Site icon Kannada News-suddikshana

ಹೋಟೆಲ್‌ ರುಚಿಯ ಮೀನಿನ ಫ್ರೈ ಮನೆಯಲ್ಲೇ ಮಾಡಿ..! ಸಿಂಪಲ್ ರೆಸಿಪಿ

ನಾನ್‌ ವೆಚ್ ಪ್ರಿಯರಿಗೆ ಅತ್ಯಂತ ರುಚಿಕರ ಖಾದ್ಯ ಅಂದ್ರೆ ಅದು ಮೀನು. ಸಮುದ್ರದ ಮೀನುಗಳು ಎಷ್ಟು ರುಚಿ ನೀಡುತ್ತವೆ ಅಂದ್ರೆ ಮೀನು ಊಟದ ಹೋಟೆಲ್‌ಳಿಗೆ ಜನ ಸಾಲಲ್ಲಿ ನಿಲ್ಲುತ್ತಾರೆ. ಅದರಲ್ಲೂ ಮೀನಿನ ಫ್ರೈ ಸವಿದವರಿಗೆ ಮಾತ್ರ ಅದರ ರುಚಿ ಹೇಳಲು ಸಾಧ್ಯ.

ಹೋಟೆಲ್‌ನಲ್ಲಿ ಮಾತ್ರವಲ್ಲ ಮನೆಯಲ್ಲೂ ಈ ಮೀನು ಫ್ರೈ ಮಾಡಬಹುದು.

ಅದರಲ್ಲೂ ಹೋಟೆಲ್‌ನಲ್ಲಿ ನೀಡುವ ಮೀನಿನ ಫ್ರೈ ರುಚಿಯಲ್ಲೇ ಮನೆಯಲ್ಲೂ ಮಾಡಿ ಸವಿಯಬಹುದು. ಮಧ್ಯಾಹ್ನ ಇಲ್ಲವೆ ರಾತ್ರಿಯ ಊಟದ ಜೊತೆ ಒಂದು ಮೀನು ಫ್ರೈ ಇದ್ದರೆ ಅದರ ರುಚಿಯೇ ಬೇರೆ.

ಆದ್ರೆ ಎಲ್ಲರಿಗೂ ಮೀನಿನ ಫ್ತೈ ಮಾಡಲು ಬರುವುದಿಲ್ಲ. ಜೊತೆಗೆ ಹಲವರು ಇದು ಕಷ್ಟ ಎಣ್ಣೆ ಹೆಚ್ಚಿ ಬೇಕು ಎಂದು ತಿಳಿದಿರುತ್ತಾರೆ. ಆದ್ರೆ ಮೀನಿನ ಫ್ರೈ ಮಾಡೋದು ಸಾರು ಮಾಡುವುದಕ್ಕಿಂತಲೂ ಸುಲಭ. ಇದಕ್ಕೆ ಕೆಲವೇ ಕೆಲವು ವಸ್ತುಗಳಿದ್ದರೂ ಸಾಕು.

ಹಾಗಾದ್ರೆ ನಾವಿಂದು ಹೋಟೆಲ್‌ ರುಚಿಯ ಮೀನಿನ ಫ್ರೈ ಮಾಡುವುದು ಹೇಗೆ? ಇದನ್ನು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ತಿಳಿದುಕೊಳ್ಳೋಣ.

ಮೀನು ಪ್ರೈ ಮಾಡಲು ಬೇಕಾಗುವ ವಸ್ತುಗಳು

  • ಮೀನು
  • ಅರಿಶಿನ ಪುಡಿ – 1/2 ಟೀಸ್ಪೂನ್
  • ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
  • ಫಿಶ್ ಮಸಾಲಾ ಪುಡಿ – 1 ಟೀಸ್ಪೂನ್
  • ಕರಿಮೆಣಸು ಪುಡಿ – 1/2 ಟೀಸ್ಪೂನ್
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 tbs
  • ಕರಿಬೇವಿನ ಎಲೆಗಳು – 1 tbs
  • ಅಕ್ಕಿ ಹಿಟ್ಟು – 2 ಚಮಚ
  • ನಿಂಬೆ ರಸ – 1/4 ಟೀಸ್ಪೂನ್
  • ಅಡುಗೆ ಎಣ್ಣೆ
  • ರುಚಿಗೆ ಉಪ್ಪು

