SUDDIKSHANA KANNADA NEWS/DAVANAGERE/DATE:29_12_2025
ದಾವಣಗೆರೆ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಾರಿಗೆಗಳಾದ ವೋಲ್ವೋ / ಇ.ವಿ.ಪವರ್ ಪ್ಲಸ್ ಮತ್ತು ನಾನ್ ಎಸಿ ಸ್ಪೀಪರ್ ಬಸ್ ಗಳ ಟಿಕೆಟ್ ದರಗಳಲ್ಲಿ 2026 ಜನವರಿ 5 ರಿಂದ ಬಾರಿ ರಿಯಾಯಿತಿ ದರವನ್ನು ನೀಡಲಾಗಿದೆ.
ದಾವಣಗೆರೆ ಯಿಂದ ಬೆಂಗಳೂರು ವೋಲ್ವೋ ಬಸ್ ನಲ್ಲಿ ಪ್ರಸ್ತುತ ದರ ಹಗಲು 689/-/ ರಾತ್ರಿ 748/-ನಿಗದಿಪಡಿಸಿದ್ದು, ಪ್ರಸ್ತುತ ರಿಯಾಯಿತಿ ಹಗಲು ಮತ್ತು ರಾತ್ರಿ ದರ 650/-ನಿಗದಿಪಡಿಸಿದೆ, ಇ.ವಿ.ಪವರ್ ಪ್ಲಸ್ ಎ/ಸಿ ಪ್ರಸ್ತುತ ದರ ಹಗಲು ವೇಳೆಯಲ್ಲಿ 663/- ರಾತ್ರಿ 720/- ಇದ್ದು, ಪ್ರಸ್ತುತ ರಿಯಾಯಿತಿ ದರ 600/- ನಿಗದಿಪಡಿಸಿದೆ.
ವೋಲ್ವೋ 2.0 ಪ್ರಸ್ತುತ ದರ 721/- ಇದ್ದು ರಿಯಾಯಿತಿ ದರ 680/- ನಿಗದಿಪಡಿಸಿದೆ, ದಾವಣಗೆರೆ-ಕಲಬುರ್ಗಿ ನಾನ್ ಎ/ಸಿ ಸ್ಲೀಪರ್ ಪ್ರಸ್ತುತ ದರ 1091/- ಇದ್ದು ರಿಯಾಯಿತಿ ದರ 1005/- ನಿಗದಿಪಡಿಸಿದೆ, ದಾವಣಗೆರೆ – ಹೈದರಾಬಾದ್ ನಾನ್ ಎ/ಸಿ ಸ್ಲೀಪರ್ ಪ್ರಸ್ತುತ ದರ 1405/- ಇದ್ದು ರಿಯಾಯಿತಿ ದರ 1265/- ನಿಗದಿಪಡಿಸಿದೆ, ನಾಲ್ಕು ಅಥವಾ ಹೆಚ್ಚಿನ ಪ್ರಯಾಣಿಕರು ಮುಂಗಡ ಗ್ರೂಪ್ ಬುಕ್ಕಿಂಗ್ ಮಾಡಿದಲ್ಲಿ ಶೇ. 5 ರಷ್ಟು ರಿಯಾಯಿತಿ ಹಾಗೂ Onward & Return ಪ್ರಯಾಣದ ಬುಕ್ಕಿಂಗ್ ಒಟ್ಟಿಗೆ ಮಾಡಿದಲ್ಲಿ Return ಪ್ರಯಾಣ ದರಕ್ಕೆ ಶೇ. 10 ರಷ್ಟು ರಿಯಾಯಿತಿ ನೀಡಲಾಗಿದೆ.
ಪ್ರಯಾಣಿಕರು ರಿಯಾಯಿತಿ ದರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ದಾವಣಗೆರೆ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





Leave a comment