Site icon Kannada News-suddikshana

ಸಂಚಾರಿ ಇ- ಚಲನ್ ನಲ್ಲಿ ದಾಖಲಾದ ಪ್ರಕರಣಗಳ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ: ದಾವಣಗೆರೆಯಲ್ಲಿ ಎಲ್ಲೆಲ್ಲಿ ಕಟ್ಟಬಹುದು?

ದಾವಣಗೆರೆ

SUDDIKSHANA KANNADA NEWS/ DAVANAGERE/DATE:23_08_2025

ದಾವಣಗೆರೆ: ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಈ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ರಿಯಾಯಿತಿ ನೀಡಿ ರಾಜ್ಯ ಸರ್ಕಾರವು ಆದೇಶಿಸಿದೆ.

ಈ ಸುದ್ದಿಯನ್ನೂ ಓದಿ: ಬೀದಿ ನಾಯಿಗಳಿಗೆ ಜನರು ಆಹಾರ ನೀಡುವಂತಿಲ್ಲ, ಲಸಿಕೆ ನೀಡಿ ಆಶ್ರಯ ತಾಣಗಳಿಗೆ ಬಿಡಿ: ಸುಪ್ರೀಂಕೋರ್ಟ್ ತೀರ್ಪು!

ದಂಡವನ್ನು ಪಾವತಿಸಲು ಶೇ 50% ರಷ್ಟು ರಿಯಾಯಿತಿ ಆದೇಶವು ಆಗಸ್ಟ್ 23ರಿಂದ ಅಕ್ಟೋಬರ್ 12ರವರೆಗೆ ಜಾರಿಯಲ್ಲಿರುತ್ತದೆ. ದಂಡವನ್ನು ಪಾವತಿಸದೇ ಇರುವ ಪ್ರಕರಣಗಳಿಗೆ ಶೇ.50 ರಷ್ಟು ದಂಡವನ್ನು ಪಾವತಿಸುವ
ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.

ಬಾಕಿ ಇರುವ ದಂಡದ ವಿವರ ನೋಡುವುದು, ಪಾವತಿಸುವ ವಿಧಾನ:
  1. ಕರ್ನಾಟಕ ಸ್ಟೇಟ್ ಪೊಲೀಸ್ ಆಪ್ ಮೂಲಕ ಪಾವತಿಸಬಹುದಾಗಿದೆ.
  2. ಆನ್ ಲೈನ್ ಸೇವಾ ಕೇಂದ್ರಗಳಾದ ದಾವಣಗೆರೆ ಒನ್, ಕರ್ನಾಟಕ ಒನ್ ಗಳಲ್ಲಿ ಪಾವತಿಸಬಹುದಾಗಿದೆ.
  3. ಹೆಡ್ ಪೋಸ್ಟ್ ಆಫೀಸ್ ಗಳಿಗೆ ಬೇಟಿ ನೀಡಿ ಪಾವತಿಸಬಹುದಾಗಿದೆ.
  4. ದಕ್ಷಿಣ ಸಂಚಾರ ಪೊಲೀಸ್ ಠಾಣೆ ಬೇಟಿ ನೀಡಿ ತಮ್ಮ ವಾಹನಗಳ ಮೇಲೆ ಇರುವ ಇ-ಚಲನ್ ಬಾಕಿ ಇರುವ ದಂಡ ಪಾವತಿಸಬಹುದಾಗಿದೆ

ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ಕೋರಿದೆ.

Exit mobile version