(bpl-card-:) ವಿದ್ಯಾರ್ಥಿಗಳು ಶೈಕ್ಷಣಿಕ ಸೌಲಭ್ಯ, ಸರ್ಕಾರದ ನಾನಾ ಸೌಲಭ್ಯ ಪಡೆಯಲು ಬಿಪಿಎಲ್ ಕಾರ್ಡ್ ಅವಶ್ಯವಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದಿರುವ ಹೊಸ ಸೌಲಭ್ಯ ಪಡೆಯಲು ಬಿಪಿಎಲ್ ಕಾರ್ಡ್‌ದಾರರು ಅರ್ಹರಾಗಿರುತ್ತಾರೆ. ಅಲ್ಲದೆ, ಆರೋಗ್ಯ ಸೌಲಭ್ಯ ಪಡೆಯಲು ಬಿಪಿಎಲ್ ಕಾರ್ಡ್ ಕಡ್ಡಾಯವಾಗಿದ್ದು, ಇದಕ್ಕಾಗಿ ಬಹುತೇಕರು ಬಿಪಿಎಲ್ ಕಾರ್ಡ್ ಪಡೆಯಲು ಮುಂದಾಗಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ಪಡೆಯಲು ಅನುಮತಿ ನೀಡಿರುವ ಕಾರಣ 3,22,483 ಅರ್ಜಿಗಳು ಸಲ್ಲಿಕೆಯಾಗಿದ್ದು, ಮೂವತ್ತೊಂದು ಜಿಲ್ಲೆಗಳಿಂದ ಬೇಡಿಕೆ ಹೆಚ್ಚಿದೆ.
ರಾಜ್ಯದ ನಾನಾ ಜಿಲ್ಲೆಗಳಲ್ಲಿ ಬಿಪಿಎಲ್ ಪಡಿತರ ಚೀಟಿ ಪಡೆಯಲು ಜನ ಮುಂದೆ ಬಂದಿದ್ದು, ಒಟ್ಟು – 3,22,483 ಅರ್ಜಿಗಳು ಸಲ್ಲಿಕೆಯಾಗಿವೆ ಎಂಬ ಮಾಹಿತಿಯನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಬಹಿರಂಗಪಡಿಸಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಅರ್ಜಿ?
- ಬಾಗಲಕೋಟೆ – 13,335
- ಬಳ್ಳಾರಿ – 10,501
- ಬೆಂಗಳೂರು ಪೂರ್ವ – 6082
- ಬೆಂಗಳೂರು ಉತ್ತರ -4,747
- ಬೆಂಗಳೂರು ಪಶ್ಚಿಮ – 4794
- ಬೆಂಗಳೂರು ದಕ್ಷಿಣ – 11,010
- ಬೆಳಗಾವಿ – 32,880
- ಬೆಂಗಳೂರು ನಗರ – 16,438
- ಬೆಂಗಳೂರು ಗ್ರಾಮಾಂತರ – 7,041
- ಬೀದರ್ – 18,262
- ಚಾಮರಾಜನಗರ – 3,639
- ಚಿಕ್ಕಬಳ್ಳಾಪುರ – 5,356
- ಚಿಕ್ಕಮಗಳೂರು – 3,628
- ಚಿತ್ರದುರ್ಗ – 6,432
- ದಕ್ಷಿಣ ಕನ್ನಡ – 4,879
- ದಾವಣಗೆರೆ – 4,879
- ಧಾರವಾಡ – 11,575
- ಗದಗ – 9,881
- ಹಾಸನ – 5,452
- ಹಾವೇರಿ – 11,094
- ಕಲಬುರ್ಗಿ -26,898
- ಕೊಡಗು – 1,583
- ಕೋಲಾರ – 5,006
- ಕೊಪ್ಪಳ – 8,506
- ಮಂಡ್ಯ – 4,756
- ಮೈಸೂರು – 6,796
- ರಾಯಚೂರು – 15,608
- ರಾಮನಗರ – 3,856
- ಶಿವಮೊಗ್ಗ – 6583
- ತುಮಕೂರು -8379
- ಉಡುಪಿ – 2,318
- ಉತ್ತರ ಕನ್ನಡ – 4,055
- ವಿಜಯನಗರ – 5,364
- ವಿಜಯಪುರ – 24,089
- ಯಾದಗಿರಿ – 7,451
ಒಟ್ಟು – 3,22,483
2023ರಲ್ಲಿ 2,95,986 ಅರ್ಜಿಗಳ ವಿಲೇವಾರಿಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಇದರಲ್ಲಿ 62,595 ಅರ್ಜಿಗಳಿಗೆ ಅನುಮೋದಿಸಿದ್ದು, 4,679 ಅರ್ಜಿ ತಿರಸ್ಕರಿಸಲಾಗಿದೆ. ಬಾಕಿ ಉಳಿದ 2,28,712 ಅರ್ಜಿಗಳ ಬಗ್ಗೆ ಸ್ಥಳ ಪರಿಶೀಲಿಸಿ ತ್ವರಿತವಾಗಿ ವಿಲೇವಾರಿ ಮಾಡಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ಮತ್ತು ಉಪನಿರ್ದೇಶಕರಿಗೆ ಸರ್ಕಾರ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ.