ಕೂಡ ಬರ್ತಾ ಇಲ್ಲ ಎಂದರು. ನಂತರ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ ನೀವು ಮನೆಯಲ್ಲಿ ಇಲ್ಲದೇ ಇದ್ದಾಗ ಅವರು ಬಂದು ಹೋಗಿರಬಹುದು. ಹಾಗಾಗಿ ನಾವು ಇನ್ನೊಮ್ಮೆ ಕೂಡ ಈ ಬಗ್ಗೆ ಪರಿಶೀಲನೆ ಮಾಡಿ ನಿಮ್ಮ ಪೊಲೀಸ್ ಲೇಔಟ್ ಗೆ ಪೊಲೀಸ್ ಗಸ್ತು ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ದಾವಣಗೆರೆ ಕೆಟಿಜೆ ನಗರ ವಾಸಿಯೊಬ್ಬರು ಕರೆ ಮಾಡಿ ಮಾತನಾಡಿ ದಾವಣಗೆರೆ ನಗರದಲ್ಲಿ ಕೆಲ ಹುಡುಗರು ತುಂಬಾ ರಫ್ ಅಂಡ್ ಟಫ್ ವರ್ತಿಸುತ್ತಾರೆ, ತುಂಬಾ ದಾಂಧಲೆ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿರುತ್ತಾರೆ. ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ: ದಾಂಧಲೆ ನಡೆಸುವವರ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿರುತ್ತಾರೆ.
ದಾವಣಗೆರೆ ನಗರದ ರಾಜೀವ್ ಗಾಂಧಿ ಬಡಾವಣೆಯ ವ್ಯಕ್ತಿ ಒಬ್ಬರು ಕರೆ ಮಾಡಿ ಮಾತನಾಡಿ:ರಾಜೀವ್ ಗಾಂಧಿ ಬಡಾವಣೆಯ ಮಹಾನಗರ ಪಾಲಿಕೆಯ ಕಚೇರಿ ಹತ್ತಿರ ಕುರಿ ಶೇಡ್ ನಲ್ಲಿ 20 ಜನ ಜೂಜು ಕಟ್ಟಿ ಚಾವಿ ಆಟ ಆಡುತ್ತಿದ್ದಾರೆ. ನಂತರ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ: ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುತ್ತಾರೆ.
ದಾವಣಗೆರೆ ನಗರದ ರಾಮನಗರದ ವ್ಯಕ್ತಿ ಒಬ್ಬರು ಕರೆ ಮಾಡಿ ಮಾತನಾಡಿ ದಾವಣಗೆರೆ ನಗರದ ಎಸ್ಎಸ್ ಹೈಟೆಕ್ ಆಸ್ಪತ್ರೆ ಪಕ್ಕದ ರಸ್ತೆಯಾದ ಎನ್ಸಿಸಿ ಕಚೇರಿ ಹಾಗೂ ಕೆಎಸ್ಆರ್‌ಟಿಸಿ ಡಿಪೋಗಳ ಮಧ್ಯೆ ಹೋಗುವ ರಸ್ತೆಯಲ್ಲಿ ವೇಗವಾಗಿ ಬಸ್ಸುಗಳು ಮತ್ತು ವಾಹನಗಳು ಸಂಚಾರ ಮಾಡುತ್ತಿರುತ್ತವೆ. ಇದರಿಂದ ಈ ಮಾರ್ಗದಲ್ಲಿ ಹೋಗುವ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಹಾಗಾಗಿ ಸ್ಪೀಡ್ ಬ್ರೆಕರ್ ಗಳನ್ನ ಹಾಕಿ ಎಂದರು. ನಂತರ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ: ಸ್ಪೀಡ್ ಬ್ರೇಕರ್ಗಳ ಅಳವಡಿಕೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ (PWD) ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುತ್ತಾರೆ.
ದಾವಣಗೆರೆ ನಗರ ವಾಸಿ ಕರೆ ಮಾಡಿ ಮಾತನಾಡಿ :ದಾವಣಗೆರೆ ನಗರದಲ್ಲಿ ನಂಬರ್ ಇಲ್ಲದೆ ಅತಿ ವೇಗವಾಗಿ ವಾಹನಗಳನ್ನು ಚಲನೆ ಮಾಡಲಾಗುತ್ತದೆ. ವಯಸ್ಕರು ಅಂತ ನೋಡುವುದಿಲ್ಲ ಎಂದು ತಿಳಿಸಿರುತ್ತಾರೆ. ನಂತರ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ: ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸುತ್ತಾರೆ.
ದಾವಣಗೆರೆ ಕೆಟಿಜೆ ನಗರ ವಾಸಿಯೊಬ್ಬರು ಕರೆ ಮಾಡಿ ಮಾತನಾಡಿ ದಾವಣಗೆರೆ ನಗರದಲ್ಲಿ ಕೆಲ ಹುಡುಗರು ತುಂಬಾ ರಫ್ ಅಂಡ್ ಟಫ್ ವರ್ತಿಸುತ್ತಾರೆ, ತುಂಬಾ ದಾಂಧಲೆ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿರುತ್ತಾರೆ. ನಂತರ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ, ದಾಂಧಲೆ ನಡೆಸುವವರ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿರುತ್ತಾರೆ.
ದಾವಣಗೆರೆ ಕೆಟಿಜೆ ನಗರ ವಾಸಿ ಕರೆ ಮಾಡಿ ಮಾತನಾಡಿ ನನ್ನ ಮೊಬೈಲ್ ಏಳು ತಿಂಗಳ ಹಿಂದೆ ಕಳೆದುಹೋಗಿದೆ ಆದರೆ ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಿರುತ್ತಾರೆ. ನಂತರ ಪೊಲೀಸ್ ವರಿಷ್ಠಾಧಿಕಾರಿಗಳು ಮಾತನಾಡಿ CEIR ಪೋರ್ಟ್ ನಲ್ಲಿ ರಿಜಿಸ್ಟರ್ ಮಾಡಿದ್ದೀರಾ ? ರಿಜಿಸ್ಟರ್ ಮಾಡಿದ್ದಲ್ಲಿ ಪತ್ತೆಯಾದ ತಕ್ಷಣ ನಿಮಗೆ ನೀಡಲಾಗುವುದು. ಆದರೆ ಪತ್ತೆಯಾಗಲು ಮೊದಲು ಆ ಫೋನ್ ಆನ್ ಆಗಬೇಕು ಎಂದರು. ಪತ್ತೆಯಾದಲ್ಲಿ ನಿಮಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿರುತ್ತಾರೆ.
ಫೋನ್ ಇನ್ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಡಿಪಿಒ ಡಿಎಸ್ ಬಿ ಪಿಐ ಕಿರಣ್ ಕುಮಾರ್, ಪೊಲೀಸ್ ಇನ್ ಸ್ಪೆಕ್ಟರ್ ಲಿಂಗನಗೌಡ ನೆಗಳೂರು, ರವೀಂದ್ರ ಕಾಲಭೈರವ ಮತ್ತಿತರರು ಹಾಜರಿದ್ದರು.





Leave a comment