SUDDIKSHANA KANNADA NEWS/DAVANAGERE/DATE:08_12_2025
ದಾವಣಗೆರೆ: ಹರಿಹರದ ಬಾಲಯೋಗಪಟು ಕೆ. ವೈ. ಸೃಷ್ಟಿ ಅವರಿಗೆ ಕಲಾಶ್ರೀ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನಲ್ಲಿ ಐಸಿಡಿಎಸ್ ಯೋಜನೆ ಆರಂಭಗೊಂಡ 50 ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಳಾಕರ್ ಅವರು ದಾವಣಗೆರೆ ಜಿಲ್ಲೆಯ ಬಾಲ ಯೋಗ ಪಟು, ಸಂತೇಬೆನೂರು ಚೈತನ್ಯ ಗುರುಕುಲ ಶಾಲೆಯ ವಿದ್ಯಾರ್ಥಿನಿ ಹರಿಹರದ ಕು. ಕೆ.ವೈ.ಸೃಷ್ಠಿ ಅವರಿಗೆ ಕಲಾಶ್ರೀ ರಾಜ್ಯಮಟ್ಟದ ಪ್ರಶಸ್ತಿ,ನಗದು ಬಹುಮಾನ ನೀಡಿ ಸನ್ಮಾನಿಸಿದರು.
ಇದೇ ವೇಳೆ ರಾಜ್ಯದಲ್ಲಿಯೇ ಅತೀ ಹೆಚ್ಚು ಕಾರ್ಯಕ್ರಮಗಳನ್ನು ಉತ್ತಮವಾಗಿ ಆಯೋಜಿಸಿದ್ಧಾಕ್ಕಾಗಿ ಉತ್ತಮ ಕಾರ್ಯಕ್ರಮ ಸಂಯೋಜಕರು ಎಂದು ದಾವಣಗೆರೆ ಜಿಲ್ಲೆಯ ಕಾರ್ಯಕ್ರಮ ಸಂಯೋಜಕರಾದ ಶಿಲ್ಪ ಎಸ್. ಬಿ ಅವರಿಗೆ 2025ನೇ ಸಾಲಿನ ರಾಜ್ಯ ಮಟ್ಟದ ಕಲಾಶ್ರೀ ಆಯ್ಕೆ ಶಿಬಿರದಲ್ಲಿ ಪುರಸ್ಕಾರ ನೀಡಲಾಯಿತು.





Leave a comment