Site icon Kannada News-suddikshana

ಹರಿಯಾಣ ಚುನಾವಣೆ: ಬಡವರಿಗೆ ಉಚಿತ ವಿದ್ಯುತ್, 25ಲಕ್ಷದವರೆಗೆ ಉಚಿತ ಚಿಕಿತ್ಸೆ ಗ್ಯಾರಂಟಿ ಘೋಷಣೆ ಮಾಡಿದ ಕಾಂಗ್ರೆಸ್ ಪಕ್ಷ

ಚಂಡೀಗಢ: ಮುಂದಿನ ಅಕ್ಟೋಬರ್‌ 5ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರ ಕಾರ್ಯ ಆರಂಭಿಸಿರುವ ಕಾಂಗ್ರೆಸ್‌ ಪಕ್ಷವು  ರಾಜ್ಯಕ್ಕೆ ಸಪ್ತ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ದೆಹಲಿಯ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ 7 ಗ್ಯಾರಂಟಿಗಳನ್ನೊಳಗೊಂಡ ಪ್ರಣಾಳಿಕೆ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಈ ವೇಳೆ ಹರಿಯಾಣದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದರೆ, ಪ್ರತೀ ಮನೆಗೆ 300 ಯೂನಿಟ್‌ ವಿದ್ಯುತ್‌ ಉಚಿತವಾಗಿ ನೀಡಲಾಗುವುದು. 500 ರೂ. ಬೆಲೆಗೆ ಉಚಿತ ಎಲ್‌ಪಿಜಿ ಸಿಲಿಂಡರ್‌ ನೀಡುತ್ತೇವೆ. ಬಡವರಿಗೆ 100 ಚದರ ಅಡಿ ನಿವೇಶನ ಮತ್ತು ಮನೆಗೆ ಕಟ್ಟಲು 3.5 ಲಕ್ಷ ರೂ. ಹಣ ನೀಡಲಾಗುತ್ತದೆ ಎಂಬಿತ್ಯಾದಿ ಗ್ಯಾರಂಟಿಗಳನ್ನು ಪ್ರಕಟಿಸಿದರು. ಹರಿಯಾಣಕ್ಕೆ ಕಾಂಗ್ರೆಸ್‌ ಸಪ್ತ ಗ್ಯಾರಂಟಿ!

1. 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಮತ್ತು 25 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು.

2. 18 ರಿಂದ 60 ವರ್ಷದೊಳಗಿನ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ. ನೀಡುವ ಜೊತೆಗೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್ ನೀಡಲಾಗುವುದು.

3. 2 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಡ್ರಗ್ ಮುಕ್ತ ಹರಿಯಾಣ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು

4. ವೃದ್ಧಾಪ್ಯ, ಅಂಗವಿಕಲ ಮತ್ತು ವಿಧವಾ ಪಿಂಚಣಿ 6,000 ರೂ. ಹಾಗೂ ಹಳೆಯ ಪಿಂಚಣಿ ಯೋಜನೆ (OPS) ಮರುಸ್ಥಾಪಿಸಲಾಗುವುದು.

5. ಜಾತಿ ಗಣತಿ ನಡೆಸಲಾಗುವುದು, ಕೆನೆ ಪದರದ ಮಿತಿಯನ್ನು 10 ಲಕ್ಷ ರೂ.ಗೆ ಹೆಚ್ಚಿಸಲಾಗುವುದು.

6. ಕನಿಷ್ಠ ಬೆಂಬಲ ಬೆಲೆ (MSP) ಕಾನೂನುಬದ್ಧವಾಗಿ ಖಾತರಿಪಡಿಸುತ್ತದೆ. ಬೆಳೆ ಪರಿಹಾರ ತಕ್ಷಣ ದೊರೆಯಲಿದೆ.

7. ಬಡ ಕುಟುಂಬಗಳಿಗೆ 100 ಚದರ ಅಡಿಯ ನಿವೇಶನ, 3.5 ಲಕ್ಷ ವೆಚ್ಚದ 2 ಕೋಣೆಗಳ ಮನೆ

Exit mobile version