Site icon Kannada News-suddikshana

ಹೈಟೆಕ್ ಆಯ್ತು ಶಾಮನೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ: ಕೊಠಡಿ ಲೋಕಾರ್ಪಣೆಗೊಳಿಸಿದ ರವೀಂದ್ರನಾಥ್

SUDDIKSHANA KANNADA NEWS

DATE:20-03-2023

DAVANAGERE

ದಾವಣಗೆರೆ : ದಾವಣಗೆರೆ (DAVANAGERE) ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಮನೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಇನ್ಮುಂದೆ ಹೈಟೆಕ್.

ಹೌದು. ಸ್ಮಾರ್ಟ್ ಸಿಟಿ ಲಿಮಿಟೆಡ್ (SMART CITY LIMITED) ಯೋಜನೆ ಅಡಿ 75 ಲಕ್ಷ ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿ ಶಾಲೆಯ ಕೊಠಡಿ ನಿರ್ಮಾಣ ಮಾಡಲಾಗಿದೆ. ಈ ಶಾಲೆಯು ಹೈಟೆಕ್ ಆಗಬೇಕೆಂಬ ಈ ಭಾಗದ ಜನರ ಬೇಡಿಕೆ ಈ ಮೂಲಕ ಈಡೇರಿದಂತಾಗಿದೆ.

ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎ. ರವೀಂದ್ರನಾಥ್ (S. A. RAVINDRANATH) ಹಾಗೂ ಸ್ಮಾರ್ಟ್ ಸಿಟಿ (SMART CITY_ ಎಂ.ಡಿ. ವೀರೇಶ್ ಅವರು ಕೊಠಡಿಗಳ ಲೋಕಾರ್ಪಣೆ ನೆರವೇರಿಸಿದರು. ಈ ವೇಳೆ ಮಾತನಾಡಿದ ರವೀಂದ್ರನಾಥ್ (RAVINDRANATH) ಅವರು ಉತ್ತಮ ಗುಣಮಟ್ಟದಲ್ಲಿ ಶಾಲೆಯ ಕೊಠಡಿ ನಿರ್ಮಾಣ ಆಗಿದ್ದು, ಮಕ್ಕಳು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಕಲ್ಲಳ್ಳಿ ನಾಗರಾಜ್, ಆರಾಧನೆ ಸಮಿತಿ ಸದಸ್ಯರಾದ ಕುಂಬಪ್ಪರ್ ರಾಜಣ್ಣ ,ಆಶ್ರಯ ಸಮಿತಿ ಸದಸ್ಯ ಜಿ. ರಾಜಣ್ಣ, ಚನ್ನಪ್ಪ ಗೌಡ್ರು, ಗುಂಟನೂರು ಕಲ್ಲೇಶ್ ,ಅಳ್ಳೇರ್ ಲಿಂಗರಾಜು, ಉತ್ತರ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಉಪಾಧ್ಯಕ್ಷ ಹರೀಶ್ ಶಾಮನೂರು, ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಾಲಾ ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.

 

 

 

Exit mobile version