ದಾವಣಗೆರೆ: ಕಳೆದ ವರ್ಷ 1,000 ಗ್ರಾಮ ಲೆಕ್ಕಿಗರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಪ್ರಸ್ತುತ 750 ಸರ್ವೇಯರ್ ಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. 5,000 ಗ್ರಾಮ ಲೆಕ್ಕಿಗರಿಗೆ ಲ್ಯಾಪ್‍ಟಾಪ್ ನೀಡಲಾಗಿದ್ದು, ಮಾರ್ಚ್ ಅಂತ್ಯದೊಳಗೆ ಉಳಿದ 2,000 ಜನರಿಗೂ ವಿತರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಹೊಸ ತಂತ್ರಜ್ಞಾನ ಬಳಸಿ ಕೆಲಸ ಮಾಡಲು ಸಹಕಾರಿಯಾಗಿದೆ. ಹಿಂದೆ 8,345 ಗ್ರಾಮ ಲೆಕ್ಕಿಗರಲ್ಲಿ ಕೇವಲ 2,000 ಜನರಿಗೆ ಮಾತ್ರ ಕಚೇರಿಗಳಿದ್ದವು ನಾನು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ, ಗ್ರಾಮ ಪಂಚಾಯಿತಿಗಳಲ್ಲೇ 7,850 ಗ್ರಾಮ ಲೆಕ್ಕಿಗರಿಗೆ ಕಚೇರಿ ವ್ಯವಸ್ಥೆ ಮಾಡಿಕೊಡಲಾಗಿದೆ. ಇದರಿಂದ ಜನರಿಗೆ ಗ್ರಾಮ ಲೆಕ್ಕಿಗರು ಸುಲಭವಾಗಿ ಲಭ್ಯವಾಗುತ್ತಾರೆ ಎಂದರು.
ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ ನ್ಯಾಯಾಲಯಗಳಲ್ಲಿ ಹೆಚ್ಚು ಸುಧಾರಣೆಯನ್ನು ತಂದು ತಹಶೀಲ್ದಾರರ ನ್ಯಾಯಾಲಯದಲ್ಲಿ ಬಾಕಿ ಇದ್ದ 10774 ಪ್ರಕರಣಗಳಲ್ಲಿ ಈಗ 480 ಪ್ರಕರಣಗಳು ಮಾತ್ರ ಬಾಕಿ ಉಳಿದಿವೆ. ಮತ್ತು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ 73624 ಪ್ರಕರಣಗಳಲ್ಲಿ 10800 ಮಾತ್ರ ಬಾಕಿ ಇದ್ದು ಇವುಗಳನ್ನು ಸಹ ತ್ವರಿತವಾಗಿ ವಿಲೇವಾರಿ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಈ ವೇಳೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಸಿಇಓ ಗಿತ್ತೆ ಮಾಧವ ವಿಠಲ್ ರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
- 750 Surveyor Recruitment Karnataka
- 750 ಸರ್ವೇಯರ್ ನೇಮಕಾತಿ
- Davanagere News today.
- Karnataka Revenue Department updates
- Krishna Byre Gowda Revenue Minister
- Land Surveyors job notification
- Revenue Court case status Karnataka
- VA office in Gram Panchayat
- Village Accountant Laptops distribution
- ಕಂದಾಯ ಇಲಾಖೆ ಕರ್ನಾಟಕ
- ಕಂದಾಯ ನ್ಯಾಯಾಲಯ ಪ್ರಕರಣಗಳ ವಿಲೇವಾರಿ
- ಕೃಷ್ಣ ಬೈರೇಗೌಡ
- ಗ್ರಾಮ ಆಡಳಿತ ಅಧಿಕಾರಿ ಕಚೇರಿ
- ಗ್ರಾಮ ಲೆಕ್ಕಿಗರಿಗೆ ಲ್ಯಾಪ್‍ಟಾಪ್ ವಿತರಣೆ
- ದಾವಣಗೆರೆ ಕಂದಾಯ ಇಲಾಖೆ ಸುದ್ದಿ
- ಭೂ ಮಾಪಕರ ನೇಮಕಾತಿ 2024





Leave a comment