ಬೆಂಗಳೂರು: ತಮಿಳುನಾಡಿನ ತಿರುಪರಕುಂದ್ರಂ ಬೆಟ್ಟದ ಮೇಲೆ ಕಾರ್ತಿಕ ದೀಪ ಹಚ್ಚಲು ಹಿಂದೂಗಳಿಗೆ ಅನುಮತಿ ನೀಡಲಾಗಿದೆ. ಜಡ್ಜ್ ಪದಚ್ಯುತಿಗೆ ಸಹಿ ಹಾಕಿದ್ದ ಕಾಂಗ್ರೆಸ್ ಎಂಪಿಗಳಿಗೆ ಭಾರೀ ಮುಖಭಂಗವಾಗಿದೆ ಎಂದು
ಬಿಜೆಪಿ ಕಿಡಿಕಾರಿದೆ.
ತಿರುಪರಕುಂದ್ರಂ ಬೆಟ್ಟದ ಮೇಲಿರುವ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಕಲ್ಲುಗಂಬದ ಮೇಲೆ ಕಾರ್ತಿಕ ದೀಪ ಹಚ್ಚಲು ಹಿಂದೂಗಳಿಗೆ ಅನುಮತಿ ನೀಡಿ ಮದ್ರಾಸ್ ಹೈಕೋರ್ಟ್‌ನ ಮಧುರೈ ವಿಭಾಗೀಯ ಪೀಠ ತೀರ್ಪು ನೀಡಿದೆ. ಈ ಮೂಲಕ ಏಕಸದಸ್ಯ ಪೀಠದ ತೀರ್ಪನ್ನು ಎತ್ತಿಹಿಡಿದಿದೆ. ಈ ಮೂಲಕ ಕಾರ್ತಿಕ ದೀಪ ಹಚ್ಚುವುದಕ್ಕೆ ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀ ಜಿ. ಆರ್. ಸ್ವಾಮಿನಾಥನ್ ಅವರನ್ನು ಪದಚ್ಯುತಿಗೊಳಿಸಬೇಕೆಂದು ಇಂಡಿ ಕೂಟವನ್ನು ಬೆಂಬಲಿಸಿ ಸಹಿ ಹಾಕಿದ್ದ ಕಾಂಗ್ರೆಸ್ ಸಂಸದರಿಗೆ ಭಾರೀ ಮುಖಭಂಗವಾಗಿದೆ ಎಂದು ತಿಳಿಸಿದೆ.
ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದೂಗಳ ನಂಬಿಕೆಯನ್ನು ನಿಕೃಷ್ಟವನ್ನಾಗಿ ಕಾಣುವ ಇಂಡಿ ಒಕ್ಕೂಟದ ಮಾನಸಿಕತೆಯನ್ನು ಕೋರ್ಟ್ ತೀಕ್ಷ್ಣವಾಗಿ ಖಂಡಿಸಿದೆ. ಸನಾತನ ಧರ್ಮ ವಿರೋಧಿ ನಿಲುವು ಹೊಂದಿರುವ ಕಾಂಗ್ರೆಸ್ ಹಾಗೂ ಇಂಡಿ ಒಕ್ಕೂಟಕ್ಕೆ ಈ ತೀರ್ಪಿನಿಂದ ಕಪಾಳಮೋಕ್ಷ ಮಾಡಿದಂತಾಗಿದೆ. ಹಿಂದೂಗಳ ನಂಬಿಕೆಯ ವಿರುದ್ಧ ಹೋದ ರಾಜ್ಯದ ಕಾಂಗ್ರೆಸ್ ಸಂಸದರಿಗೆ ಮುಂದಿನ ಚುನಾವಣೆಯಲ್ಲಿ ಹಿಂದೂ ಸಮಾಜ ಸರಿಯಾದ ಉತ್ತರ ನೀಡಲಿದೆ ಎಂದು ಬಿಜೆಪಿ ಎಕ್ಸ್ ನಲ್ಲಿ ಎಚ್ಚರಿಸಿದೆ.





Leave a comment