ದಾವಣಗೆರೆ: ದಾವಣಗೆರೆ ತಾಲೂಕಿನ ನಾಗನೂರು ಸಮೀಪದ ಬಿಸ್ಲೇರಿ ಗ್ರಾಮದ ಜಮೀನಿನಲ್ಲಿ ಕಾರ್ ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಬಿಜೆಪಿ ಮುಖಂಡ ಚಂದ್ರಶೇಖರ್ ಸಂಕೊಳ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಪುತ್ರಿ ಹಾಗೂ ಪುತ್ರನೂ ಆತ್ಮಹತ್ಯೆಗೆ ಯತ್ನಿಸಿದ್ದರು. ಇವರಿಬ್ಬರ ಆರೋಗ್ಯ ಸುಧಾರಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
READ ALSO THIS STORY: EXCLUSIVE: ಶಾಸಕನಾಗಿ ಜನಸೇವೆ ಮಾಡ್ಬೇಕೆಂಬ ಕನಸು ಕಂಡಿದ್ದ ನೀರು ಕೊಟ್ಟ ಭಗೀರಥ ಚಂದ್ರಶೇಖರ್ ಸಂಕೊಳ್ ಸಾಲದ ಸುಳಿಗೆ ಸಿಲುಕಿದ್ದೇಗೆ? ಮಕ್ಕಳು ಆತ್ಮಹತ್ಯೆ ಯತ್ನ ಮಾಡಿದ್ಯಾಕೆ?
ಚಂದ್ರಶೇಖರ್ ಸಂಕೊಳ್ ಪುತ್ರ 20 ವರ್ಷದ ನರೇಶ್ ಸಂಕೊಳ್ ಹಾಗೂ 23 ವರ್ಷದ ಪವಿತ್ರಾ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ಇಬ್ಬರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪವಿತ್ರಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಾಗ ಸ್ಥಿತಿ ಗಂಭೀರವಾಗಿತ್ತು ಎಂದು ಹೇಳಲಾಗಿತ್ತು. ಈಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಇನ್ನು ಪುತ್ರ ನರೇಶ್ ಸಂಕೊಳ್ ಸಹ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇವರೂ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಸದ್ಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇಬ್ಬರೂ ಚೇತರಿಸಿಕೊಂಡಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಕುಟುಂಬಸ್ಥರಿಗೆ ವೈದ್ಯರು ಧೈರ್ಯ ಹೇಳಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಚಂದ್ರಶೇಖರ್ ಸಂಕೊಳ್ ಆತ್ಮಹತ್ಯೆ ಕೇಸ್ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಮಾಹಿತಿ ನೀಡಿದ್ದರು.
ಎಸ್ಪಿ ಉಮಾ ಪ್ರಶಾಂತ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಹದಡಿ ಪೊಲೀಸ್ ಠಾಣೆಗೆ ಬೆಳೆಗ್ಗೆ ಮಾಹಿತಿ ಬಂದಿದೆ. ಮನೆಯಲ್ಲಿ ಕಲಹ ಆಗಿದೆ, ತಂದೆ ಸಮಯ ಕೊಡ್ತಾ ಇಲ್ಲ ಎಂದು ಮಕ್ಕಳು ಬೇಸರಗೊಂಡಿದ್ದರು. ಮಾತನಾಡಬೇಕು ಬೇಗ ಬನ್ನಿ ಎಂದು ತಂದೆಗೆ ಫೋನ್ ಮಾಡಿದ್ದಾರೆ. ತಂದೆ ಮನೆಗೆ ಹೋಗುವುದು ತಡವಾಗಿದ್ದಕ್ಕೆ ಬೇಸರಗೊಂಡಿದ್ದರು ಎಂದು ತಿಳಿಸಿದ್ದರು.
ಈ ವೇಳೆ ತಾಯಿಗೆ ಆತ್ಮಹತ್ಯೆ ಮಾಡಿಕೊಳ್ಳೋಣ ಬನ್ನಿ ಎಂದು ಪುತ್ರ ಹಾಗೂ ಪುತ್ರಿ ಕರೆದಿದ್ದಾರೆ. ಆಗ ತಾಯಿ ಮಕ್ಕಳಿಗೆ ಬುದ್ದಿ ಹೇಳಿ ಕೆಳಗಡೆ ಬಂದಿದ್ದಾರೆ. ಮರಳಿ ಹೋಗುವಷ್ಟರಲ್ಲಿ ಪುತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದು ಕಂಡು ಬಂದಿದ್ದು, ತಕ್ಷಣ ಮಕ್ಕಳನ್ನು ಆಸ್ಪತ್ರೆ ರವಾನಿಸಲಾಗಿದೆ. ಮಕ್ಕಳ ಆತ್ಮಹತ್ಯೆ ವಿಷಯ ಕೇಳಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಇದೆ ಎಂದು ಉಮಾ ಪ್ರಶಾಂತ್ ಹೇಳಿದ್ದರು.







Leave a comment