ಮೀನು ಫ್ರೈ ಮಾಡುವ ಸುಲಭದ ವಿಧಾನ

ಮೊದಲು ಮೀನನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಿ, ಉಪ್ಪು ಹಾಗೂ ಅರಶಿಣ ಹಾಕಿಕೊಂಡು ಮೀನನ್ನು ಚೆನ್ನಾಗಿ ತೊಳೆದುಕೊಳ್ಳಿ. ಈಗ ಒಂದು ಬೌಲ್‌ಗೆ ಅರಶಿಣ, ಖಾರದ ಪುಡಿ, ಫಿಸ್ ಫ್ರೈ ಮಸಾಲ, ಕರಿ ಮೆಣಸಿನ ಪುಡಿ, ಹಾಗೂ ಕತ್ತರಿಸಿದ ಕರಿಬೇವಿನ ಎಲೆಗಳು, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿಕೊಳ್ಳಿ.

ಇದಕ್ಕೆ ಅಡುಗೆ ಎಣ್ಣೆ ಒಂದು ಚಮಚ ಹಾಗೂ ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಹಿಟ್ಟು ಗಟ್ಟಿಯಾದರೆ ಸ್ವಲ್ಪ ನೀರು ಹಾಕಿಕೊಂಡು ಪೇಸ್ಟ್ ರೀತಿ ಮಾಡಿಕೊಳ್ಳಿ. ಬಳಿಕ ಮೀನುಗಳನ್ನು ತೆಗೆದುಕೊಂಡು ಈ ಮಸಾಲೆಯನ್ನು ಚೆನ್ನಾಗಿ ಮೀನುಗಳಿಗೆ ಹಚ್ಚಿಕೊಳ್ಳಿ.

ಈ ಮಸಾಲೆ ಹಚ್ಚಿಕೊಂಡ ಬಳಿಕ ಮೀನಿನ ಮೇಲೆ ನಿಂಬೆ ರಸ ಹಾಕಿ, ಇದಕ್ಕೆ ಅಕ್ಕಿ ಹಿಟ್ಟು ಮೇಲೆ ಹರಡಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹೀಗೆ ಹಚ್ಚಿಕೊಂಡ ಬಳಿಕ 1 ಗಂಟೆಗಳ ಕಾಲ ಬಿಡಿ. ಏಕೆಂದರೆ ಮೀನಿಗೆ ಉಪ್ಪು ಕಾರ ಹಿಡಿಯಬೇಕು. ಅಕ್ಕಿ ಹಿಟ್ಟು ಹಾಕಿದರೆ ಮೀನು ಚೆನ್ನಾಗಿ ಫ್ರೈ ಆಗುತ್ತದೆ.

ಹೀಗೆ ಮಸಾಲೆ ಹಚ್ಚಿನದ ಮೀನುಗಳನ್ನು ಕಡಿಮೆ ಉರಿಯಲ್ಲಿ ಇಟ್ಟು ಎಣ್ಣೆಗೆ ಬಿಟ್ಟುಕೊಳ್ಳಿ. ಮೀನು ಎರಡೂ ಕಡೆ ಚೆನ್ನಾಗಿ ಫ್ರೈ ಆಗುವಂತೆ ಮಾಡಿಕೊಳ್ಳಿ. ಉರಿ ಹೆಚ್ಚು ಇಟ್ಟು ಫ್ರೈ ಮಾಡಬೇಡಿ. ಇಷ್ಟಾದರೆ ನಿಮ್ಮ ಮುಂದೆ ಮೀನಿನ ಫ್ರೈ ರೆಡಿಯಾಗುತ್ತದೆ. ಇದನ್ನು ಊಟದ ಜೊತೆ ಸವಿಯಲು ಇಟ್ಟರೆ ಅದರ ರುಚಿ ದುಪ್ಪಟ್ಟಾಗುತ್ತದೆ.

ಮೀನಿನ ಫ್ರೈಗೆ ಅಕ್ಕಿ ಹಿಟ್ಟಿನ ಬದಲಾಗಿ ಕೆಲವರು ರವೆಯನ್ನ ಹಚ್ಚುತ್ತಾರೆ. ಹೀಗೆ ಮಾಡುವುದರಿಂದ ಮೀನು ಚೆನ್ನಾಗಿ ಫ್ರೈ ಆಗುತ್ತದೆ, ರುಚಿಯು ಹೆಚ್ಚು

Exit mobile version