Home ದಾವಣಗೆರೆ ದಾವಣಗೆರೆಯ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಂದೇ ದಿನ 5 ಸಂಪೂರ್ಣ ಮೊಣಕಾಲು ಮಂಡಿ ಚಿಪ್ಪು ಬದಲಾವಣೆಯ ಯಶಸ್ವಿ ಶಸ್ತ್ರಚಿಕಿತ್ಸೆ!
ದಾವಣಗೆರೆಬೆಂಗಳೂರು

ದಾವಣಗೆರೆಯ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಂದೇ ದಿನ 5 ಸಂಪೂರ್ಣ ಮೊಣಕಾಲು ಮಂಡಿ ಚಿಪ್ಪು ಬದಲಾವಣೆಯ ಯಶಸ್ವಿ ಶಸ್ತ್ರಚಿಕಿತ್ಸೆ!

Share
ದಾವಣಗೆರೆ
Share

SUDDIKSHANA KANNADA NEWS/DAVANAGERE/DATE:02_12_2025

ದಾವಣಗೆರೆ: ನಗರದ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಂದು ಒಂದೇ ದಿನದಲ್ಲಿ ಐದು ಸಂಪೂರ್ಣ ಮೊಣಕಾಲು ಬದಲಾವಣೆ (ಟೋಟಲ್ ನೀ ರಿಪ್ಲೇಸ್ಮೆಂಟ್ – TKR) ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.

READ ALSO THIS STORY: ಕುಡುಕರಿಗೆ ಒಬ್ಬ ದೇವರು, ಇಬ್ಬರು ಹೆಂಡಿರರಿಗೆ ಒಂದು ದೇವರು.. ಅವಿವಾಹಿತರಿಗೆ ಹನುಮಂತ ದೇವರು: ಹಿಂದೂ ದೇವರ ಅಪಹಾಸ್ಯ ಮಾಡಿದ ಸಿಎಂ ರೇವಂತ್ ರೆಡ್ಡಿ!

ಈ ಎಲ್ಲಾ ಶಸ್ತ್ರಚಿಕಿತ್ಸೆಗಳು ಪ್ರಸಿದ್ಧ ಮಂಡಿ ಕೀಲು ಬದಲಾವಣೆ ತಜ್ಞರಾದ ಬೆಂಗಳೂರಿನ ಖ್ಯಾತ ವೈದ್ಯ ಡಾ. ಲಿಂಗರಾಜ್ ಎ.ಪಿ. ಮತ್ತು ಆರೈಕೆ ಆಸ್ಪತ್ರೆಯ ಡಾ. ಧ್ರುವ ವಿ ಅವರ ಪರಿಣಿತಿ ಮತ್ತು ಮಾರ್ಗದರ್ಶನದಲ್ಲಿ ನಡೆಯಿತು.

ಅತ್ಯಾಧುನಿಕ ಡಿಜಿಟಲ್ ಯೋಜನಾ ವ್ಯವಸ್ಥೆಗಳು, ಅತಿ ನಿಖರವಾದ ಶಸ್ತ್ರಚಿಕಿತ್ಸಾ ಉಪಕರಣಗಳು ಹಾಗೂ ಕನಿಷ್ಟ ತೊಂದರೆ ಉಂಟುಮಾಡುವ (ಮಿನಿಮಲಿ ಇನ್ವೇಸಿವ್) ತಂತ್ರಗಳನ್ನು ಬಳಸಿ ಒಂದೇ ದಿನದಲ್ಲಿ ಐದು ಶಸ್ತ್ರಚಿಕಿತ್ಸೆಗಳನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ನೆರವೇರಿಸಲು ಸಾಧ್ಯವಾಯಿತು. ಇಂತಹ ತಂತ್ರಜ್ಞಾನದ ಬಳಕೆಯಿಂದ ರಕ್ತಸ್ರಾವ ಕಡಿಮೆಯಾಗುವುದು, ಅತ್ಯಂತ ನಿಖರವಾದ ಇಂಪ್ಲಾಂಟ್ ಅಳವಡಿಕೆ, ಶಸ್ತ್ರಚಿಕಿತ್ಸೆಯ ನಂತರದ ನೋವು ತಗ್ಗುವುದು ಮತ್ತು ವೇಗವಾದ ಚೇತರಿಕೆ ಸಾಧ್ಯವಾಗುತ್ತದೆ.

ಈ ಸಾಧನೆಯ ಕುರಿತು ಮಾತನಾಡಿದ ಡಾ. ಲಿಂಗರಾಜ್ ಎ.ಪಿ. ಅವರು “ಒಂದೇ ದಿನದಲ್ಲಿ ಐದು ಯಶಸ್ವಿ TKR ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿರುವುದು ನಮ್ಮ ತಂಡದ ನಿಷ್ಠೆ, ಸಮರ್ಪಣೆ ಮತ್ತು ಸಮಗ್ರ ಯೋಜನೆಯ ಪ್ರತೀಕವಾಗಿದೆ. ಎಂದರು.

ಈ ಸಂದರ್ಭದಲ್ಲಿ ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರವಿಕುಮಾರ್ ಅವರು ಮಾತನಾಡಿ ಆರೈಕೆ ಆಸ್ಪತ್ರೆಯಲ್ಲಿ ನಾವು ನಮ್ಮ ರೋಗಿಗಳಿಗೆ ಹೆಚ್ಚು ಸುರಕ್ಷಿತವಾದ, ಉತ್ತಮ ಫಲಿತಾಂಶ ನೀಡುವ ಮತ್ತು ವೇಗವಾಗಿ ಚೇತರಿಸಿಕೊಳ್ಳುವ ಚಿಕಿತ್ಸೆ ನೀಡಲು ಅತ್ಯಾಧುನಿಕ ತಂತ್ರಜ್ಞಾನವನ್ನು ನಿರಂತರವಾಗಿ ಅಳವಡಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಶಸ್ತ್ರಚಿಕಿತ್ಸೆಗೊಳಗಾದ ಎಲ್ಲಾ ರೋಗಿಗಳು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದು, ಆರೈಕೆ ಆಸ್ಪತ್ರೆಯ ನಿಪುಣ ಫಿಜಿಯೋಥೆರಪಿ ಮತ್ತು ಶಸ್ತ್ರಚಿಕಿತ್ಸೆ ಬಳಿಕದ ಆರೈಕೆ ತಂಡದಿಂದ ವೈಯಕ್ತಿಕ ಪುನರ್ವಸತಿ ಮಾರ್ಗದರ್ಶನವನ್ನು ಪಡೆಯುತ್ತಿದ್ದಾರೆ
ಎಂದು ಮಾಹಿತಿ ನೀಡಿದರು.

ಈ ಸಾಧನೆ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಅತ್ಯಾಧುನಿಕ ಕೀಲು ಮತ್ತು ಮಂಡಿ ಹಾಗೂ ಜಾಯಿಂಟ್ ರಿಪ್ಲೇಸ್ಮೆಂಟ್ ಚಿಕಿತ್ಸೆಯ ಕೇಂದ್ರವಾಗಿ ಮತ್ತಷ್ಟು ಬಲಪಡಿಸಿದೆ.

Share

Leave a comment

Leave a Reply

Your email address will not be published. Required fields are marked *