SUDDIKSHANA KANNADA NEWS/DAVANAGERE/DATE:16_12_2025
ದಾವಣಗೆರೆ: ಕೆಯುಐಡಿಎಫ್ಸಿ ಇಲಾಖೆಯ ವತಿಯಿಂದ ದಾವಣಗೆರೆ ನಗರದಲ್ಲಿ 24/7 ಜಲಸಿರಿ ಯೋಜನೆಯನ್ನು ಕೈಗೊಳ್ಳಲಾಗಿದ್ದು ಅದರಂತೆ ರಾಜನಹಳ್ಳಿ ಜಾಕ್ವೆಲ್ ನಿಂದ ಬಾತಿ ನೀರು ಶುದ್ಧೀಕರಣ ಘಟಕಕ್ಕೆ ನೀರನ್ನು ಸರಬರಾಜು ಮಾಡುವ ಪೈಪ್ಲೈನ್ ದುರಸ್ತಿ ಕಾರ್ಯ ಡಿಸೆಂಬರ್ 17ರಿಂದ 19ರವರೆಗೆ ಕೈಗೊಳ್ಳಲಾಗುತ್ತಿದೆ.
ಈ ಮೂರು ದಿನಗಳಂದು ದಾವಣಗೆರೆ ನಗರಕ್ಕೆ ಸರಬರಾಜು ಆಗುವ 24/7 ಕುಡಿಯುವ ನೀರಿನ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.





Leave a comment