ದಾವಣಗೆರೆ: ನಗರದ ಹೆಸರಾಂತ ಸಾಂಸ್ಕೃತಿಕ ಮಹಿಳಾ ಸಂಘಟನೆಯಾದ ವಿನೂತನ ಮಹಿಳಾ ಸಮಾಜದ ನೂತನ ಅಧ್ಯಕ್ಷೆಯಾಗಿ ಹೇಮಾ ಗಣೇಶ್ ಶೇಟ್, ಕಾರ್ಯದರ್ಶಿಯಾಗಿ ಇಂದಿರಾ ರಂಗನಾಥ ರೆಡ್ಡಿ ಹಾಗೂ ಖಜಾಂಚಿಯಾಗಿ ಸುಧಾ ಪಾಟೀಲ್ ಆಯ್ಕೆಯಾಗಿದ್ದಾರೆ.
READ ALSO THIS STORY: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ “ಇಂಡಿಪೆಂಡೆಂಟ್” ಆಗಿ ಕಣಕ್ಕಿಳಿಯಲ್ಲ, “ಮತ್ತೇ…”?: ಜಿ. ಬಿ. ವಿನಯ್ ಕುಮಾರ್ ಸ್ಪೋಟಕ ಸಂದರ್ಶನ
ದಾವಣಗೆರೆ ನಗರದಲ್ಲಿ ಮಹಿಳೆಯರನ್ನು ಸಂಘಟಿಸುವುದರ ಮೂಲಕ ಅವರನ್ನು ಸಂಘಟನಾತ್ಮಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಸಬಲರಾಗಿಸುವ ಉದ್ದೇಶದಿಂದ ಸ್ಥಾಪನೆಗೊಂಡ ವಿನೂತನ ಮಹಿಳಾ ಸಮಾಜವು ಕಳೆದ 21 ವರ್ಷಗಳಿಂದ ತನ್ನ ವಿಶಿಷ್ಠ ಹಾಗೂ ವಿನೂತನ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ವಿನೂತನ ಮಹಿಳಾ ಸಮಾಜದ 2026 ರ ಸಾಲಿಗೆ ಇತರ ಪದಾಧಿಕಾರಿಗಳು ಸಹ ಇದೇ ಸಂದರ್ಭದಲ್ಲಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ರತ್ನ ಸಿ ರೆಡ್ಡಿ, ಸಹ ಕಾರ್ಯದರ್ಶಿಯಾಗಿ ಚಂದ್ರಿಕಾ ಮಂಜುನಾಥ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಪುಷ್ಪಾ ಬಸವರಾಜು, ಸುಕನ್ಯಾ ಬಸವರಾಜು, ಮಮತಾ ನಾಗರಾಜು, ಶಾಂತಾ ತಿಪ್ಪಣ್ಣ, ಭುವನಾ ಚಂದ್ರಶೇಖರ್ ಹಾಗೂ ಗೀತಾ ರಾಜಕುಮಾರ ರೆಡ್ಡಿ ಆಯ್ಕೆಯಾದರು.




Leave a comment