Site icon Kannada News-suddikshana

ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಎಸ್‌ಎಎಸ್ಸೆಸ್ ಕೇಂದ್ರದ 15 ಯೋಗಪಟುಗಳು

SUDDIKSHANA KANNADA NEWS/ DAVANAGERE/ DATE:28-12-2024

ದಾವಣಗೆರೆ: ಗೋವಾದಲ್ಲಿ ಡಿ. 29ರಂದು ನಡೆಯಲಿರುವ ಅಖಿಲ ಭಾರತ ಅಂತಾರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್- 2024 ಸ್ಪರ್ಧೆಯಲ್ಲಿ ನಗರದ ಪ್ರತಿಷ್ಠಿತ ಎಸ್‌ಎಎಸ್‌ಎಸ್ ಯೋಗ ಕೇಂದ್ರದ 15 ಯೋಗಪಟುಗಳು ಭಾಗವಹಿಸಲಿದ್ದಾರೆ.

ಗೋವಾದ ಡೋನಾ ಪೌಲ್‌ನ ಡಾಕ್ಟರ್ ಈಸ್ಟ್ ಬಾರ್ಗೇಸ್ ರಸ್ತೆಯ ಓಷಿನ್ ಪಾಕ್೯ ರೆಸಿಡೆನ್ಸಿಯಲ್ಲಿ ಪತಂಜಲಿ ಕಾಲೇಜ್ ಆಫ್ ಯೋಗ ಮತ್ತು ರಿಸರ್ಚ್ ಸೆಂಟರ್, ಅಂತಾರಾಷ್ಟ್ರೀಯ ಮೈತ್ರಿ ಯೋಗ, ಇಂಡಿಯನ್ ಓಲಂಪಿಕ್ ಫೆಡರೇಷನ್ ಸಹಯೋಗದಲ್ಲಿ ಈ ಯೋಗ ಸ್ಪರ್ಧೆ ಆಯೋಜಿಸಿದ್ದು, ಎಸ್‌ಎಎಸ್‌ಎಸ್ ಯೋಗ ಕೇಂದ್ರದ ಸಂಸ್ಥಾಪಕ, ಯೋಗಾಚಾರ್ಯ ಡಾ.ಎನ್.ಪರಶುರಾಮ್ ನೇತೃತ್ವದಲ್ಲಿ 15 ಯೋಗ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಎ ಗ್ರೂಪ್‌ನಲ್ಲಿ ಐದು ವರ್ಷದೊಳಗಿನ ಮಕ್ಕಳು, ಬಿ ಗ್ರೂಪ್‌ನಲ್ಲಿ ಎಂಟು ವರ್ಷದೊಳಗಿನ ಮಕ್ಕಳು, ಸಿ ಗ್ರೂಪ್‌ನಲ್ಲಿ ಹತ್ತು ವರ್ಷದೊಳಗಿನ ಮಕ್ಕಳು, ಡಿ ಗ್ರೂಪ್‌ನಲ್ಲಿ 12 ವರ್ಷದೊಳಗಿನ ಮಕ್ಕಳು, ಇ ಗ್ರೂಪ್‌ನಲ್ಲಿ 14 ವರ್ಷದೊಳಗಿನ ಮಕ್ಕಳು, ಎಫ್ ಗ್ರೂಪ್‌ನಲ್ಲಿ 17 ವರ್ಷದೊಳಗಿನ ಮಕ್ಕಳು ಹಾಗೂ ಜಿ ಗ್ರೂಪ್‌ನಲ್ಲಿ 20 ವರ್ಷದೊಳಗಿನ ಮಕ್ಕಳು ಭಾಗವಹಿಸಲಿದ್ದು, ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣ ಪತ್ರ ವಿತರಿಸಲಾಗುತ್ತಿದೆ ಎಂದು ಯೋಗಾಚಾರ್ಯ ಡಾ.ಎನ್.ಪರಶುರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version