SUDDIKSHANA KANNADA NEWS/DAVANAGERE/DATE:30_12_2025
ದಾವಣಗೆರೆ: ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ 2025-26ನೇ ಸಾಲಿನ ಬೇಸಿಗೆ ಬೆಳೆಗೆ ಭದ್ರಾ ಡ್ಯಾಂ ನೀರು ಹರಿಸುವ ಕುರಿತಂತೆ ಚರ್ಚಿಸಲು ಜನವರಿ 2ರಂದು 88ನೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿದೆ.
READ ALSO THIS STORY: ದಾವಣಗೆರೆ ಸಿಂಥೆಟಿಕ್ ಡ್ರಗ್ಸ್ ಕೇಸ್ ನಲ್ಲಿ ಬಿಗ್ ಆಪರೇಷನ್: ಬಂಧಿತರ ಸಂಖ್ಯೆ 8ಕ್ಕೇರಿಕೆ, ಕಾಂಗ್ರೆಸ್ ಘಟಾನುಘಟಿಗಳು ಬಂಧನ!
ಶಿವಮೊಗ್ಗ ತಾಲೂಕಿನ ಮಲವಗೊಪ್ಪದಲ್ಲಿನ ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಂದು ಬೆಳಿಗ್ಗೆ 9 ಗಂಟೆಗೆ ಸಭೆ ಆರಂಭವಾಗಲಿದ್ದು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಬೇಸಿಗೆ ಬೆಳೆಗೆ ನೀರು ಹರಿಸುವ ಕುರಿತಂತೆ ಸುದೀರ್ಘವಾಗಿ ಚರ್ಚಿಸಲಾಗುವುದು. ಭದ್ರಾ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಗಮನಿಸಿ ನೀರು ಹರಿಸುವ ಕುರಿತಂತೆ ನಿರ್ಧರಿಸಲಾಗುವುದು.
ಸಭೆಯಲ್ಲಿ ಭಾಗವಹಿಸಿ ಬೇಸಿಗೆ ಬೆಳೆಗೆ ನೀರು ಹರಿಸಲು ದಿನಾಂಕ ನಿರ್ಧರಿಸುವ ಕುರಿತಂತೆ ಅಗ್ಯ ಸಲಹೆಗಳನ್ನು ನೀಡುವಂತೆ ಬಿ. ಆರ್. ಪ್ರಾಜೆಕ್ಟ್ ಭದ್ರಾ ಯೋಜನಾ ವೃತ್ತದ ಕರ್ನಾಟಕ ನೀರಾವರಿ ನಿಯಮಿತ ನಿಗಮದ ಅಧೀಕ್ಷಕ ಅಭಿಯಂತರು ಹಾಗೂ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Leave a comment