SUDDIKSHANA KANNADA NEWS/DAVANAGERE/DATE:05_01_2026
ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 128647 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯ ಕ್ಷೇತ್ರ ಆವರಿಸಿದ್ದು, ಕಟಾವಿನ ಹಂತ ಮುಕ್ತಾಯಗೊಂಡಿರುತ್ತದೆ.
ರೈತರು ಕಟಾವಾದ ಮೆಕ್ಕೆಜೋಳದ ತೆನೆಗಳನ್ನು ತಮ್ಮ ಕಣದಲ್ಲಿ ಸಂಗ್ರಹಿಸಿರುತ್ತಾರೆ. ಮೆಕ್ಕೆಜೋಳ ಒಕ್ಕಣೆ ಯಂತ್ರದ ಮಾಲೀಕರು ರೈತರಿಂದ ಅತಿ ಹೆಚ್ಚು ಬಾಡಿಗೆ ನಿಗದಿಪಡಿಸುತ್ತಿರುವುದು ಕಂಡು ಬಂದಿದೆ.
ಆದುದರಿಂದ ಒಂದು ಕ್ವಿಂಟಾಲ್ ಮೆಕ್ಕೆಜೋಳವನ್ನು ಒಕ್ಕಣೆ ಮಾಡಲು ರೂ. 80 ನಿಗದಿಪಡಿಸಲಾಗಿದೆ (ಒಕ್ಕಣೆ ಯಂತ್ರದ ಮಾಲೀಕರು ಕೂಲಿಕಾರರನ್ನು ಕರೆತಂದಾಗ) ಸದರಿ ದರವು ರೈತರೇ ಕೂಲಿಕಾರರನ್ನು ನಿಯೋಜಿಸಿದಾಗ ಕಡಿಮೆಯಾಗುತ್ತದೆ.
ಮೆಕ್ಕೆಜೋಳ ಒಕ್ಕಣೆ ಯಂತ್ರಗಳ ಮಾಲೀಕರು ರೈತರಿಂದ ಹೆಚ್ಚಿನ ದರ ಪಡೆದರೆ ಮೆಕ್ಕೆಜೋಳ ಒಕ್ಕಣೆ ಯಂತ್ರದ ಮಾಲೀಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು , ಮೆಕ್ಕೆಜೋಳ ಒಕ್ಕಣೆ ಯಂತ್ರದ ಮಾಲೀಕರು ಹೆಚ್ಚಿನ ದರ ನಿಗದಿಪಡಿಸಿದ್ದಲ್ಲಿ ರೈತರು ಕಂದಾಯ /ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Leave a comment