Home ದಾವಣಗೆರೆ ಸಮಾರಾಧನೆಗೆ 5 ಸಾವಿರ ಲೋಡ್ ಮಣ್ಣು ಅಕ್ರಮ ಸಾಗಣೆ, “ಶಾಮನೂರು ಶಿವಶಂಕರಪ್ಪರ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ”: ಹೆಚ್. ಎಸ್. ಶಿವಶಂಕರ್!
ದಾವಣಗೆರೆನವದೆಹಲಿಬೆಂಗಳೂರು

ಸಮಾರಾಧನೆಗೆ 5 ಸಾವಿರ ಲೋಡ್ ಮಣ್ಣು ಅಕ್ರಮ ಸಾಗಣೆ, “ಶಾಮನೂರು ಶಿವಶಂಕರಪ್ಪರ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ”: ಹೆಚ್. ಎಸ್. ಶಿವಶಂಕರ್!

Share
ಶಾಮನೂರು ಶಿವಶಂಕರಪ್ಪ
Share

ದಾವಣಗೆರೆ: ಕಾಡಜ್ಜಿ ಗ್ರಾಮದ ಕೃಷಿ ಇಲಾಖೆ ಸುತ್ತಮುತ್ತ, ಬಾತಿ ಗುಡ್ಡ ಸೇರಿದಂತೆ ವಿವಿಧೆಡೆಯಿಂದ ಕಲ್ಲೇಶ್ವರ ರೈಸ್ ಮಿಲ್ ಹಿಂಭಾಗದ ಜಮೀನನ್ನು ಸಮತಟ್ಟು ಮಾಡಲು ಅಕ್ರಮವಾಗಿ 5 ಸಾವಿರಕ್ಕೂ ಹೆಚ್ಚು ಲೋಡ್ ಮಣ್ಣನ್ನು ಅಕ್ರಮವಾಗಿ ಸಾಗಣೆ ಮಾಡಲಾಗಿದೆ. ಇದರಿಂದಾಗಿ ಇತ್ತೀಚೆಗೆ ವಿಧಿವಶರಾದ ಕಾಂಗ್ರೆಸ್ ಹಿರಿಯ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪರ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ ಎಂದು ಜೆಡಿಎಸ್ ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

READ ALSO THIS STORY: BIG BREAKING: ದಾವಣಗೆರೆ ಸಿಂಥೆಟಿಕ್ ಡ್ರಗ್ಸ್ ಕೇಸಲ್ಲಿ ಬಂಧಿತರ ಸಂಖ್ಯೆ 11ಕ್ಕೇರಿಕೆ: ವೀರಶೈವ ಲಿಂಗಾಯತ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಶಿವರಾಜ್ ಬಂಧನ!

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪರು ಕ್ರಮವಾಗಿ ಬದುಕಿದ್ದವರು. ಆದರೆ, ಅವರ ಸಮರಾಧನೆ ಹೆಸರಿನಲ್ಲಿ ಐದು ಸಾವಿರಕ್ಕೂ ಹೆಚ್ಚು ಲೋಡ್ ಮಣ್ಣು ಸಾಗಣೆ ಮಾಡಲಾಗಿದ್ದು, ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಯಾರೂ ಸಹ ಕಾನೂನಿಗಿಂತ ದೊಡ್ಡವರಿಲ್ಲ. ಎಲ್ಲರೂ ಕಾನೂನಿನ ಮುಂದೆ ಸಮಾನರು. ಜಿಲ್ಲಾಡಳಿತ ಕೂಡಲೇ ಮಣ್ಣು ಸಾಗಣೆ ಮಾಡಿದವರಿಂದ ದಂಡ ವಸೂಲಿ ಮಾಡಬೇಕು. ಜೊತೆಗೆ ಕೇಸ್ ಅನ್ನು ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಶಿವಶಂಕರಪ್ಪರು ದೊಡ್ಡವರು.ಅಕ್ರಮವಾಗಿ ಮಣ್ಣಿನಿಂದ ಶಿವಾರಾಧನೆ ಮಾಡಿದ್ದರೆ ಖಂಡಿತವಾಗಿಯೂ ಹಿರಿಯ ಜೀವದ ಆತ್ಮಕ್ಕೆ ಶಾಂತಿ ಸಿಗಲ್ಲ. ಇದ್ದಾಗ ಕ್ರಮವಾಗಿ ಬದುಕಿದ್ದವರು. ಅಕ್ರಮವಾಗಿ ಮಣ್ಣು ಸಾಗಣೆ ಮಾಡಿ ಮಾಡಿದ್ದೀಯಾ ಅಂತಾ ಆತ್ಮ ಇಲ್ಲೇ ಸುತ್ತು ಹೊಡೆಯುತ್ತಿದೆ. ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಅಕ್ರಮವಾಗಿ ಮಣ್ಣು ಸಾಗಣೆ ಮಾಡಿದವರ ಮೇಲೆ ದಂಡ ಹಾಕಿ. ಕೇಸ್ ದಾಖಲಾಗಬೇಕು ಎಂದು ಆಗ್ರಹಿಸಿದರು.

ಶಾಮನೂರು ಶಿವಶಂಕರಪ್ಪರ ಬಗ್ಗೆ ಅಪಾರ ಗೌರವವಿದೆ. ಆರು ಬಾರಿ ಶಾಸಕರಾಗಿ ಜನಸೇವೆ ಮಾಡಿದವರು. ದಾನ ಧರ್ಮವನ್ನೂ ಮಾಡಿದ್ದವರು. ಎಂದೂ ಅಕ್ರಮಕ್ಕೆ ಪ್ರೋತ್ಸಾಹ ನೀಡಿದವರಲ್ಲ. ಆದರೆ ಅವರ ಪುಣ್ಯಸ್ಮರಣೆಯಂಥ ಕಾರ್ಯಕ್ರಮಕ್ಕಾಗಿ ಅಕ್ರಮವಾಗಿ ಮಣ್ಣು ಸಾಗಣೆ ಮಾಡಿರುವುದು ವಿಷಾದನೀಯ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲೇಬೇಕು. ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯಬಾರದು ಎಂದು ಒತ್ತಾಯಿಸಿದರು.

Share

Leave a comment

Leave a Reply

Your email address will not be published. Required fields are marked *