SUDDIKSHANA KANNADA NEWS/ DAVANAGERE/ DATE:09-06-2023
ದಾವಣಗೆರೆ: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ನೇಮಕ ಮಾಡಲಾಗಿದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ದಾವಣಗೆರೆ (Davanagere)ಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿ, ಎಸ್. ಎಸ್. ಮಲ್ಲಿಕಾರ್ಜುನ್ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ ಎಂದು ಹೇಳಿದ್ದರು. ಆದ್ರೆ, ಇಂದು ಅಧಿಕೃತವಾಗಿ ಎಸ್. ಎಸ್. ಮಲ್ಲಿಕಾರ್ಜುನ್ ಅವರನ್ನು ನಿರೀಕ್ಷೆಯಂತೆ ದಾವಣಗೆರೆ (Davanagere) ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಸರ್ಕಾರ ನಿಯೋಜಿಸಿದೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಾತನಾಡಿದ್ದ ಎಸ್. ಎಸ್. ಮಲ್ಲಿಕಾರ್ಜುನ್ (S. S. MALLIKARJUN) ಅವರು, ಕುಂದುವಾಡ ಕೆರೆ, ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಯ ಬಿಲ್ ತಡೆ ಹಿಡಿಯುವಂತೆ ಸೂಚನೆ ನೀಡಿದ್ದರು. ಈಗ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕಾರಣ ಮುಂದಿನ ದಿನಗಳಲ್ಲಿ ದಾವಣಗೆರೆ (Davanagere), ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ ಎಂಬ ವಿಶ್ವಾಸ ಜನರಲ್ಲಿ ಮೂಡಿದೆ.
ಈ ಸುದ್ದಿಯನ್ನೂ ಓದಿ:
PhonePe: ಕಷ್ಟ ಅಂತೇಳಿ ಬಂದವರಿಗೆ ಫೋನ್ ಪೇ ಮಾಡ್ತಿರಾ… ಸಹಾಯ ಮಾಡಿದ ಆಪದ್ಭಾಂಧವ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವಂತಾಗಿದ್ಯಾಕೆ…?
ನಗರದ ತುಂಬೆಲ್ಲಾ ಎಲ್ಲೆಂದರಲ್ಲಿ ಗುಂಡಿಗಳನ್ನು ಅಗೆದು ಮಣ್ಣು ತೆಗೆದು ಗುಂಡಿಗಳು ಕಣ್ಣಿಗೆ ರಾರಾಜಿಸುತ್ತಿವೆ. ಇವುಗಳನ್ನು ಮಚ್ಚಬೇಕು. ಕೆಲ ಕಾಮಗಾರಿಗಳು ಅವೈಜ್ಞಾನಿಕತೆಯಿಂದ ಕೂಡಿದ್ದು ಸರಿಪಡಿಸಬೇಕು ಎಂಬ ಒತ್ತಾಯ ಜನರಿಂದ ಕೇಳಿ ಬರುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡಂತೆ ವಿವಿಧ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಯಾವ ಜಿಲ್ಲೆಗಳಿಗೆ ಯಾರು ಜಿಲ್ಲಾ ಉಸ್ತುವಾರಿ ಸಚಿವರು…?
1. ಡಿಸಿಎಂ ಡಿ. ಕೆ. ಶಿವಕುಮಾರ್ – ಬೆಂಗಳೂರು ನಗರ
2. ಡಾ. ಜಿ. ಪರಮೇಶ್ವರ್ – ತುಮಕೂರು
3. ಹೆಚ್. ಕೆ. ಪಾಟೀಲ್ – ಗದಗ
4. ಕೆ. ಹೆಚ್. ಮುನಿಯಪ್ಪ – ಬೆಂಗಳೂರು ಗ್ರಾಮಾಂತರ
5. ರಾಮಲಿಂಗಾರೆಡ್ಡಿ – ರಾಮನಗರ
6. ಕೆ. ಜೆ. ಜಾರ್ಜ್ – ಚಿಕ್ಕಮಗಳೂರು
7. ಎಂ. ಬಿ. ಪಾಟೀಲ್ – ವಿಜಯಪುರ
8. ದಿನೇಶ್ ಗುಂಡೂರಾವ್ – ದಕ್ಷಿಣ ಕನ್ನಡ
9. ಹೆಚ್. ಸಿ. ಮಹಾದೇವಪ್ಪ – ಮೈಸೂರು
10. ಸತೀಶ್ ಜಾರಕಿಹೊಳಿ – ಬೆಳಗಾವಿ
11. ಪ್ರಿಯಾಂಕ್ ಖರ್ಗೆ – ಕಲಬುರಗಿ
12. ಶಿವಾನಂದ ಪಾಟೀಲ – ಹಾವೇರಿ
13- ಬಿ. ಜಡ್. ಜಮೀರ್ ಅಹ್ಮದ್ ಖಾನ್ – ವಿಜಯನಗರ
14. ಶರಣ ಬಸಪ್ಪ ದರ್ಶನಾಪುರ್ – ಯಾದಗಿರಿ
15. ಈಶ್ವರ್ ಬಿ. ಖಂಡ್ರೆ – ಬೀದರ್
16. ಎನ್. ಚೆಲುವರಾಯಸ್ವಾಮಿ – ಮಂಡ್ಯ
17. ಎಸ್. ಎಸ್. ಮಲ್ಲಿಕಾರ್ಜುನ್ – ದಾವಣಗೆರೆ (Davanagere)
18. ಸಂತೋಷ ಎಸ್. ಲಾಡ್ – ಧಾರವಾಡ
19. ಡಾ. ಶರಣ ಪ್ರಕಾಶ್ ಪಾಟೀಲ್ – ರಾಯಚೂರು
20- ಆರ್. ಬಿ. ತಿಮ್ಮಾಪುರ -ಬಾಗಲಕೋಟೆ
21. ಕೆ. ವೆಂಕಟೇಶ್ – ಚಾಮರಾಜನಗರ
22. ಶಿವರಾಜ್ ತಂಗಡಗಿ – ಕೊಪ್ಪಳ
23. ಡಿ. ಸುಧಾಕರ್ – ಚಿತ್ರದುರ್ಗ
24. ಬಿ. ನಾಗೇಂದ್ರ – ಬಳ್ಳಾರಿ
25. ಕೆ. ಎನ್. ರಾಜಣ್ಣ -ಹಾಸನ
26. ಬಿ. ಎಸ್. ಸುರೇಶ್ – ಕೋಲಾರ
27. ಲಕ್ಷ್ಮಿ ಹೆಬ್ಬಾಳ್ಕರ್ – ಉಡುಪಿ
28. ಮಂಕಾಳ್ ವೈದ್ಯ – ಉತ್ತರ ಕನ್ನಡ
29. ಮಧು ಬಂಗಾರಪ್ಪ – ಶಿವಮೊಗ್ಗ
30. ಡಾ. ಎಂ. ಸಿ. ಸುಧಾಕರ್ – ಚಿಕ್ಕಬಳ್ಳಾಪುರ
31. ಎನ್. ಎಸ್. ಭೋಸರಾಜು – ಕೊಡಗು
Mines and Earth Sciences Department and Horticulture Minister S. S. Mallikarjun has been appointed. Chief Minister Siddaramaiah, who arrived in Davangere just a few days ago, said this in a meeting of district level officials held at the district panchayat hall. Mention about, S. S. Mallikarjun had said that he would be the district in-charge minister.
ಎಸ್. ಎಸ್. ಮಲ್ಲಿಕಾರ್ಜುನ್ ದಾವಣಗೆರೆ ಉಸ್ತುವಾರಿ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಲಕ್ಷ್ಮಿ ಹೆಬ್ಬಾಳ್ಕರ್, ಡಿ. ಕೆ. ಶಿವಕುಮಾರ್ ಗೆ ಬೆಂಗಳೂರು ನಗರ, ದಕ್ಷಿಣ ಕನ್ನಡಕ್ಕೆ ದಿನೇಶ್ ಗುಂಡೂರಾವ್, ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು.