Home ದಾವಣಗೆರೆ ಸೋನಿಯಾ ಗಾಂಧಿ ಆಹ್ವಾನಿಸಿ ದಾವಣಗೆರೆಯಲ್ಲಿ ಸಮಾವೇಶ ನಡೆಸಿದ್ದೆ, 15 ವರ್ಷ ಕಾಂಗ್ರೆಸ್ ಅಧ್ಯಕ್ಷನಾಗಿದ್ದ ನನಗೆ ಟಿಕೆಟ್ ಕೊಡಿ: ಅಬ್ದುಲ್ ಜಬ್ಬಾರ್
ದಾವಣಗೆರೆನವದೆಹಲಿ

ಸೋನಿಯಾ ಗಾಂಧಿ ಆಹ್ವಾನಿಸಿ ದಾವಣಗೆರೆಯಲ್ಲಿ ಸಮಾವೇಶ ನಡೆಸಿದ್ದೆ, 15 ವರ್ಷ ಕಾಂಗ್ರೆಸ್ ಅಧ್ಯಕ್ಷನಾಗಿದ್ದ ನನಗೆ ಟಿಕೆಟ್ ಕೊಡಿ: ಅಬ್ದುಲ್ ಜಬ್ಬಾರ್

Share
Share

ದಾವಣಗೆರೆ: 1999ರಲ್ಲಿ ದಾವಣಗೆರೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಆಹ್ವಾನಿಸಿ ಸಮಾವೇಶ ನಡೆಸಿದ್ದೇನೆ. ಆಗ ನಾನೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. 15 ವರ್ಷಗಳ ಕಾಲ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಪಕ್ಷ ಕಟ್ಟಿದ್ದೇನೆ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದೇನೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನನಗೆ ಟಿಕೆಟ್ ನೀಡಬೇಕು ಎಂಬುದು ನನ್ನ ಆಗ್ರಹ ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಹೇಳಿದ್ದಾರೆ.

READ ALSO THIS STORY: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್: ಅಲ್ಪಸಂಖ್ಯಾತರು ಇಲ್ಲವೇ ಅಹಿಂದ ವರ್ಗಕ್ಕೆ ಟಿಕೆಟ್ ನೀಡದಿದ್ದರೆ…!

ಪತ್ರಿಕಾಗೋಷ್ಠಿಯಲ್ಲಿ ಬಹಿರಂಗವಾಗಿಯೇ ನಾನೂ ಟಿಕೆಟ್ ಆಕಾಂಕ್ಷಿ ಎಂದ ಅವರು, ಪಕ್ಷಕ್ಕಾಗಿ ದಶಕಗಳಿಂದಲೂ ದುಡಿಯುತ್ತಿದ್ದೇನೆ. ಒಟ್ಟು ಮೂರು ಬಾರಿ ವಿಧಾನ ಪರಿಷತ್ ಸದಸ್ಯನಾಗಿದ್ದೇನೆ. ಈಗಲೂ ವಿಧಾನ ಪರಿಷತ್ ಸದಸ್ಯನೇ. ಎಂಎಲ್ಸಿ ಆದವರು ಎಂಎಲ್ ಎ ಆಗಬಾರದಾ ಎಂದು ಪ್ರಶ್ನಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂರು ಅಧಿಕ ಸಂಖ್ಯೆಯಲ್ಲಿದ್ದಾರೆ. ಅಹಿಂದ ವರ್ಗವೇ ಹೆಚ್ಚಿರುವ ಕ್ಷೇತ್ರ. ನನಗೆ ಟಿಕೆಟ್ ನೀಡಿ ಎಂದು ಕೇಳಿದ್ದೇನೆ. ಇಲ್ಲದಿದ್ದರೆ ಅಹಿಂದ ವರ್ಗದವರಿಗೆ ನೀಡಿ. ಮುಸ್ಲಿಂ ಸಮುದಾಯದ ಸಮರ್ಥರಿಗೆ ಟಿಕೆಟ್ ಕೊಟ್ಟರೂ ಬೇಸರವಿಲ್ಲ. ಆದರೆ ಒಂದೇ ಮನೆತನಕ್ಕೆ ಟಿಕೆಟ್ ನೀಡಬೇಕೆಂಬ ಕಾನೂನು ಎಲ್ಲಿಯೂ ಇಲ್ಲ. ಶಾಸಕರು ಮೃತಪಟ್ಟರೆ ಅವರ ಕುಟುಂಬದವರಿಗೆ ಟಿಕೆಟ್ ನೀಡಬೇಕೆಂಬ ಕಾನೂನು ಇಲ್ಲ. ಇದ್ದರೆ ಬದಲಾಯಿಸಲಿ. ಈಗಾಗಲೇ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಶಾಸಕರೂ ಆಗಿದ್ದಾರೆ, ಸಚಿವರೂ ಇದ್ದಾರೆ. ಅವರ ಪತ್ನಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ಅಧಿಕಾರದಲ್ಲಿದ್ದಾರೆ. ಪ್ರಾತಿನಿಧ್ಯ ಸಿಗದ ಸಮುದಾಯದವರಿಗೆ ಟಿಕೆಟ್ ನೀಡಲಿ ಎಂದು ಹೇಳಿದರು.

