SUDDIKSHANA KANNADA NEWS/DAVANAGERE/DATE:23_11_2025
ದಾವಣಗೆರೆ: ಬೇಸಿಗೆಯ ಬಿಸಿಲಿನ ತಾಪಮಾನದಿಂದ ಅಡಿಕೆಯನ್ನು ಬಿಸಿಲಿನಿಂದ ರಕ್ಷಿಸಲು ಸುಣ್ಣವನ್ನು ಬಳಿಯಬೇಕಾಗಿದ್ದು ನವೆಂಬರ್ ಮತ್ತು ಡಿಸೆಂಬರ್ ತಿಂಗಳು ಸೂಕ್ತವಾಗಿದೆ.
READ ALSO THIS STORY: ಜೆಡಿಎಸ್ ನಾಯಕನ ಕೊಲೆಗೆ ಯತ್ನಿಸಿದ್ದ ಆರೋಪಿಗೆ ನೆರವು ನೀಡಿದ್ದ ನಟಿ ಕಂ ಕಾಂಗ್ರೆಸ್ ನಾಯಕಿ ಅರೆಸ್ಟ್!
ಸುಣ್ಣ 10 ಕೆ ಜಿ, ಮೈದಾಹಿಟ್ಟು 500 ಗ್ರಾಂ ಮತ್ತು ಬೆಲ್ಲ 500 ಗ್ರಾಂ ತೆಗೆದುಕೊಂಡು ಸುಣ್ಣವನ್ನು ಸುಮಾರು 20 ರಿಂದ 25 ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ನೆನೆಸಿ, ಸುಣ್ಣದ ನೀರು ತಯಾರಿಸಬೇಕು. ಸುಣ್ಣವು ಚೆನ್ನಾಗಿ ಕರಗಿ ಪೇಂಟ್ ಮಾಡುವ ಹದಕ್ಕೆ ಬಂದಿರಬೇಕು.
ಮೈದಾ ಹಿಟ್ಟು ಮತ್ತು ಬೆಲ್ಲವನ್ನು ಸ್ವಲ್ಪ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು ಅಥವಾ ಬಿಸಿ ಮಾಡಿ, ದಪ್ಪ ಅಂಟು ರೀತಿಯ ಮಿಶ್ರಣ ತಯಾರಿಸಿ(ಈ ಅಂಟು ಸುಣ್ಣವನ್ನು ಗಿಡದ ಕಾಂಡಕ್ಕೆ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ)
ಬೆಲ್ಲ ಮತ್ತು ಮೈದಾಹಿಟ್ಟಿನ ಅಂಟನ್ನು, ಮೊದಲೇ ತಯಾರಿಸಿಕೊಂಡಿರುವ ಸುಣ್ಣದ ನೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಪೇಂಟ್ ಮಾಡುವ ಹದಕ್ಕೆ ತಂದು, ಅಡಿಕೆ ಗಿಡಗಳ ಕಾಂಡಕ್ಕೆ ನೆಲಮಟ್ಟದಿಂದ ಎಲೆಗಳ ಕೆಳಭಾಗದವರೆಗೆ ಸುಣ್ಣವನ್ನು ಬಳಿಯಬೇಕು ಎಂದು
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.





Leave a comment