ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

GST ಆದಾಯ ತೆರಿಗೆ ನೀಡುವವರ ಗೃಹಲಕ್ಷ್ಮಿ ಯೋಜನೆ ಅರ್ಜಿಗಳ ತಿರಸ್ಕಾರ- ಲಕ್ಷ್ಮೀ ಹೆಬ್ಬಾಳ್ಕರ್‌

On: August 27, 2024 4:59 PM
Follow Us:
---Advertisement---

ಬೆಳಗಾವಿ:ಜಿಎಸ್‌ಟಿ , ಆದಾಯ ತೆರಿಗೆ ನೀಡುವವರ ಗೃಹಲಕ್ಷ್ಮಿ ಯೋಜನೆ ಅರ್ಜಿಗಳನ್ನು ತಿರಸ್ಕಾರ ಮಾಡಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಮೊದಲಿನಿಂದಲೂ ಜಿಎಸ್‌ಟಿ, ಆದಾಯ ತೆರಿಗೆ ತುಂಬುವವರಿಗೆ ಬರಲ್ಲ ಅಂತಾ ಹೇಳಿದ್ದೇವೆ.

ಆದರೆ ಜಿಎಸ್‌ಟಿ ಇದ್ದವರೂ ನಮ್ಮ ಪೋರ್ಟಲ್​ಗೆ ಅರ್ಜಿ ಹಾಕಿದ್ದರು. ಅವುಗಳನ್ನ ನಾವು ತಿರಸ್ಕಾರ ಮಾಡಿದ್ದೇವೆ ಎಂದು ಹೇಳಿದರು.

ಸುಮಾರು ಹದಿನೈದು ಸಾವಿರ ಅರ್ಜಿಗಳು ಬಂದಿದ್ದವು. ಜಿಎಸ್‌ಟಿ ಇರುವ ಕಾರಣಕ್ಕೆ ತತಕ್ಷಣ ಅರ್ಜಿ ತಿರಸ್ಕಾರ ಮಾಡಿದ್ದೇವೆ. ಇಡೀ ರಾಜ್ಯದಲ್ಲಿ ಶ್ರೀಮಂತರು, ಜಿಎಸ್‌ಟಿ ಇದ್ದವರು ಸೇರಿ ಒಟ್ಟು 1ಕೋಟಿ 58ಲಕ್ಷ ಕುಟುಂಬಗಳಿವೆ ಎಂದರು.

ಇಂದಿಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಬಹುದು. ಜೂನ್ ತಿಂಗಳ ಗೃಹಲಕ್ಷ್ಮಿ ಹಣ ಜಮಾ ಆಗಿದೆ. ಜೂನ್ ತಿಂಗಳದ್ದು ಕೂಡ ಎಂಬತ್ತು ಸಾವಿರ ಜನರಿಗೆ ತಲುಪಿಲ್ಲ. ಜುಲೈ ಮತ್ತು ಆಗಸ್ಟ್‌ ತಿಂಗಳದ್ದು ಇನ್ನೊಂದು ವಾರದಲ್ಲಿ ಎರಡು ತಿಂಗಳ ಹಣ ಕೂಡ ಜಮಾ ಆಗಲಿದೆ ಎಂದು ತಿಳಿಸಿದರು.

Join WhatsApp

Join Now

Join Telegram

Join Now

Leave a Comment