SUDDIKSHANA KANNADA NEWS/DAVANAGERE/DATE:02_01_2026
ದಾವಣಗೆರೆ: ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ 56ನೇ ವಾರ್ಷಿಕ ಸಂಭ್ರಮ 2026ರ ಜನವರಿ 3 ರಿಂದ 6 ರವರೆಗೆ ನಾಲ್ಕು ದಿನಗಳವರೆಗೆ ನಡೆಯಲಿದೆ.
READ ALSO THIS STORY: BIG BREAKING: ಭದ್ರಾ ಅಚ್ಚುಕಟ್ಟು ಬೇಸಿಗೆ ಹಂಗಾಮಿಗೆ ಜನವರಿ 8ರಿಂದ ನಾಲೆಗೆ ನೀರು
ಜನವರಿ 3ರ ಶನಿವಾರ ಸಂಜೆ ಮೊದಲ ದಿನದ ಸಿದ್ಧಗಂಗಾ ಸಂಭ್ರಮದ ಉದ್ಘಾಟನೆ ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ. ರವಿಕಾಂತೇ ಗೌಡ ಐ.ಪಿ.ಎಸ್ ರವರು ಉದ್ಘಾಟಿಸಲಿದ್ದಾರೆ. ರಾಜ್ಯಮಟ್ಟದ ಪ್ರತಿಷ್ಠಿತ ಎಂ.ಎಸ್.ಎಸ್ ಕ್ವಿಜ್ 2025ರಲ್ಲಿ ವಿಜೇತ 30 ಮಕ್ಕಳಿಗೆ ಬಹುಮಾನ ವಿತರಣೆ. ಅರುಣೋದಯ ಬಿ.ವೈ ಮತ್ತು ದರ್ಶನ್ ಕೆ.ಸಿ ತಲಾ ಐವತ್ತು ಸಾವಿರರೂ.ಗಳನ್ನು ಬಹುಮಾನವಾಗಿ ಪಡೆಯುವರು ಎಂದು ಸಿದ್ಧಗಂಗಾ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
146 ಮಕ್ಕಳಿಗೆ ಸಿದ್ದಗಂಗಾ ಪ್ರತಿಭಾ ಪುರಸ್ಕಾರ:
ಸಿರಿ ಬಿ.ಸಿ ದ್ವಿತೀಯ ಬಹುಮಾನವಾಗಿ 25ಸಾವಿರ, ತೃತೀಯ ಬಹುಮಾನವನ್ನು 9 ಮಕ್ಕಳು ಪ್ರತಿಯೊಬ್ಬರೂ 10 ಸಾವಿರ ಪಡೆಯುವರು, 18 ಮಕ್ಕಳು ಸಮಾಧಾನಕರ ಬಹುಮಾನವಾಗಿ ಒಂದು ಸಾವಿರ ಪಡೆಯುವರು. ಸಿದ್ಧಗಂಗಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಕಮಟಂ ಶ್ರೀನಿವಾಸಲು, ವಿನಾಯಕ ಬಿ.ಎಂ, ಧನಂಜಯಪ್ಪ ಬಿ.ಎನ್, ನಿಂಗಮ್ಮ ಕೆ ಇವರು ಮುಖ್ಯ ಅತಿಥಿಗಳಾಗಿರುತ್ತಾರೆ. ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ವಾಣಿಶ್ರೀ ಅವರು ವಹಿಸಲಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳಿಸಿದ 146 ಮಕ್ಕಳು ಸಿದ್ಧಗಂಗಾ ಪ್ರತಿಭಾ ಪುರಸ್ಕಾರವನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.
ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ:
ಭಾನುವಾರ ಜನವರಿ 4 ರಂದು 2ನೇ ದಿನದ ಕಾರ್ಯಕ್ರಮವನ್ನು ಖ್ಯಾತ ವ್ಯಂಗ್ಯ ಚಿತ್ರಕಾರರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಡಾ.ಹೆಚ್.ಬಿ ಮಂಜುನಾಥ್‌ರವರು ಉದ್ಘಾಟಿಸುವರು. ಅಂದಿನ ಅಧ್ಯಕ್ಷತೆ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ನಿರ್ದೇಶಕರಾದ ಡಾ|| ಡಿ.ಎಸ್. ಜಯಂತ್ರವರು ವಹಿಸಲಿದ್ದಾರೆ. ಪನ್ಯಾಸಕರಾದ ಬಿ.ಎಂ ವಿಜಯ್ ಕುಮಾರ್, ವನ್ನಂ ಸುಬ್ಬರಾವ್, ಸಂತೋಷ್ ಎಸ್ ರವರು ಮುಖ್ಯ ಅತಿಥಿಗಳಾಗಿರುವರು. ದ್ವಿತೀಯ ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರದ ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.
ಆರ್. ವಾಗ್ದೇವಿರಿಗೆ ಶಿಕ್ಷಣ ಶಿಲ್ಪಿ ಡಾ. ಎಂ. ಎಸ್. ಶಿವಣ್ಣ ಪ್ರಶಸ್ತಿ:
ಜನವರಿ 5ರ ಸೋಮವಾರದಂದು 3ನೇ ದಿನದ ಸಂಜೆಯ ಕಾರ್ಯಕ್ರಮಕ್ಕೆ “ಸಂಪ್ರದಾಯ” ಸಹ ಸಂಸ್ಥಾಪಕರಾದ ಚೇತನ್ ಡಿ.ಸಿಯವರು ಚಾಲನೆ ನೀಡುವರು. ರಾಜ್ಯಮಟ್ಟದ ಪ್ರತಿಷ್ಠಿತ “ಶಿಕ್ಷಣ ಶಿಲ್ಪಿ ಡಾ. ಎಂ. ಎಸ್. ಶಿವಣ್ಣ ಪ್ರಶಸ್ತಿ”ಯನ್ನು ನಗರದ ಎಸ್ ಜೆ ಜೆ ಎಂ ಪ್ರೌಢಶಾಲೆಯ ಶೈಕ್ಷಣಿಕ ಸಲಹೆಗಾರರಾದ ಶಿಕ್ಷಣ ತಜ್ಞೆ ವಾಗ್ದೇವಿ ಆರ್. ಇವರಿಗೆ ಪ್ರದಾನ ಮಾಡಲಾಗುತ್ತದೆ. ಅಂದಿನ ಅಧ್ಯಕ್ಷತೆ ಸಿದ್ಧಗಂಗಾ ಸಿಬಿಎಸ್ಇಯ ಪ್ರಾಚಾರ್ಯೆ ಗಾಯತ್ರಿ ಚಿಮ್ಮಡ್ ವಹಿಸಲಿದ್ದಾರೆ. 2025ರ ಸಿಬಿಎಸ್ಇ 10ನೇ ತರಗತಿಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾದ 26 ಮಕ್ಕಳಿಗೆ ಪ್ರತಿಭಾ ಪುರಸ್ಕಾರವಿದೆ. ಸಿಬಿಎಸ್ಇ ಶಾಲೆಯ ಸಹ ಶಿಕ್ಷಕರಾದ ಆಶಾ, ಹರಿಣಿ, ಫಾರೂಕ್ ಉಸ್ಮಾನಿ ಮುಖ್ಯ
ಅತಿಥಿಗಳಾಗಿರುತ್ತಾರೆ ಎಂದು ಹೇಳಿದರು.
ನಾಲ್ಕನೇ ದಿನದ ಸಂಭ್ರಮದಲ್ಲಿ ಶೈಕ್ಷಣಿಕ ಸಲಹೆಗಾರರಾದ ಜಗನ್ನಾಥ್ ನಾಡಿಗೇರ್ರವರು ಉದ್ಘಾಟಕರಾಗಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್ ಹೇಮಂತ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಿದ್ಧಗಂಗಾ ಶಾಲೆಯ ಸಹ ಶಿಕ್ಷಕರಾದ ಸ್ವಾತಿ, ಮಲ್ಲಿಕಾರ್ಜುನಯ್ಯ, ವೇದಾವತಿ ಇವರು ಮುಖ್ಯ ಅತಿಥಿಗಳು. ನಾಲ್ಕೂ ದಿನದ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿʼಸೌಜ ಉಪಸ್ಥಿತರಿರುತ್ತಾರೆ. ಅಂದು ಎಸ್.ಎಸ್.ಎಲ್.ಸಿ ಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ 80 ಮಕ್ಕಳಿಗೆ ಪ್ರತಿಭಾ ಪುರಸ್ಕಾರವಿರುತ್ತದೆ. ಸುಗಮ ಸಂಗೀತ:
ಪ್ರತಿದಿನ ಸಂಜೆ 5 ರಿಂದ 5:30 ರವರೆಗೆ ಸಾನ್ವಿ, ಜೀವಾಕ್ಷರಿ, ಅನುಶ್ರೀ, ಐಸಿರಿ, ಪ್ರಿಯಾಂಕ ಮತ್ತು ಸಂಗಡಿಗರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಸಿದ್ಧಗಂಗಾ ಕಾಂಪೋಜಿಟ್ ಸ್ಕೂಲಿನ ಮುಖ್ಯ ಶಿಕ್ಷಕಿ ರೇಖಾರಾಣಿ ಯವರು ನಾಲ್ಕೂ ದಿನಗಳು ಕಾರ್ಯಕ್ರಮದ ನಿರೂಪಣೆ ನಡೆಸಿಕೊಡುವರು. * ಕ್ರೀಡೋತ್ಸವ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ 2500ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ, ವಾರ್ಷಿಕ ಸಂಭ್ರಮಾಚರಣೆಯಲ್ಲಿ ಪ್ರತಿದಿನ ಪ್ರತಿಭಾ ಪುರಸ್ಕಾರವಿರಲಿದೆ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನೂರಕ್ಕೂ ಹೆಚ್ಚು ನೃತ್ಯಗಳಲ್ಲಿ ಮಕ್ಕಳು ತಮ್ಮ ಅಭಿನಯ ತೋರಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಶ್ರೀ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಲರಾದ ವಾಣಿಶ್ರೀ, ಮುಖ್ಯೋಪಾಧ್ಯಾಯರಾದ ಕೆ. ಎಸ್. ರೇಖಾರಾಣಿ, ಕಾರ್ಯದರ್ಶಿ ಹೇಮಂತ್ ಡಿ. ಎಸ್.,ಕಾಲೇಜಿನ ಟ್ರಸ್ಟಿಯಾದ ಜಯಂತ್ ಡಿ. ಎಸ್. ಅವರು ಉಪಸ್ಥಿತರಿದ್ದರು.





Leave a comment