Home ಕ್ರೈಂ ನ್ಯೂಸ್ ಕೆಟಿಜೆ ನಗರದಲ್ಲಿ ಗಾಂಜಾ ಮಾರಾಟಕ್ಕೆ ಅಕ್ರಮ ಸಂಗ್ರಹ: ಇಬ್ಬರ ಬಂಧನ, ಗಾಂಜಾ ವಶ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಕೆಟಿಜೆ ನಗರದಲ್ಲಿ ಗಾಂಜಾ ಮಾರಾಟಕ್ಕೆ ಅಕ್ರಮ ಸಂಗ್ರಹ: ಇಬ್ಬರ ಬಂಧನ, ಗಾಂಜಾ ವಶ

Share
Share

SUDDIKSHANA KANNADA NEWS/DAVANAGERE/DATE:05_01_2026

ದಾವಣಗೆರೆ: ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟುಕೊಂಡಿದ್ದ ಗಾಂಜಾ ವಶಪಡಿಸಿಕೊಂಡಿರುವ ಕೆಟಿಜೆ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೆಟಿಜೆ ನಗರದ ರಾಕೇಶ್ ಕೆ.ಎಲ್. (21), ಶ್ರೀರಾಮ ಬಡಾವಣೆಯ ಖಾಜಾಮೊಹಿದ್ದೀನ್ ಸಾಹಿಲ್ @ ಸಾಹಿಲ್ (23) ಬಂಧಿತ ಆರೋಪಿಗಳು.

ನಗರದ ಕೆಟಿಜೆ ನಗರ ಠಾಣಾ ವ್ಯಾಪ್ತಿಯ ಸರಸ್ವತಿ ನಗರದ ಟ್ಯಾಂಕ್ ಪಾರ್ಕ್ ಒಳಗಡೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಗಾಂಜಾ ಸಂಗ್ರಹಿಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಡಿವೈಎಸ್ಪಿ ನಗರ ಉಪವಿಭಾಗದ ಶರಣಬಸವೇಶ್ವರ ಬಿ. ಅವರ ನೇತೃತ್ವದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಹೆಚ್.ಎಸ್., ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಆರೋಪಿಗಳನ್ನು ವಶಕ್ಕೆ ಪಡೆದಿದೆ.

ಆರೋಪಿತರುಗಳ ಬಳಿ ಇದ್ದ ಸುಮಾರು 60,000 ಮೌಲ್ಯದ 1165 ಗ್ರಾಂ ಗಾಂಜಾ, ಎರಡು ಅರ್ಧ ಚಂದ್ರಾಕೃತಿಯುಳ್ಳ ಕಬ್ಬಿಣದ ಎರಡು ಮಚ್ಚುಗಳು, ಒಟ್ಟು 1500 ರೂ ನಗದು ಹಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಕಲಂ: NDPS ACT, 1985 (U/s-8(c),20(b) (ii) B); ಮತ್ತು ಕಲಂ ARMS ACT, 1959 (U/s-7,25(1)(A)) ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕೆಟಿಜೆ ನಗರ ಪೊಲೀಸ್ ನಿರೀಕ್ಷಕ್ಷ ಸುನೀಲ್ ಕುಮಾರ್ ಹೆಚ್.ಎಸ್., ಪಿಎಸ್ಐ ಲತಾ ಹಾಗೂ ಸಿಬ್ಬಂದಿಗಳಾದ ಸುರೇಶ್ ಬಾಬು, ಮಂಜನಗೌಡ, ಮಹಮ್ಮದ್ ರಫಿ, ನಾಗರಾಜ, ಮಂಜಪ್ಪ, ಸಿದ್ದಪ್ಪ ರವಿನಾಯ್ಕ, ಅಂಬರೀಶ್, ವಸಂತ್ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *