SUDDIKSHANA KANNADA NEWS/DAVANAGERE/DATE:14_12_2025
ದಾವಣಗೆರೆ: ನಕಲಿ ಬಂಗಾರ ನೀಡಿ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿಯ ಪರಶುರಾಮ (43) ಹಾಗೂ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ದಾನಿಹಳ್ಳಿ ಗ್ರಾಮದ ಮನೋಜ್ @ ಮನು ಬಂಧಿತ ಆರೋಪಿಗಳು. ಬಂಧಿತರಿಂದ ರೂ. 5 ಲಕ್ಷದ 90 ಸಾವಿರ ನಗದು, ಒಂದು ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.
ಘಟನೆ ಹಿನ್ನೆಲೆ:
ಕಳೆದ ನವೆಂಬರ್ 21ರಂದು ರಾತ್ರಿ 9.30ರ ಸುಮಾರಿನಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕುಂದೂರು ಗ್ರಾಮದ ಆಟೋ ಡ್ರೈವರ್ ಕೆ. ವಿ. ಮೂರ್ತಿ ಅವರು ಹೊನ್ನಾಳಿ ಪೊಲೀಸರಿಗೆ ದೂರು ನೀಡಿದ್ದರು.
ಮಳವಳ್ಳಿ ನಗರದಿಂದ ಕುಂದೂರು ಗ್ರಾಮಕ್ಕೆ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದ ಮೂರ್ತಿ ಅವರಿಗೆ ಕಳೆದ ಮೂರು ವರ್ಷದ ಹಿಂದೆ ಮಂಜುನಾಥ ಅಲಿಯಾಸ್ ಮಂಜು, ಶಿವಮೊಗ್ಗ ಎಂಬ ವ್ಯಕ್ತಿ ಮಳವಳ್ಳಿಯಲ್ಲಿ ಪರಿಚಯವಾಗಿದ್ದ.
ನಂತರ ದಿನಗಳಲ್ಲಿ ಮೊಬೈಲ್ ನಂಬರ್ ಪಡೆದಿದ್ದ ಮಂಜುನಾಥ ಮೂರ್ತಿ ಅವರಿಗೆ ಕರೆ ಮಾಡಿ ನಮ್ಮ ಅಜ್ಜಪ್ಪನ ಮನೆಯ ಪೌಂಡೇಷನ್ ತಗೆಯುವಾಗ ನಾಲ್ಕು ಕೆ.ಜಿ ಯಷ್ಟು ಬಂಗಾರ ಸಿಕ್ಕಿದೆ ಎಂದು ಪದೇ ಪದೇ ಫೋನ್ ಮಾಡಿದ್ದಾನೆ. ಒಂದು ಕಾಲು ಕೆ.ಜಿ ಬಂಗಾರವನ್ನು ಇಂದಿನ ಮಾರ್ಕಟ್ ರೇಟಿಗಿಂತ ಅರ್ಧ ದರಕ್ಕೆ ನೀಡುವುದಾಗಿ ನಂಬಿಸಿದ್ದಾನೆ.
ಆಗ ಮೂರ್ತಿ ಅಷ್ಟೊಂದು ಹಣ ಇಲ್ಲ ಎಂದಿದ್ದಾನೆ. ಇದಕ್ಕೆ ನೀನು 10 ಲಕ್ಷ ರೂ ಹಣವನ್ನು ಜೋಡಿಸಿಕೊಂಡು ಬಾ, ಮೊದಲು ನಾನು ನಿನಗೆ ಒಂದು ಬಂಗಾರದ ಬಿಲ್ಲೆಯನ್ನು ಕೊಡುತ್ತೇನೆ. ಅದನ್ನು ಪರೀಕ್ಷಿಸಿಕೊಂಡು ನಂತರ ನಿನಗೆ ನಂಬಿಕೆ ಬಂದರೆ ಕಾಲು ಕೆ.ಜಿ ಬಂಗಾರ ನೀಡುವುದಾಗಿ ಪುಸಲಾಯಿಸಿದ್ದಾನೆ. ಇದನ್ನು ನಂಬಿದ ಮೂರ್ತಿ ಸ್ನೇಹಿತರ ಬಳಿ ಹಾಗೂ ಇತರೆ ಕಡೆ ಸೇರಿ ಒಟ್ಟು 7 ಲಕ್ಷ ರೂ ಜೋಡಿಸಿಕೊಂಡು ನವೆಂಬರ್ 21ರಂದು ಹೊನ್ನಾಳಿ ಮಠದ ಸರ್ಕಲ್ ಬಳಿ ಇರುವ ಆರ್ಚ್ ಬಳಿ ಬಂದಿದ್ದಾನೆ. ಇಲ್ಲಿಗೆ ಕರೆದುಕೊಂಡು ಬಂದಿದ್ದ ಮಂಜುನಾಥನು ಒಂದು ಬಿಲ್ಲೆ ಬಿಲ್ಲೆ ಕೊಟ್ಟಿದ್ದಾನೆ. ಈ ಬಿಲ್ಲೆಯನ್ನು ಹೊನ್ನಾಳಿ ನಗರದ ಬಂಗಾರದ ಅಂಗಡಿಗೆ ಹೋಗಿ ಪರೀಕ್ಷಿಸಿದ್ದು, ಬಂಗಾರದ ಬಿಲ್ಲೆ ಎಂದಿದ್ದಾರೆ.
