Home ಕ್ರೈಂ ನ್ಯೂಸ್ ಹಬ್ಬದ ಸಂಭ್ರಮದ ನಡುವೆ ಘೋರ ದುರಂತ: ಚೈನೀಸ್ ಮಾಂಜಾಕ್ಕೆ ಐದು ವರ್ಷದ ಮಗು ಬಲಿ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಹಬ್ಬದ ಸಂಭ್ರಮದ ನಡುವೆ ಘೋರ ದುರಂತ: ಚೈನೀಸ್ ಮಾಂಜಾಕ್ಕೆ ಐದು ವರ್ಷದ ಮಗು ಬಲಿ!

Share
ಹಬ್ಬ
Share

ಹೈದರಾಬಾದ್: ಹಬ್ಬದ ಸಂಭ್ರಮದಲ್ಲಿಯೇ ತೆಲಂಗಾಣದ ಕುಕತ್ಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ವಿವೇಕಾನಂದ ನಗರದಲ್ಲಿ ಸಂಭವಿಸಿದ ಭೀಕರ ಘಟನೆಯಲ್ಲಿ ಐದು ವರ್ಷದ ಬಾಲಕಿ ನಿಶ್ವಿಕಾ ಆದಿತ್ಯ ಪ್ರಾಣ ಕಳೆದುಕೊಂಡಿದ್ದಾಳೆ.

READ ALSO THIS STORY: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ನಲ್ಲಿ ಮುಸ್ಲಿಂರಿಗೆ ಟಿಕೆಟ್: ಜಮೀರ್ ಅಹ್ಮದ್ ಹೇಳಿದ್ದೇನು?

ತನ್ನ ತಂದೆ ರಾಮಸಾಗರ್ ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ, ಆಕಾಶದಲ್ಲಿ ನೇತಾಡುತ್ತಿದ್ದ ಚೂಪಾದ ಚೈನೀಸ್ ಮಾಂಜಾ ಅಥವಾ ನೈಲಾನ್ ದಾರ ಮಗುವಿನ ಕುತ್ತಿಗೆಗೆ ಬಿಗಿಯಾಗಿ ಸುತ್ತಿಕೊಂಡಿದೆ.

ವಾಹನ ಚಲಿಸುತ್ತಿದ್ದ ವೇಗಕ್ಕೆ ದಾರವು ಕತ್ತಿಯಂತೆ ಮಗುವಿನ ಕುತ್ತಿಗೆಯನ್ನು ಸೀಳಿದ್ದು, ತೀವ್ರ ರಕ್ತಸ್ರಾವ ಸಂಭವಿಸಿದೆ. ಮಗು ಕಿರುಚಿದ ತಕ್ಷಣ ತಂದೆ ವಾಹನ ನಿಲ್ಲಿಸಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.

ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಕುಕತ್ಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *