SUDDIKSHANA KANNADA NEWS/DAVANAGERE/DATE:08_12_2025
ದಾವಣಗೆರೆ: ಮನೆ ಕಳ್ಳತನ ಪ್ರಕರಣ ದಾಖಲಾದ ಕೇವಲ 12 ಗಂಟೆಯಲ್ಲೇ ಆರೋಪಿಯನ್ನು ಸೆರೆ ಹಿಡಿದಿರುವ ಜಗಳೂರು ಪೊಲೀಸರು, ಸುಮಾರು 6 ಲಕ್ಷ 40 ಸಾವಿರ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಸ್ತುವಳ್ಳಿ ಗ್ರಾಮದ ಬಸವರಾಜ್ (38) ಬಂಧಿತ ಆರೋಪಿ. ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದ ಶ್ರೀದೇವಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಜಗಳೂರು ಪಟ್ಟಣಕ್ಕೆ ಸಂತೆಗೆ ತಮ್ಮ ವಾಸದ ಮನೆಗೆ ಬೀಗ ಹಾಕಿಕೊಂಡು ಶ್ರೀದೇವಿ ಬಂದಿದ್ದರು. ಸಂಜೆ 5.30 ಗಂಟೆಗೆ ತಮ್ಮ ಮನೆಗೆ ಹೋದಾಗ ಮನೆಯ ಬಾಗಿಲ ಬೀಗ ಮುರಿದು ಗಾರ್ಡೇಜ್ ಬೀರುವಿನಲ್ಲಿಟ್ಟದ್ದ ಸುಮಾರು 6 ಲಕ್ಷ 40 ಸಾವಿರ ರೂ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಗೊತ್ತಾಗಿದೆ.
ಜಗಳೂರು ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ರಾಮಯ್ಯ ನೇತೃತ್ವದಲ್ಲಿ ಅಧಿಕಾರಿ, ಸಿಬ್ಬಂದಿಗಳ ತಂಡ ನಿಯೋಜಿಸಲಾಗಿತ್ತು. ತಂಡವು ಪ್ರಕರಣದ ಆರೋಪಿತನಾದ ತಿಪ್ಪೇಸ್ವಾಮಿಯನ್ನು ಬಂಧಿಸಿದ್ದು, ಆರೋಪಿತನಿಂದ ಕಳವು ಮಾಡಿದ್ದ
ಸುಮಾರು 6 ಲಕ್ಷ 40 ಸಾವಿರ ರೂ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಈ ಪ್ರಕರಣದಲ್ಲಿ ಆರೋಪಿತನ ಪತ್ತೆ ಹಾಗೂ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಜಗಳೂರು ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ರಾಮಯ್ಯರ, ಎಎಸ್ಐ ವೆಂಕಟೇಶ್, ಸಿಬ್ಬಂದಿ ಉಮಾಶಂಕರ್, ನಾಗರಾಜಯ್ಯ, ನಾಗಭೂಷಣ, ಚೈತ್ರ, ಕರಿಬಸವರಾಜ್ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.





Leave a comment