SUDDIKSHANA KANNADA NEWS/DAVANAGERE/DATE:28_12_2025
ನವದೆಹಲಿ: ಆರ್ ಎಸ್ ಎಸ್ ಸಂಘಟನೆ ಹೊಗಳಿದ್ದ ಮಾಜಿ ಸಿಎಂ ದಿಗ್ವಿಜಯ ಸಿಂಗ್ ಮಾತಿಗೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಬೆಂಬಲಿಸಿದ್ದಾರೆ. ಈ ಮೂಲಕ ಇಬ್ಬರು ಕಾಂಗ್ರೆಸ್ ನಾಯಕರು ಪಕ್ಷದ ಹೈಕಮಾಂಡ್ ವಿರುದ್ಧವೇ ಸೆಟೆದು ನಿಂತಿದ್ದಾರೆ. ಇದು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಗೆ ಮುಜುಗರ ತಂದಿದೆ.
ಸಂಘಟನೆಯನ್ನು ಬಲಪಡಿಸಬೇಕು. ದಿಗ್ವಿಜಯ ಸಿಂಗ್ ಹೇಳಿದ್ದರಲ್ಲಿ ತಪ್ಪೇನಿಲ್ಲ. ಸರಿಯಾಗಿಯೇ ಇದೆ ಎಂದು ಶಶಿ ತರೂರ್ ಹೇಳಿದ್ದಾರೆ.
140ನೇ ಕಾಂಗ್ರೆಸ್ ಸಂಸ್ಥಾಪನಾ ದಿನದಂದು ಬಿಜೆಪಿ-ಆರ್‌ಎಸ್‌ಎಸ್ ಸಂಘಟನಾ ಬಲವನ್ನು ಹೊಗಳಿದ ಸಿಂಗ್ ಅವರ ಹೇಳಿಕೆಗಳ ವಿವಾದದ ನಡುವೆಯೇ ಪಕ್ಷದ ಸಂಘಟನೆಯನ್ನು ಬಲಪಡಿಸುವ ಅಗತ್ಯವನ್ನು ಶಶಿ ತರೂರ್ ಪ್ರತಿಪಾದಿಸಿದ್ದಾರೆ.
ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸಂಘಟನಾ ಬಲವನ್ನು ಹೊಗಳಿದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರ ಇತ್ತೀಚಿನ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನೊಳಗೆ ಭಾರೀ ವಿರೋಧ ವ್ಯಕ್ತವಾಗಿದೆ. 140 ನೇ ಕಾಂಗ್ರೆಸ್ ಸಂಸ್ಥಾಪನಾ
ದಿನದ ಸಂದರ್ಭದಲ್ಲಿ, ತರೂರ್, “ನಾವು ಸ್ನೇಹಿತರು, ಮತ್ತು ಸಂಭಾಷಣೆ ನಡೆಸುವುದು ಸಹಜ. ಪಕ್ಷಕ್ಕೆ ಈ ದಿನ ಮಹತ್ವದ್ದಾಗಿದೆ. ಇದು ಪಕ್ಷಕ್ಕೆ ಬಹಳ ಮುಖ್ಯವಾದ ದಿನ ಎಂದು ಹೇಳಿದ್ದಾರೆ.





Leave a comment