ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ ಸಣ್ಣ ಮತ್ತು ಅತಿಸಣ್ಣ ಆಹಾರ ಸಂಸ್ಕರಣಾ ಘಟಕಗಳನ್ನು ಉತ್ತೇಜಿಸಲು ಜಾರಿಗೆ ತಂದಿರುವ ‘ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ’ (ಪಿ.ಎಂ.ಎಫ್.ಎಂ.ಇ) ಯೋಜನೆಯಡಿ ಕಿರು ಆಹಾರ ಸಂಸ್ಕರಣಾ ಘಟಕ ಸ್ಥಾಪಿಸಲು ಆಸಕ್ತರಿಗೆ ಸುವರ್ಣ ಅವಕಾಶ ಕಲ್ಪಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 6,000 ಹೊಸ ಘಟಕಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಈ ಯೋಜನೆಯಡಿ ಉದ್ದಿಮೆದಾರರಿಗೆ ಗರಿಷ್ಠ 15 ಲಕ್ಷ ರೂ. ಗಳವರೆಗೆ ಸಹಾಯಧನ (ಸಬ್ಸಿಡಿ) ಲಭ್ಯವಿರಲಿದೆ.
ಸಹಾಯಧನದ ವಿವರ:
ಈ ಯೋಜನೆಯಡಿ ಒಟ್ಟು ಸಹಾಯಧನದಲ್ಲಿ ಕೇಂದ್ರ ಸರ್ಕಾರವು 9 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರವು 6 ಲಕ್ಷ ರೂ. ಗಳ ಹಿಸ್ಸೆಯನ್ನು ನೀಡಲಿವೆ. ವಿಶೇಷವೆಂದರೆ, ಫಲಾನುಭವಿಯು ಕೇವಲ ಶೇ.10 ರಷ್ಟು ಹೂಡಿಕೆ ಮಾಡಿದರೆ ಸಾಕು, ಉಳಿದ ಶೇ.90 ರಷ್ಟು ಬ್ಯಾಂಕ್ ಸಾಲದ ಸೌಲಭ್ಯ ದೊರೆಯಲಿದೆ.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?: 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ (ಯಾವುದೇ ಕನಿಷ್ಠ ಶೈಕ್ಷಣಿಕ ಅರ್ಹತೆಯ ಅಗತ್ಯವಿಲ್ಲ) ಅರ್ಜಿ ಸಲ್ಲಿಸಬಹುದಾಗಿದೆ.
ಅದೇರೀತಿಯಾಗಿ ರೈತ ಉತ್ಪಾದಕ ಸಂಸ್ಥೆಗಳು (FPO), ಸ್ವ-ಸಹಾಯ ಗುಂಪುಗಳು ಮತ್ತು ಸಹಕಾರಿ ಸಂಘಗಳು, ಹೊಸ ಘಟಕ ಸ್ಥಾಪಿಸುವವರು ಅಥವಾ ಚಾಲ್ತಿಯಲ್ಲಿರುವ ಉದ್ದಿಮೆಗಳನ್ನು ವಿಸ್ತರಿಸುವವರು ಅರ್ಜಿ ಸಲ್ಲಿಸಬಹುದು.
ಯಾವ ಉದ್ದಿಮೆಗಳಿಗೆ ಅವಕಾಶ?:
ಸಿರಿಧಾನ್ಯ ಮತ್ತು ಧಾನ್ಯಗಳ ಸಂಸ್ಕರಣೆ, ಬೆಲ್ಲದ ಉತ್ಪನ್ನಗಳು, ಉಪ್ಪಿನಕಾಯಿ, ಬೇಕರಿ ಉತ್ಪನ್ನಗಳು, ಕೋಲ್ಡ್ ಪ್ರೆಸ್ ಆಯಿಲ್ (ಗಾಣದ ಎಣ್ಣೆ), ಮೆಣಸಿನಕಾಯಿ ಪುಡಿ ಘಟಕ, ಶುಂಠಿ ಸಂಸ್ಕರಣೆ, ಮಸಾಲೆ ಪದಾರ್ಥಗಳು ಹಾಗೂ ವಿವಿಧ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಅವಕಾಶವಿದೆ.
ಆಸಕ್ತ ರೈತರು, ರೈತ ಮಹಿಳೆಯರು ಹಾಗೂ ಯುವಕ-ಯುವತಿಯರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಅಥವಾ ರೈತ ಕರೆ ಕೇಂದ್ರದ ಸಂಖ್ಯೆ: 1800-425-3553 ಗೆ ಸಂಪರ್ಕಿಸಬಹುದಾಗಿದೆ.
- 15 Lakh Subsidy for Food Unit.
- Agri-Business Loan
- Food Processing Subsidy Details
- Food Processing Unit Subsidy
- Karnataka Agriculture Department Schemes
- MSME Food Processing
- PMFME Application Process
- PMFME Scheme Karnataka
- PMFME ಕರ್ನಾಟಕ.
- Self-Employment Schemes for Youth
- Small Scale Food Industry
- ಆಹಾರ ಸಂಸ್ಕರಣಾ ಘಟಕ
- ಆಹಾರ ಸಂಸ್ಕರಣೆ ಉದ್ದಿಮೆ
- ಕರ್ನಾಟಕ ರೈತ ಯೋಜನೆಗಳು
- ಕೃಷಿ ಇಲಾಖೆ ಸಹಾಯಧನ
- ಪಿಎಂಎಫ್ಎಂಇ ಸಬ್ಸಿಡಿ
- ಪಿಎಫ್ಎಂಇ ಯೋಜನೆ
- ರೈತ ಸಂಪರ್ಕ ಕೇಂದ್ರ
- ಸಣ್ಣ ಉದ್ದಿಮೆ ಸಾಲ
- ಸ್ವಯಂ ಉದ್ಯೋಗ ಯೋಜನೆ 2026





Leave a comment