SUDDIKSHANA KANNADA NEWS/DAVANAGERE/DATE:01_01_2026
ನವದೆಹಲಿ: ಶ್ರೀರಾಮನಿಗೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ನಾಯಕ ನಾನಾ ಪಟೋಲೆ ಅವರು ಹೋಲಿಕೆ ಮಾಡಿರುವುದು ರಾಜಕೀಯ ಬಿರುಗಾಳಿ ಎಬ್ಬಿಸಿದೆ.
ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರಕ್ಕೆ ರಾಹುಲ್ ಗಾಂಧಿ ಇಲ್ಲಿಯವರೆಗೆ ಭೇಟಿ ನೀಡದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕ ಶ್ರೀರಾಮ “ಶ್ರೀರಾಮನ ಕೆಲಸವನ್ನು ಮಾಡುತ್ತಿದ್ದಾರೆ” ಎಂದು ಹೇಳಿದರು. “ರಾಮನ ಕೆಲಸ ಕಿರುಕುಳಕ್ಕೊಳಗಾದ ಮತ್ತು ವಂಚಿತರಿಗೆ ನ್ಯಾಯ ಒದಗಿಸುವುದಾಗಿತ್ತು. ರಾಹುಲ್ ಗಾಂಧಿ ಕೂಡ ಅದನ್ನೇ ಮಾಡುತ್ತಿದ್ದಾರೆ. ರಾಮ ಮಂದಿರದಲ್ಲಿ ಫೋಟೋ ಸೆಷನ್ ಮಾಡುವ ಬದಲು ಅವರು ಈ ಸೇವೆಯನ್ನು ಮಾಡಲು ಇಷ್ಟಪಡುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಪರೋಕ್ಷವಾಗಿ ಟೀಕಿಸಿದರು.
ರಾಮ ಮಂದಿರದ ಬೀಗ ತೆರೆಯುವುದರ ಹಿಂದೆ ರಾಜೀವ್ ಗಾಂಧಿಯವರ ಕೊಡುಗೆ ಇದೆ ಎಂದು ಕಾಂಗ್ರೆಸ್ ನಾಯಕ ನೆನಪು ಮಾಡಿಕೊಂಡರೆ, ಉದ್ಘಾಟನೆಯಾದಾಗಿನಿಂದ ರಾಹುಲ್ ಗಾಂಧಿ ಅವರು ಭೇಟಿ ನೀಡದಿದ್ದಕ್ಕಾಗಿ ಬಿಜೆಪಿ ಟೀಕಿಸುತ್ತಲೇ ಇದೆ.
ಪಟೋಲ್ ಅವರನ್ನು ಟೀಕಿಸುತ್ತಾ ಬಿಜೆಪಿ ನಾಯಕರು, ಕಾಂಗ್ರೆಸ್ ಪಕ್ಷವು “ಹಿಂದೂ ನಂಬಿಕೆಯನ್ನು ಅವಮಾನಿಸುತ್ತಿದೆ” ಎಂದು ಆರೋಪಿಸಿದ್ದಾರೆ.





Leave a comment