Home ಕ್ರೈಂ ನ್ಯೂಸ್ BIG BREAKING: ಡ್ರಗ್ಸ್ ಸೇವಿಸಿ ಈಶ್ವರ ಫ್ಲೆಕ್ಸ್ ಗೆ ಬೆಂಕಿ ಹಚ್ಚಿದ್ದ ಕಿಡಿಗೇಡಿ ಬಂಧನ: ಹಿಂದೂ ಸಂಘಟನೆಗಳ ಆಕ್ರೋಶ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

BIG BREAKING: ಡ್ರಗ್ಸ್ ಸೇವಿಸಿ ಈಶ್ವರ ಫ್ಲೆಕ್ಸ್ ಗೆ ಬೆಂಕಿ ಹಚ್ಚಿದ್ದ ಕಿಡಿಗೇಡಿ ಬಂಧನ: ಹಿಂದೂ ಸಂಘಟನೆಗಳ ಆಕ್ರೋಶ!

Share
ಈಶ್ವರ
Share

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ ಗ್ರಾಮದಲ್ಲಿ ಕಲ್ಲೇಶ್ವರ ಸ್ವಾಮಿ ಕಾರ್ತಿಕ ಮಹೋತ್ಸವ ಹಿನ್ನೆಲೆಯಲ್ಲಿ ಹಿಂದೂ ಬಾಂಧವರು ಅಳವಡಿಸಿದ್ದ ಈಶ್ವರ ದೇವರ ಫ್ಲಕ್ಸ್ ಗೆ ಶುಕ್ರವಾರ ರಾತ್ರಿ ಅನ್ಯ ಕೋಮಿನ ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಈ ಪೈಕಿ ಒಬ್ಬ ಕಿಡಿಗೇಡಿ ಸಿಕ್ಕಿಬಿದ್ದಿದ್ದು ಮಾದಕ ವಸ್ತು ಸೇವಿಸಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ.

READ ALSO THIS STORY: “ರಾಟ್ ವೀಲರ್ ನಾಯಿಗಳ ದಾಳಿಗೆ ಮಹಿಳೆ ಕೇಸ್: ನಾಯಿ ಮಾಲೀಕರ ಪತ್ತೆ ಹಚ್ಚಿ ಎಫ್ಐಆರ್ ದಾಖಲಿಸಿ”

ಈಶ್ವರನ ಫ್ಲೆಕ್ಸ್ ಗೆ ಬೆಂಕಿ ಹಚ್ಚಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಕಿಡಿಗೇಡಿಗಳು ರಾತ್ರಿ ಹಿಂದೂಗಳ ಆರಾಧ್ಯ ದೈವ ಈಶ್ವರನ ಕಟೌಟ್ ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಯಾವುದೇ ಕಾರಣಕ್ಕೂ ಪೊಲೀಸರು ಆರೋಪಿಗಳನ್ನು ಬಿಡಬಾರದು. ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿರುವ ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರು ಭೇಟಿ ನೀಡಿ, ಘಟನೆಯನ್ನು ಖಂಡಿಸಿದರು. ಸ್ಥಳೀಯರಿಂದ ಘಟನೆ ಬಗ್ಗೆ ಮಾಹಿತಿ ಪಡೆದರು. ತಕ್ಷಣ ಕಿಡಿಗೇಡಿಗಳನ್ನು ಬಂಧಿಸಬೇಕಿಂದು ಪೊಲೀಸ್ ಇಲಾಖೆಗೆ ಆಗ್ರಹಿಸಿದರಲ್ಲದೇ, ಸ್ಥಳದಲ್ಲಿದ್ದ ಅನ್ಯ ಕೋಮಿನ ಬಾವುಟ ತೆರವುಗೊಳಿಸಲಾಯಿತು.

ಇನ್ನು ಸಾಸ್ವೆಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಅಮಲಿನಲ್ಲಿ ಓಡಾಡುತ್ತಿದ್ದ ಮಹಮದ್ ಸುಹೈಲ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇನ್ನು ಈತ ಸಾಸ್ವೆಹಳ್ಳಿ ಗ್ರಾಮದ ಜಾಮೀಯಾ ಮಸೀದಿ ಪಕ್ಕದಲ್ಲಿನ ಅಗಸೆಬಾಗಿಲ ಹತ್ತಿರ ವಾಸವಿದ್ದ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಮಹಮದ್ ಸುಹೈಲ್ ನಿಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮಾದಕ ವ್ಯಸನ ಮಾಡಿದ್ದ ಎಂಬುದು ವೈದ್ಯರ ವರದಿಯಿಂದ ತಿಳಿದು ಬಂದಿದೆ.

Share

Leave a comment

Leave a Reply

Your email address will not be published. Required fields are marked *