ಆಗ ಮಂಜುನಾಥನು ಬಟ್ಟೆ ಕಟ್ಟಿದ್ದ ಗಂಟು ಕೊಟ್ಟು ಇದರಲ್ಲಿ ಬಂಗಾರದ ಬಿಲ್ಲೆಗಳು ಇವೆ ಅಂತ ಹೇಳಿದ್ದಾನೆ. ಆಗ ಇಬ್ಬರು ಸೇರಿ 6 ಲಕ್ಷ ಹಣ ಹಾಗೂ ನನ್ನ ಮೊಬೈಲ್ ಫೋನ್ ಪಡೆದುಕೊಂಡು ಇಲ್ಲಿ ನಿಲ್ಲಬೇಡ ಯಾರಾದರೂ ಬರುತ್ತಾರೆ ಬೇಗ ಹೋಗು ಅಂತ
ಹೇಳಿ ಗಾಬರಿಪಡಿಸಿ ಇಬ್ಬರು ಯಾವುದೋ ಒಂದು ಬೈಕ್ ನಲ್ಲಿ ಹೋದರು. ನಾನು ಗಾಬರಿಗೊಂಡು ನನ್ನ ತಮ್ಮ ಹಾಗೂ ನನ್ನ ಸ್ನೇಹಿತನ ಬಳಿ ಬಂದು ಅವರು ಕೊಟ್ಟು ಹೋಗಿದ್ದ ಗಂಟನ್ನು ಬಿಚ್ಚಿದೆವು, ಅದರಲ್ಲಿ ಒಂದು ಪ್ಲಾಸ್ಟಿಕ್ ಕವರಿನಲ್ಲಿ ವೃತ್ತಕಾರದ ಸುಮಾರು 150 ಗ್ರಾಂನಷ್ಟಿದ್ದ ಬಿಲ್ಲೆಗಳಿದ್ದವು, ಅವುಗಳನ್ನು ನಾವು ಹೊನ್ನಾಳಿಯಲ್ಲಿರುವ ಬಂಗಾರದ ಅಂಗಡಿಯಲ್ಲಿ ಪರೀಕ್ಷಿಸಿದಾಗ ಅವುಗಳು ನಕಲಿ ಬಂಗಾರದ ಬಿಲ್ಲೆಗಳು ಅಂತ ತಿಳಿಸಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು. ಇನ್ನು ಈತನ ಜೊತೆಗೆ ಇಬ್ಬರು ಇದ್ದು ಅವರನ್ನೂ ಬಂಧಿಸುವಂತೆ ದೂರಿನಲ್ಲಿ ಮೂರ್ತಿ ಒತ್ತಾಯಿಸಿದ್ದರು.
ಆರೋಪಿ ಹಿನ್ನೆಲೆ:
ಆರೋಪಿತ ಪರಶುರಾಮ ಈತನ ಮೇಲೆ ಈ ಹಿಂದೆ ಸಾಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಬಿಡುಗಡೆ ಹೊಂದಿದ್ದಾನೆ. ನಂತರ ದಾವಣಗೆರೆ ಹೊನ್ನಾಳಿ ಠಾಣೆಯಲ್ಲಿ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಈ ಪ್ರಕರಣ ಭೇದಿಸಿದ ಹೊನ್ನಾಳಿ ಪೊಲೀಸರನ್ನು ಎಸ್ಪಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.





Leave a comment