SUDDIKSHANA KANNADA NEWS/DAVANAGERE/DATE:02_01_2026
ದಾವಣಗೆರೆ: ಚಲಿಸುವ ರೈಲಿನಲ್ಲಿ ಪ್ರಯಾಣಿಕರೊಬ್ಬರ ಚಿನ್ನಾಭರಣ, ಲ್ಯಾಪ್‌ಟಾಪ್ ಕಳವು ಮಾಡಿದ್ದ ಆರೋಪಿಯನ್ನು ಆರ್ ಪಿಎಒಫ್ ಮತ್ತು ಜಿಆರ್ ಪಿ ಪೊಲೀಸರು ಬಂಧಿಸಿ 3.43 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದಾರೆ.
ಮೊಹಮ್ಮದ್ ಅಮ್ಜದ್ ಬಂಧಿತ ಆರೋಪಿ. ಕಳೆದ 2025ರ ಡಿ.21ರಂದು ಬೆಂಗಳೂರಿನಿಂದ ಬೆಳಗಾವಿಗೆ ಹೊರಟ್ಟಿದ್ದ (20688 ನಂಬರ್ ನ )ಎಕ್ಸ್ ಪ್ರೆಸ್ ರೈಲಿನಲ್ಲಿ ಹುಬ್ಬಳ್ಳಿಯ ಮೇಲುಗಿರಿ ಶಿರೂರ್ ಪಾಕ್೯ ಬಳಿಯ ನಿವಾಸಿ ಎಂ.ವಿನಯ್ ಪ್ರಯಾಣ ಬೆಳೆಸಿದ್ದರು.
READ ALSO THIS STORY: ಜನವರಿ 4ಕ್ಕೆ ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್, ಮಲೈಕಾ, ಜೈದ್ ಖಾನ್ ಮೇನಿಯಾ: ಚಂದನ್ ಶೆಟ್ಟಿಯಿಂದ ಸಂಗೀತ ರಸದೌತಣ
ರಾತ್ರಿ ವೇಳೆ ಪ್ರಯಾಣ ಬೆಳೆಸಿದ್ದು, ನಿದ್ರೆಯಲ್ಲಿದ್ದಾಗ ಅವರ ಬಳಿಯಿದ್ದ 3.43ಲಕ್ಷ ರೂ. ಮೌಲ್ಯದ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದ್ದಾನೆ. ಮಾರ್ಗ ಮಧ್ಯೆ ಎಚ್ಚರವಾದಾಗ ಚಿನ್ನಾಭರಣ, ಮೊಬೈಲ್, ಲ್ಯಾಪ್‌ಟಾಪ್ ಕಳವು ಆಗಿರುವುದು ಗೊತ್ತಾಗಿದೆ. ಕೂಡಲೇ ಆನ್ ಲೈನ್ ಮೂಲಕ ಆರ್ ಪಿಎಫ್ ಠಾಣೆಗೆ ದೂರು ನೀಡಿದ್ದಾರೆ.
ಮಧ್ಯರಾತ್ರಿ 1.20 ಗಂಟೆಗೆ ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ರೈಲು ಬಂದ ತಕ್ಷಣವೇ ಆಪರೇಷನ್ ಯಾತ್ರಿ ಸುರಕ್ಷಾ ಕಾರ್ಯಾಚರಣೆಯಲ್ಲಿದ್ದ ಜಿಆರ್ ಪಿ ಇನ್ಸ್ ಪೆಕ್ಟರ್ ಕೃಷ್ಣ ನಾಯಕ್ ಹಾಗೂ ಆರ್ ಪಿಎಫ್ ಇನ್ಸ್ ಪೆಕ್ಟರ್ ರಂಜನ್ ಕುಮಾರ್ ಭಾರಾಧ್ವಜ ನೇತೃತ್ವದಲ್ಲಿ ಜಂಟಿ ತಂಡ ಪರಿಶೀಲಿಸಿದಾಗ ಅದೇ ರೈಲು ಗಾಡಿಯಲ್ಲಿ ಮೊಹಮ್ಮದ್ ಅಮ್ಜದ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ಮಾಡಿದಾಗ ಆ ವ್ಯಕ್ತಿ ಈ ಎಲ್ಲಾ ವಸ್ತುಗಳನ್ನು ಕಳುವು ಮಾಡಿರುವುದು ದೃಢಪಟ್ಟ ನಂತರ ಆರೋಪಿಯನ್ನು ವಶಕ್ಕೆ ಪಡೆದು ಜಿಆರ್ ಪಿ ಠಾಣೆಯಲ್ಲಿ ಕಳವು ಪ್ರಕರಣ ದಾಖಲಿಸಿದ್ದಾರೆ.
ಜಂಟಿ ಕಾರ್ಯಾಚರಣೆಯ ತಂಡದ ನೇತೃತ್ವ ವಹಿಸಿದ್ದ ಆರ್ ಪಿಎಫ್ ಸಬ್ ಇನ್ಸ್ ಪೆಕ್ಟರ್ ಎ. ಕೆ. ರೆಡ್ಡಿ ಹಾಗೂ ಜಿಆರ್ ಪಿ ಎಎಸ್ ಐ ಜಾನ್ ಕೊರಿಯೋ ಕೂಸ್ ಮತ್ತು ಮುಖ್ಯ ಪೇದೆ ಟಿ. ಶಿವಾನಂದ ಹಾಗೂ ದಾವಣಗೆರೆ ಜಿಆರ್ ಪಿ ಸಿಬ್ಬಂದಿಗಳಾದಂತ ದಿನೇಶ್ ಕುಮಾರ್,ಚೇತನ್,ಕಿರಣ್ ಹಾಗೂ ಮಾಂತೇಶ್ ಇದ್ದರು.






Leave a comment