ಒಂದು ವೇಳೆ ಶಾಮನೂರು ಶಿವಶಂಕರಪ್ಪರ ಕುಟುಂಬದವರು ಅಧಿಕಾರದಲ್ಲಿ ಇಲ್ಲದಿದ್ದರೆ ಟಿಕೆಟ್ ನೀಡಬಹುದು. ಇದಕ್ಕೆ ಯಾರೂ ತಕರಾರಿಲ್ಲ. ಈಗಾಗಲೇ ಅಧಿಕಾರದಲ್ಲಿರುವುದರಿಂದ ಬೇರೆಯವರಿಗೂ ಆದ್ಯತೆ ನೀಡಲಿ. ಪಕ್ಷಕ್ಕಾಗಿ ಹಗಲಿರುಳು
ಶ್ರಮಿಸಿದ ಹಲವರಿದ್ದಾರೆ ಎಂದು ಅಬ್ದುಲ್ ಜಬ್ಬಾರ್ ಹೇಳಿದರು.

ಮಗನಿಗೆ, ಮಗಳಿಗೆ ಟಿಕೆಟ್ ನೀಡಬೆೇಕು ಎಂಬುದು ಸರಿಯಲ್ಲ. 2008ರಿಂದಲೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪರನ್ನು ಬೆಂಬಲಿಸುತ್ತಾ ಬಂದಿದ್ದೇವೆ. ಅವರು ಜಾತ್ಯಾತೀತ ನಾಯಕರಾಗಿದ್ದರು. ಈಗ ಸಮಯ
ಬಂದಿದೆ. ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಬೇಕೆಂಬ ಬೇಡಿಕೆ ನಮ್ಮದು. ಇಲ್ಲವಾದರೆ ಅಹಿಂದ ವರ್ಗಕ್ಕೆ ಬರುವ ಪಂಚಮಸಾಲಿ ಸಮಾಜ, ವಾಲ್ಮೀಕಿ, ಕುರುಬರು ಸೇರಿದಂತೆ ಇತರೆ ಸಮುದಾಯದವರಿಗೆ ಅವಕಾಶ ಮಾಡಿಕೊಡಲಿ
ಎಂದು ಆಗ್ರಹಿಸಿದರು.

ಶೇಕಡಾ 99ರಷ್ಟು ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ಅನ್ನು ಕಾಂಗ್ರೆಸ್ ಹೈಕಮಾಂಡ್ ನೀಡುತ್ತದೆ ಎಂಬ ಬಲವಾದ ವಿಶ್ವಾಸ ಇದೆ. ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಅಲ್ಪಸಂಖ್ಯಾತರು ಇಲ್ಲವೇ ಅಹಿಂದ ವರ್ಗಕ್ಕೆ ಟಿಕೆಟ್ ನೀಡದಿದ್ದರೆ ಆಗ
ಏನು ಮಾಡಬೇಕೆಂದು ಯೋಚನೆ ಮಾಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಅಬ್ದುಲ್ ಜಬ್ಬಾರ್ ಉತ್ತರಿಸಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles