SUDDIKSHANA KANNADA NEWS/DAVANAGERE/DATE:15_12_2025
ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಚ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ಅಂತಿಮ ಯಾತ್ರೆಯು ಆರಂಭಗೊಂಡಿದೆ. ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮುಖಂಡರು, ಹಿತೈಷಿಗಳು, ಸಂಬಂಧಿಕರು ಪಾಲ್ಗೊಂಡಿದ್ದಾರೆ.
ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿನ ಗಣಿ ಮತ್ತು ಭೂ ವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ನಿವಾಸದಿಂದ ಮೆರವಣಿಗೆಯಲ್ಲಿ ಜನಸಾಗರವೇ ಹರಿದು ಬಂದಿದೆ. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಉದ್ಯಮಿ ಎಸ್. ಎಸ್. ಗಣೇಶ್, ಬಕ್ಕೇಶ್ ಅವರೂ ಸಹ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮೆರವಣಿಗೆ ವೇಳೆ ಭಾವುಕರಾಗಿದ್ದು ಕಂಡು ಬಂತು.
ಪಾರ್ಥಿವ ಶರೀರದ ಮೆರವಣಿಗೆ ಮಾರ್ಗ:
ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುುನ್ ಮನೆಯಿಂದ ಸಾಯಿಬಾಬ ದೇವಸ್ಥಾನ, ರೆಡ್ಡಿ ಬಿಲ್ಡಿಂಗ್, ಚರ್ಚ್ ಮುಂಭಾಗ, ರಾಮ್ ಅಂಡ್ ಕೋ ಸರ್ಕಲ್, ಎವಿಕೆ ಕಾಲೇಜು ರಸ್ತೆ, ಮಹಾತ್ಮಾ ಗಾಂಧಿ ಶಾಲೆ, ಹಳೇ ಕೋರ್ಟ್ ರಸ್ತೆ ಮೂಲಕ ಸಾಗಿ ಹೈಸ್ಕೂಲ್ ಮೈದಾನ ತಲುಪಲಿದೆ.
- Shamanuru Shivashankarappa
- Shamanuru Shivashankarappa Death
- Shamanuru Shivashankarappa Death news
- Shamanuru Shivashankarappa Mla
- Shamanuru Shivashankarappa News
- Shamanuru Shivashankarappa News Updates
- ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ
- ಶಾಮನೂರು ಶಿವಶಂಕರಪ್ಪ
- ಶಾಮನೂರು ಶಿವಶಂಕರಪ್ಪ ಅಖಿಲ ಭಾರತ ರಾಷ್ಟ್ರೀಯ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ
- ಶಾಮನೂರು ಶಿವಶಂಕರಪ್ಪ ಅಜರಾಮರ
- ಶಾಮನೂರು ಶಿವಶಂಕರಪ್ಪ ಇನ್ನಿಲ್ಲ
- ಶಾಮನೂರು ಶಿವಶಂಕರಪ್ಪ ನೆನಪು ಮಾತ್ರ
- ಶಾಮನೂರು ಶಿವಶಂಕರಪ್ಪ ನ್ಯೂಸ್
- ಶಾಮನೂರು ಶಿವಶಂಕರಪ್ಪ ವಿಧಿವಶ





Leave a comment