Home ದಾವಣಗೆರೆ ಶಾಮನೂರು ಶಿವಶಂಕರಪ್ಪರ ಅಂತಿಮ ದರ್ಶನಕ್ಕೆ ಸಿಎಂ, ಡಿಸಿಎಂ, ಸಚಿವರು ಸೇರಿ ಯಾರೆಲ್ಲಾ ಬರ್ತಿದ್ದಾರೆ? ಫುಲ್ ಡೀಟೈಲ್ಸ್
ದಾವಣಗೆರೆನವದೆಹಲಿಬೆಂಗಳೂರು

ಶಾಮನೂರು ಶಿವಶಂಕರಪ್ಪರ ಅಂತಿಮ ದರ್ಶನಕ್ಕೆ ಸಿಎಂ, ಡಿಸಿಎಂ, ಸಚಿವರು ಸೇರಿ ಯಾರೆಲ್ಲಾ ಬರ್ತಿದ್ದಾರೆ? ಫುಲ್ ಡೀಟೈಲ್ಸ್

Share
Share

SUDDIKSHANA KANNADA NEWS/DAVANAGERE/DATE:15_12_2025

ದಾವಣಗೆರೆ: ಮಾಜಿ ಸಚಿವ ಹಾಗೂ ದಾವಣಗೆರೆ ದಕ್ಷಿಣ ಶಾಸಕ ಡಾ. ಶಾಮನೂರು ಶಿವಶಂಕರಪ್ಪನವರು ನಿಧನರಾಗಿದ್ದು ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಲು ಗಣ್ಯಾತಿ ಗಣ್ಯರು ಆಗಮಿಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಮಧ್ಯಾಹ್ನ 3 ಗಂಟೆಗೆ ದಾವಣಗೆರೆಗೆ ಆಗಮಿಸುವರು. ಸಂಜೆ 4.30ಕ್ಕೆ ಹೆಲಿಪ್ಯಾಡ್ ಮೂಲಕ ಬೆಳಗಾವಿಗೆ ತೆರಳುವರು.

ಉಪಮುಖ್ಯ ಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರು ಮಧ್ಯಾಹ್ನ 2.45ಕ್ಕೆ ದಾವಣಗೆರೆಗೆ ಆಗಮಿಸುವರುಸಂಜೆ 3.45ಕ್ಕೆ ಹೆಲಿಪ್ಯಾಡ್ ಮೂಲಕ ಬೆಂಗಳೂರಿಗೆ ತೆರಳುವರು.

ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಮತ್ತು ಕಾಂಗ್ರೆಸ್(ಎಐಸಿಸಿ) ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ರವರು ಮಧ್ಯಾಹ್ನ 1.15ಕ್ಕೆ ದಾವಣಗೆರೆ ಆಗಮಿಸುವರು. ಮಧ್ಯಾಹ್ನ 2.45ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿಗೆ ತೆರಳುವರು.

ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ರವರು ಮಧ್ಯಾಹ್ನ 2.30ಕ್ಕೆ ದಾವಣಗೆರೆ ಆಗಮಿಸುವರು. ಸಂಜೆ 5 ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ಬೆಳಗಾವಿಗೆ ತೆರಳುವರು.

ಸಭಾಪತಿಗಳಾದ ಬಸವರಾಜ.ಎಸ್.ಹೊರಟ್ಟಿ ರವರು ಮಧ್ಯಾಹ್ನ 3.30ಕ್ಕೆ ದಾವಣಗೆರೆ ಆಗಮಿಸುವರು. ಸಂಜೆ 5 ಗಂಟೆಗೆ ರಸ್ತೆ ಮೂಲಕ ಹುಬ್ಬಳಿಗೆ ತೆರಳುವರು.

ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ ಇವರು ಮಧ್ಯಾಹ್ನ 3 ಗಂಟೆಗೆ ದಾವಣಗೆರೆ ಆಗಮಿಸುವರು. ಸಂಜೆ 4.30ಕ್ಕೆ ಗಂಟೆಗೆ ಬೆಳಗಾವಿಗೆ ತೆರಳುವರು.

ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ರವರು ಬೆಳಿಗ್ಗೆ 11 ಗಂಟೆಗೆ ದಾವಣಗೆರೆಗೆ ಆಗಮಿಸುವರು. 11.30ಕ್ಕೆ ಬೆಂಗಳೂರಿಗೆ ತೆರಳುವರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಸಚಿವರಾದ ಎಂ.ಬಿ.ಪಾಟೀಲ ಅವರು ಬೆಳಿಗ್ಗೆ 10 ಗಂಟೆಗೆ ದಾವಣಗೆರೆಗೆ ಆಗಮಿಸುವರು.

ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ.ಬಿ.ಖಂಡ್ರೆ ಇವರು ಬೆಳಿಗ್ಗೆ 11.55 ಕ್ಕೆ ದಾವಣಗೆರೆಗೆ ಆಗಮಿಸುವರು. ಸಂಜೆ 6 ಗಂಟೆಗೆ ರಸ್ತೆ ಮೂಲಕ ಬೆಳಗಾವಿ ತೆರಳುವರು.

ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪೂರ ರವರು ಸಂಜೆ 4 ಗಂಟೆಗೆ ದಾವಣಗೆರೆಗೆ ಆಗಮಿಸುವರು ಸಂಜೆ 5 ಗಂಟೆಗೆ ಬೆಳಗಾವಿಗೆ ತೆರಳುವರು.

ಇಂಧನ ಸಚಿವರು ಹಾಗೂ ಚಿಕ್ಕಮಂಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜಿ.ಜಾರ್ಜ್‍ರವರು ಮಧ್ಯಾಹ್ನ 2 ಗಂಟೆಗೆ ದಾವಣಗೆರೆಗೆ ಆಗಮಿಸುವರು. 4.30ಕ್ಕೆ ಹೆಲಿಪ್ಯಾಡ್ ಮೂಲಕ ಬೆಳಗಾವಿಗೆ ತೆರಳುವರು.

ಕಂದಾಯ ಸಚಿವರಾದ ಕೃಷ್ಣ ಬೈರೆಗೌಡ ಅವರು ಮದ್ಯಾಹ್ನ 1 ಗಂಟೆಗೆ ದಾವಣಗೆರೆಗೆ ಆಗಮಿಸುವರು. 3 ಗಂಟೆಗೆ ರಸ್ತೆಯ ಮೂಲಕ ಬೆಳಗಾವಿಗೆ ತೆರಳುವರು.

ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್.ಎಸ್.ಲಾಡ್ ರವರು ಮಧ್ಯಾಹ್ನ 2.30ಕ್ಕೆ ದಾವಣಗೆರೆಗೆ ಆಗಮಿಸುವರು. 4.30ಕ್ಕೆ ಬೆಳಗಾವಿಗೆ ತೆರಳುವರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು ಮಧ್ಯಾಹ್ನ 2.30ಕ್ಕೆ ದಾವಣಗೆರೆಗೆ ಆಗಮಿಸುವರು. ಸಂಜೆ 4.30 ಕ್ಕೆ ರಸ್ತೆ ಮೂಲಕ ಬೆಳಗಾವಿಗೆ ತೆರಳುವರು.

ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ ಪಾಟೀಲ ಇವರು ಮಧ್ಯಾಹ್ನ 3 ಗಂಟೆಗೆ ದಾವಣಗೆರೆಗೆ ಆಗಮಿಸುವರು. ಸಂಜೆ 5 ಗಂಟೆಗೆ ರಸ್ತೆ ಮೂಲಕ ಬೆಳಗಾವಿಗೆ ತೆರಳುವರು.

ಜವಳಿ, ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ.ಎಸ್.ಪಾಟೀಲ ಇವರು ಮಧ್ಯಾಹ್ನ 3.30ಕ್ಕೆ ದಾವಣಗೆರೆಗೆ ಆಗಮಿಸುವರು. ಸಂಜೆ 5 ಗಂಟೆಗೆ ರಸ್ತೆ ಮೂಲಕ ಬೆಳಗಾವಿಗೆ ತೆರಳುವರು.

Share

Leave a comment

Leave a Reply

Your email address will not be published. Required fields are marked *