Home ದಾವಣಗೆರೆ ದಾವಣಗೆರೆ ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷರಾಗಿ ಎಂ. ಜೆ. ನಾಗರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಡಿ. ಆರ್. ಶ್ರೀನಿವಾಸ್ ಕಲ್ಪತರು ಆಯ್ಕೆ
ದಾವಣಗೆರೆಬೆಂಗಳೂರು

ದಾವಣಗೆರೆ ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷರಾಗಿ ಎಂ. ಜೆ. ನಾಗರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಡಿ. ಆರ್. ಶ್ರೀನಿವಾಸ್ ಕಲ್ಪತರು ಆಯ್ಕೆ

Share
Share

SUDDIKSHANA KANNADA NEWS/DAVANAGERE/DATE:10_12_2025

ದಾವಣಗೆರೆ ಜಿಲ್ಲಾ ಒಕ್ಕಲಿಗ ಸಂಘಕ್ಕೆ ಅಧ್ಯಕ್ಷರಾಗಿ ಎಂ. ಜೆ. ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಡಿ. ಆರ್. ಶ್ರೀನಿವಾಸ್ ಕಲ್ಪತರು ಆಯ್ಕೆಯಾಗಿದ್ದಾರೆ.

ಜಿಲ್ಲಾ ಒಕ್ಕಲಿಗ ಸಂಘದ ಇತ್ತೀಚೆಗೆ ತೆರವಾಗಿದ್ದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ನೇಮಕ ಮಾಡಲಾಗಿದೆ.

ಗೌರವಾಧ್ಯಕ್ಷರಾಗಿ ಸಿ. ಪುಟ್ಟರಾಜು, ಉಪಾಧ್ಯಕ್ಷರಾಗಿ ಮಂಜುಶ್ರೀ ಗೌಡ ಎಸ್. ಎಸ್., ಖಜಾಂಚಿಯಾಗಿ ಎಂ. ಕುಮಾರ್ ಆಯ್ಕೆಯಾಗಿದ್ದಾರೆ.

ಸಂಘದ ಸಭೆಯಲ್ಲಿ ಗೌರವಾಧ್ಯಕ್ಷರು, ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಸಂಘದ ಹಾಗೂ ಸಮಾಜದ ಏಳಿಗೆಗಾಗಿ ಉತ್ತಮ ಕಾರ್ಯನಿರ್ವಹಿಸಲಿ ಎಂದು ಎಲ್ಲಾ ಸದಸ್ಯರು ಸಭೆಯಲ್ಲಿ ಶುಭ ಹಾರೈಸಿದರು.

ಈ ಪದಾಧಿಕಾರಿಗಳನ್ನು ಕಲ್ಪತರು ಕ್ರೆಡಿಟ್ ಕೋ ಆಪ್ ಸೊಸೈಟಿ, ಒಕ್ಕಲಿಗ ಸಾರ್ವಜನಿಕ ವಿದ್ಯಾರ್ಥಿನಿಲಯ, ಶನೇಶ್ವರ ದೇವಾಲಯ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *