ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಠದ ಮೇಲೆ ಆರೋಪ ಮಾಡಿದವರು ನಿಷ್ಠಾವಂತ ಭಕ್ತರಲ್ಲ, ಹಿರಿಯ ಗುರುಗಳನ್ನೇ ಬಿಟ್ಟಿಲ್ಲ ನಮ್ಮನ್ನು ಬಿಡುತ್ತಾರೆಯೇ: ಸಿರಿಗೆರೆ ಶ್ರೀಗಳ ಸಿಟ್ಟು

On: August 19, 2024 11:21 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:19-08-2024

ದಾವಣಗೆರೆ/ ಚಿತ್ರದುರ್ಗ: ಸಿರಿಗೆರೆ ಮಠದ ಮೇಲೆ ಆರೋಪ ಬಂದಿರುವುದು ಇದೇ ಮೊದಲಲ್ಲ. ಹಿರಿಯ ಗುರುಗಳ ಕಾಲದಲ್ಲಿಯೂ ಎರಡು ಬಣಗಳಿದ್ದವು. ಒಂದು ಗುಂಪಂತೂ ಗೋಳು ಹೊಯ್ದುಕೊಂಡಿತ್ತು. ದೊಡ್ಡ ಗುರುಗಳ ಮೇಲೆ ಹೊರಿಸಿದ ಆರೋಪಕ್ಕಿಂತ ನಮ್ಮ ಮೇಲೆ ಬಂದಿರುವ ಆರೋಪ ದೊಡ್ಡದಲ್ಲ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಆಕ್ರೋಶ ಹೊರಹಾಕಿದರು.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಆರ್. ನುಲೇನೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಂಗನಾಥ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗ ಮಠದ ಮೇಲೆ ಆರೋಪ ಮಾಡುತ್ತಿರುವವರು ನಿಷ್ಠಾವಂತ ಭಕ್ತರಲ್ಲ. ಇಂಥವರ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಸ್ವಲ್ಪ ಯಾಮಾರಿದರೂ ಮಠಕ್ಕೆ ಕೆಟ್ಟ ಹೆಸರು ತರುತ್ತಾರೆ ಎಂದು ಕಿಡಿಕಾರಿದರು.

ಹಿರಿಯ ಗುರುಗಳ ಕಾಲದಲ್ಲಿಯೂ ಮಠದ ಆಡಳಿತ ಸುವ್ಯವಸ್ಥಿತವಾಗಿ ನಡೆಸಲು ಅಡ್ಡಿಪಡಿಸಿದ ಗುಂಪು ಶ್ರೀಗಳ ಮೇಲೆ ಕೊಲೆ ಆರೋಪ ಹೊರಿಸಿತ್ತು. ಆಗ ಹಿರಿಯ ಗುರುಗಳು ಕಾಣೆಯಾಗಿದ್ದಂಥ ಚಂದ್ರಶೇಖರ ಸ್ವಾಮೀಜಿ ಅವರನ್ನು ಮದ್ರಾಸನಿಂದ ಕರೆದುಕೊಂಡು ಬಂದು ಭಕ್ತರ ಮುಂದೆ ನಿಲ್ಲಿಸಿದ ಬಳಿಕ ಆರೋಪದಿಂದ ಮುಂದಾಗಿದ್ದರು ಎಂದು ವಿವರಿಸಿದರು.

ತಮ್ಮ ವಿರುದ್ಧ ದಾವಣಗೆರೆಯಲ್ಲಿ ಸಭೆ ನಡೆಸಿದವರ ವಿರುದ್ಧ ದಾವಣಗೆರೆಯಲ್ಲಿಯೇ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ನಾನೇ ಮಠದ ಭಕ್ತರನ್ನು ಸಮಾಧಾನಪಡಿಸಿದ್ದೇನೆ. ಮಠದ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೆ ರಂಪಾಟ ಮಾಡುವುದು ಬೇಡ ಎಂಬ ಸಲಹೆ ನೀಡಿದ್ದೆ. ಅವರೂ ಸಹ ಸುಮ್ಮನಾದರು. ಇಲ್ಲದಿದ್ದರೆ ಪ್ರತಿಭಟನೆಗಳು ನಡೆಯುತ್ತಿದ್ದವು. ಸಿರಿಗೆರೆ ಮಠದ ಹೆಸರು ಹಾಳು ಮಾಡುವವರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುವ ಬದಲು ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ಭಕ್ತರಿಗೆ ಕಿವಿಮಾತು ಹೇಳಿದರು.

ಸಿರಿಗೆರೆ ಮಠದ ವಿಚಾರ ಸಂಬಂಧ ಈಗ ಎದ್ದಿರುವ ವಿವಾದ ಬಂಡವಾಳಶಾಹಿಗಳು ಮತ್ತು ಮಠದ ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷವೇ ಹೊರತು, ಗುರು ಶಿಷ್ಯರ ಸಂಘರ್ಷ ಅಲ್ಲ ಎಂದು ಸ್ಪಷ್ಟಪಡಿಸಿದರು.

ತನ್ನ ಪತ್ನಿ ಗರತಿ ಎಂಬುದು ಪತಿಗೆ ಗೊತ್ತಿದ್ದರೆ ಸಾಕು. ಆತ ತನ್ನ ಹೆಂಡತಿ ಗರತಿ ಎಂದು ಊರು ತುಂಬೆಲ್ಲಾ ಟಾಂಟಾಂ ಹೊಡೆಯುವ ಅವಶ್ಯಕತೆ ಇಲ್ಲ. ಸುಳ್ಳು ಸತ್ಯದ ಬಟ್ಟೆ ಹಾಕಿಕೊಂಡು ಓಡಾಡುತ್ತಿದೆ. ಸುಳ್ಳು ಮತ್ತು ಸತ್ಯ ಬಾವಿಯೊಂದರಲ್ಲಿ
ಈಜಾಡುತ್ತಿದ್ದವು. ಸತ್ಯಕ್ಕೆ ಗೊತ್ತಾಗದಂತೆ ಬಾವಿಯಿಂದ ಮೇಲೆ ಬಂದು ಸತ್ಯದ ಬಟ್ಟೆ ಹಾಕಿಕೊಂಡು ತನ್ನ ಬಟ್ಟೆಯನ್ನು ಬುಟ್ಟಿಯಲ್ಲಿ ಹಾಕಿಕೊಂಡು ಸುಳ್ಳು ಓಡಿ ಹೋಯಿತಂತೆ. ಸತ್ಯ ಬಾವಿಯ ಮೇಲೆ ಬಂದು ನೋಡಿದಾಗ ಬಟ್ಟೆ ಇರಲಿಲ್ಲವಂತೆ. ಆಗ ಮರ್ಯಾದೆ ಉಳಿಸಿಕೊಳ್ಳಲು ಮತ್ತೆ ಬಾವಿಗೆ ಇಳಿಯಿತಂತೆ. ಈ ಪರಿಸ್ಥಿತಿ ಮಠದ್ದಾಗಿದೆ ಎಂದು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಕಥೆಯೊಂದನ್ನು ಹೇಳುವ ಮೂಲಕ ವಿವರಿಸಿದರು.

ಶಾಸಕ ಎಂ. ಚಂದ್ರಪ್ಪ, ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಆರ್ ಗಿರೀಶ್, ಶಿಲ್ಪಿಗಳಾದ ಅರುಣ್ ಕುಮಾರ್ ಆಚಾರ್ಯ, ಮಹೇಶ್, ಖ್ಯಾತ ಪ್ರವಚನಕಾರರಾದ ಹಿಂದುಮತಿ ಸಾಹಿಮಠ್ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment