Home ದಾವಣಗೆರೆ 315.35 ಹೆಕ್ಟೇರ್ ಬೆಳೆ ಹಾನಿ ಪ್ರದೇಶಕ್ಕೆ ರೂ. 51 ಲಕ್ಷ ಬೆಳೆ ನಷ್ಟ ಪರಿಹಾರ
ದಾವಣಗೆರೆಬೆಂಗಳೂರು

315.35 ಹೆಕ್ಟೇರ್ ಬೆಳೆ ಹಾನಿ ಪ್ರದೇಶಕ್ಕೆ ರೂ. 51 ಲಕ್ಷ ಬೆಳೆ ನಷ್ಟ ಪರಿಹಾರ

Share
Share

SUDDIKSHANA KANNADA NEWS/DAVANAGERE/DATE:28_11_2025

ದಾವಣಗೆರೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತೀವೃಷ್ಠಿಯಿಂದ ಜಿಲ್ಲೆಯಲ್ಲಿ 315.35 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯುಂಟಾಗಿದ್ದು, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಮಾರ್ಗಸೂಚಿಯಂತೆ ರೂ.51,10,331 ಬೆಳೆ ನಷ್ಟ ಪರಿಹಾರ ವಿತರಿಸಲಾಗಿದೆ.

ಮಳೆಯಾಶ್ರಿತ ಬೆಳೆ ಪ್ರತಿ ಹೆಕ್ಟೇರ್‍ಗೆ ರೂ.8500 ರಿಂದ 17,000, ನೀರಾವರಿ ಬೆಳೆಗಳಿಗೆ ರೂ. 17 ಸಾವಿರದಿಂದ ರೂ.25,500 ಹಾಗೂ ಬಹುವಾರ್ಷಿಕ ಬೆಳೆಗಳಿಗೆ ರೂ.22,500 ರಿಂದ ರೂ.31,000 ವರೆಗೆ ಜಿಲ್ಲೆಯ 542 ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ರೂ.51,10,331 ನಷ್ಟು ಬೆಳೆನಷ್ಟ ಪರಿಹಾರ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *