Site icon Kannada News-suddikshana

ತುಂಗಭದ್ರ ನದಿಯಲ್ಲಿ 1.12 ಲಕ್ಷ ಕ್ಯೂಸೆಕ್ಸ್ ನೀರು: ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ನದಿ, ಹೆಲ್ಪ್ ಲೈನ್ ನಂಬರ್ ಇಲ್ಲಿದೆ ನೋಡಿ!

ತುಂಗಭದ್ರ ನದಿ

SUDDIKSHANA KANNADA NEWS/ DAVANAGERE/ DATE:27_07_2025

ದಾವಣಗೆರೆ: ಶಿವಮೊಗ್ಗ ಮತ್ತು ಚಿಕ್ಕಮಗಳೂರು ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ತುಂಗಭದ್ರ ನದಿಯಲ್ಲಿ 1,12,170 ಕ್ಯೂಸೆಕ್ಸ್ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಜನರು ನದಿಪಾತ್ರದಲ್ಲಿ ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದ್ದಾರೆ.

READ ALSO THIS STORY: ಪಾಕ್ ಸಂಪರ್ಕ ಹೊಂದಿದ್ದ ಜಾಲ ಬಯಲು: ಇಸ್ಲಾಂ ಧರ್ಮಕ್ಕೆ ಹಿಂದೂ ಹುಡುಗಿಯರ ಮತಾಂತರಕ್ಕೆ ಆನ್ ಲೈನ್ ಗೇಮ್ಸ್ ಬಳಕೆ!

ತುಂಗಾ ಜಲಾಶಯದಿಂದ 68,599 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿದೆ. ಮತ್ತು ಭದ್ರಾ ಜಲಾಶಯ ಭರ್ತಿಯಾಗುವ ಹಂತದಲ್ಲಿದ್ದು, 39017 ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡಲಾಗಿರುತ್ತದೆ. ಪ್ರಸ್ತುತ ತುಂಗಭದ್ರ ನದಿಯಲ್ಲಿ ಅಪಾಯ ಮಟ್ಟ ಮೀರಿ 1,12,170 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಇದರಿಂದಾಗಿ ಹೊನ್ನಾಳಿ, ನ್ಯಾಮತಿ ಹಾಗೂ ಹರಿಹರ ತಾಲ್ಲೂಕುಗಳ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುತ್ತದೆ.

ತುರ್ತು ಸಂದರ್ಭದಲ್ಲಿ ಸಹಾಯವಾಣಿಗಳ ನಂಬರ್: 

ಇಲ್ಲಿ ಸಹಾಯವಾಣಿ ಕೇಂದ್ರಗಳಿಗೆ ಕರೆ ಮಾಡಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.

Exit mobile version