SUDDIKSHANA KANNADA NEWS/DAVANAGERE/DATE:03_01_2026
ದಾವಣಗೆರೆ: ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಲೋಕಿಕೆರೆ ರಸ್ತೆಯಲ್ಲಿರುವ ಎಸ್. ಎ. ರವೀಂದ್ರನಾಥ್ ನಗರದ ಶ್ರೀ ಚೌಡೇಶ್ವರಿದೇವಿ ಮತ್ತು ಶ್ರೀ ಭೂತೇಶ್ವರಸ್ವಾಮಿಯ 46ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಿ ಸನ್ನಿಧಿಗೆ
ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಅವರು ಭೇಟಿ ನೀಡಿದರು.
ಈ ವೇಳೆ ಶ್ರೀ ಚೌಡೇಶ್ವರಿ ದೇವಿಯ ದರ್ಶನ ಪಡೆದರು. ಬಳಿಕ ನಾಡಿನ ಹಾಗೂ ರೈತರಿಗೆ ಒಳಿತಾಗಲೆಂದು ಅವರು ಪ್ರಾರ್ಥಿಸಿದರು.
ವಿನಯ್ ಕುಮಾರ್ ಅವರನ್ನು ಶ್ರೀ ಚೌಡೇಶ್ವರಿ ದೇವಸ್ಥಾನ ಅಭಿವೃದ್ದಿ ಸೇವಾ ಸಮಿತಿಯ ಗೌರವಾಧ್ಯಕ್ಷ ಪರಮೇಶ್ವರಪ್ಪ, ಅಧ್ಯಕ್ಷ ಆನಂದಪ್ಪ ಅವರು ಸನ್ಮಾನಿಸಿದರು. ಸದಸ್ಯರಾದ ಬಸವರಾಜಪ್ಪ, ಜಗ್ಗಣ್ಣ, ಯೋಗೀಶ್, ರುದ್ರಣ್ಣ, ದೇವೇಂದ್ರಪ್ಪ, ಮಂಜುನಾಥ್ ಮತ್ತು ರಾಮನಗರದ ಬಿಜೆಪಿ ಮುಖಂಡ ಹನುಮಂತಪ್ಪ ಹಾಗೂ ಬಾಟಲ್ ಕಟ್ಟೆಯ ಪರಶುರಾಮ್ ಹದಡಿ ಮಂಜುನಾಥ್ ಮತ್ತಿತರರು ಈ ವೇಳೆ ಹಾಜರಿದ್ದರು.





Leave a comment