Home ಉದ್ಯೋಗ ವಾರ್ತೆ ದಿವಾಳಿ ಭಾಗ್ಯಗಳ ಕಾಂಗ್ರೆಸ್ ಸರ್ಕಾರದ ಬಳಿಯಿಲ್ಲ 30 ಸಾವಿರ ಒಳಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ನೀಡಲು ಸಂಬಳ!
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

ದಿವಾಳಿ ಭಾಗ್ಯಗಳ ಕಾಂಗ್ರೆಸ್ ಸರ್ಕಾರದ ಬಳಿಯಿಲ್ಲ 30 ಸಾವಿರ ಒಳಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ನೀಡಲು ಸಂಬಳ!

Share
Share

ಬೆಂಗಳೂರು: ದಿನನಿತ್ಯ ರಾಜ್ಯದ ಜನರ ಸೇವೆ ಮಾಡುವ ನರ್ಸ್ ಗಳಿಗೆ ವೇತನ ನೀಡುವುದಕ್ಕೂ ದಿವಾಳಿ ಭಾಗ್ಯಗಳ ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

20 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ 30,000 ಒಳಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಮೂರು ತಿಂಗಳಿಂದ ವೇತನವಿಲ್ಲದೇ ಗೋಳಾಡುತ್ತಿದ್ದಾರೆ. ಅವರ ಅಳಲನ್ನು ಕೇಳಬೇಕಾದ ಸರ್ಕಾರ ಕುರ್ಚಿ ಗಲಾಟೆಯಲ್ಲಿ ಮೈಮರೆತಿದೆ ಎಂದು ದೂರಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಸರ್ಕಾರ ದಿವಾಳಿಯಾಗಿಲ್ಲ, ನಮ್ಮ ಖಜಾನೆ ತುಂಬಿ ತುಳುಕುತ್ತಿದೆ ಎಂಬ ಹಸಿ ಹಸಿ ಸುಳ್ಳು ಹೇಳುವುದನ್ನು ನಿಲ್ಲಿಸಿ, ಈ ಕೂಡಲೇ ಕರ್ನಾಟಕ ಸರ್ಕಾರದ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಿ‌ ಎಂದು ಆಗ್ರಹಿಸುತ್ತೇನೆ ಎಂದು ಎಕ್ಸ್ ನಲ್ಲಿ ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *