Home ದಾವಣಗೆರೆ ವಾಹನ ಸವಾರರಿಗೆ ಗುಡ್ ನ್ಯೂಸ್: ಸಂಚಾರಿ ಇ-ಚಲನ್ ಪ್ರಕರಣಗಳಲ್ಲಿ ದಂಡ ಪಾವತಿಸಿದ್ರೆ ಶೇ.50ರಷ್ಟು ರಿಯಾಯಿತಿ!
ದಾವಣಗೆರೆಕ್ರೈಂ ನ್ಯೂಸ್

ವಾಹನ ಸವಾರರಿಗೆ ಗುಡ್ ನ್ಯೂಸ್: ಸಂಚಾರಿ ಇ-ಚಲನ್ ಪ್ರಕರಣಗಳಲ್ಲಿ ದಂಡ ಪಾವತಿಸಿದ್ರೆ ಶೇ.50ರಷ್ಟು ರಿಯಾಯಿತಿ!

Share
ಚಲನ್
Share

SUDDIKSHANA KANNADA NEWS/DAVANAGERE/DATE:22_11_2025

ದಾವಣಗೆರೆ: ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ರಿಯಾಯಿತಿಯನ್ನು ನೀಡಿ ಆದೇಶಿಸಲಾಗಿದೆ.

READ ALSO THIS STORY: ದೇಶದ ಅತ್ಯುನ್ನತ ಹುದ್ದೆಗಳು ಕೇವಲ ಉಳ್ಳವರ ಕೈಯಲ್ಲಿದೆ: ಜಿ. ಬಿ. ವಿನಯ್ ಕುಮಾರ್ ಬೇಸರ

ಸಂಚಾರ ನಿಯಮಗಳ ಉಲ್ಲಂಘನೆಯ ಇ-ಚಲನ್ ದಂಡವನ್ನು ಪಾವತಿಸಲು ಶೇ 50% ರಷ್ಟು ಈ ಆದೇಶವು ನವೆಂಬರ್ 21ರಿಂದ ಡಿಸೆಂಬರ್ 12ರವರೆಗೆ ಜಾರಿಯಲ್ಲಿರಲಿದೆ. ದಂಡವನ್ನು ಪಾವತಿಸದೇ ಇರುವ ಪ್ರಕರಣಗಳಿಗೆ ಶೇ.50 ರಷ್ಟು ದಂಡವನ್ನು ಪಾವತಿಸಲು ಇನ್ನೂ ಕೆಲವೇ ದಿನಗಳು ಬಾಕಿ ಇದ್ದು ಕೂಡಲೇ ದಂಡವನ್ನು ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.

ಬಾಕಿ ಇರುವ ಇ-ಚಲನ್ ದಂಡ ಪಾವತಿಸುವ ಸ್ಥಳಗಳು:
  • 1. ಸಾರ್ವಜನಿಕರು ತಮ್ಮ ಸಮೀಪದ ಪೋಸ್ಟ್ ಆಫೀಸ್ ಗಳಿಗೆ ಬೇಟಿ ನೀಡಿ ಇ-ಚಲನ್ ದಂಡವನ್ನು ಪಾವತಿಸಬಹುದಾಗಿದೆ.
  • 2. ಜಿಲ್ಲೆಯಲ್ಲಿ ಸಾರ್ವಜನಿಕರು ತಮ್ಮ ಸಮೀಪದ ಯಾವುದೇ ಪೊಲೀಸ್ ಠಾಣೆಗಳಿಗೆ ಬೇಟಿ ನೀಡಿ ತಮ್ಮ ವಾಹನÀಗಳ ಮೇಲೆ ಇರುವ ಇ-ಚಲನ್ ಬಾಕಿ ಇರುವ ದಂಡವನ್ನು ಪರಿಶೀಲಿಸಿ ಪಾವತಿಸಬಹುದಾಗಿದೆ.
  • 3. ದಾವಣಗೆರೆ ನಗರದ ಉತ್ತರ ಸಂಚಾರಿ ಪೊಲೀಸ್ ಠಾಣೆ, ದಕ್ಷಿಣ ಸಂಚಾರ ಠಾಣೆ, ಆರ್.ಟಿ.ಓ ಕಛೇರಿ ವೃತ್ತ, ಎಸಿ ಕಛೇರಿ ವೃತ್ತ, ಅರುಣ ವೃತ್ತ ಮತ್ತು ಸಂಚಾರ ವೃತ್ತ ಕಛೇರಿ, ಸಂಗೊಳ್ಳಿ ರಾಯಣ್ಣ ವೃತ್ತ, ಜಯದೇವ ವೃತ್ತ, ಗುಂಡಿ ವೃತ್ತ, ನಿಜಲಿಂಗಪ್ಪ ಬಡಾವಣೆ ಬಳಿ ಕರ್ನಲ್ ರವೀಂದ್ರನಾಥ ವೃತ್ತ (ಟವರ್ ಕ್ಲಾಕ್ ವೃತ್ತ), ಹೊಂಡದ ವೃತ್ತ, ಲಕ್ಷ್ಮೀ ವೃತ್ತ, ಚಾಮರಾಜಪೇಟೆ ವೃತ್ತ, ಬಾಡಾ ಕ್ರಾಸ್, ರಾಮ ಅಂಡ್ ಕೋ ವೃತ್ತ, ಹೈಸ್ಕೂಲ್ ಮೈದಾನ ಇಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳ ಬಳಿ ಬೇಟಿ ನೀಡಿ ಇ-ಚಲನ್ ದಂಡವನ್ನು ಪಾವತಿಸಬಹುದಾಗಿದೆ.

ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles