Site icon Kannada News-suddikshana

ಸ್ಕಾರ್ಪಿಯೋದಲ್ಲಿ ಬಂದು ಕೊಂದಿದ್ದ ನಾಲ್ವರು ಆರೋಪಿಗಳ ಬಂಧನ MURDER CASE ACCUSES ARREST

ದಾವಣಗೆರೆ: ಶಿವಮೊಗ್ಗದಲ್ಲಿ ಕಳೆದ ವರ್ಷ ಹತ್ಯೆಗೊಳಗಾಗಿದ್ದ ರೌಡಿಶೀಟರ್ ಹಂದಿ ಅಣ್ಣಿ ಕೊಲೆ ಪ್ರಕರಣದ (,MURDER CASE) ಆರೋಪಿ ಕೊಲೆ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಮೂಲದ ಸುನೀಲ್, ವೆಂಕಟೇಶ್, ಅಭಿಲಾಷ್, ಪವನ್ ಬಂಧಿತ ಆರೋಪಿಗಳು. ಹೊನ್ನಾಳಿ – ನ್ಯಾಮತಿ ತಾಲೂಕಿನ ಗೋವಿನಕೋವಿ ಬಳಿ ಸ್ಕಾರ್ಪಿಯೋದಲ್ಲಿ ಬಂದಿದ್ದ ಆರೋಪಿಗಳು, ಹರಿಹರ ತಾಲೂಕಿನ ಬಾನುವಳ್ಳಿ ಗ್ರಾಮದ ಆಂಜನೇಯ ಅಲಿಯಾಸ್ ಅಂಜಿನಿ ಮತ್ತು ಮಧು ಮೇಲೆ ದಾಳಿ ನಡೆಸಿತ್ತು. ಈ ವೇಳೆ ಆಂಜನೇಯ ಸ್ಥಳದಲ್ಲಿ ಕೊನೆಯುಸಿರೆಳೆದಿದ್ದರೆ, ಮಧು ತಲೆಗೆ ಹೊಡೆತ ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ನಾಲ್ವರು ಆರೋಪಿಗಳು ಶರಣಾಗತಿ ಆಗಿಲ್ಲ. ವ್ಯಾಟ್ಸಪ್ ಮತ್ತು ಯಾವುದೋ ಪೇಜ್ ನಲ್ಲಿ ಯಾರೋ ಹಾಕಿದ್ದರು ಎಂಬುದು ನಮ್ಮ ಗಮನಕ್ಕೆ ಬಂದಿದೆ. ಆದ್ರೆ, ಆ ರೀತಿ ಆಗಿಲ್ಲ. ಆರೋಪಿಗಳನ್ನು ಶಿಗ್ಗಾಂವ್ ನಲ್ಲಿ ಬಂಧಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಸಿ. ಬಿ. ರಿಷ್ಯಂತ್  (RISHYANTH) ಅವರು ಹೊನ್ನಾಳಿಯಲ್ಲಿ ಮಾಹಿತಿ ನೀಡಿದ್ದಾರೆ.

ಆಂಜನೇಯ ಹಾಗೂ ಮಧು ಪ್ರಕರಣ ಸಂಬಂಧ ವಿಚಾರಣೆಗಾಗಿ ಶಿವಮೊಗ್ಗ ಕೋರ್ಟ್ ಗೆ  (SHIVAMOGGA COURT) ಹೋಗಿದ್ದರು. ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಶಿವಮೊಗ್ಗದಿಂದ ಹರಿಹರಕ್ಕೆ ಬರುತ್ತಿದ್ದರು. ಈ ವೇಳೆ ಬೈಕ್ (BIKE) ಹಿಂಬಾಲಿಸಿಕೊಂಡು ಬಂದಿದ್ದ ಸ್ಕಾರ್ಪಿಯೋ ಗುದ್ದಿದೆ. ನಂತರ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆರೋಪಿಗಳು ವಾಹನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.

ಹಂದಿ ಅಣ್ಣಿ ಕೊಲೆ (MURDER) ಪ್ರಕರಣದಲ್ಲಿ ಬಂಧಿತರಾಗಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದರು. ಭೂಗತ ಪಾತಕಿ ಹೆಬ್ಬಟ್ಟು ಮಂಜನ ಜೊತೆ ಗುರುತಿಸಿಕೊಂಡಿದ್ದ ಹಂದಿ ಅಣ್ಣಿಯನ್ನು 2022ರ ಜುಲೈ 14ರಂದು ಆತನ ವಿರೋಧಿಗಳಾಗಿದ್ದ ಕಾರ್ತಿಕ್ ನೇತೃತ್ವದ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಆ ಬಳಿಕ ಆರೋಪಿಗಳು ಶರಣಾಗಿದ್ದರು.

ಸದ್ಯಕ್ಕೆ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಬೇರೆ ಯಾರಾದರೂ ಇದ್ದಾರೆಯೋ, ನಾಲ್ವರು ಈ ಕೃತ್ಯ ಎಸಗಿದ್ದರೇ ಎಂಬುದನ್ನು ಈಗಲೇ ಹೇಳಲಾಗದು. ತನಿಖೆ ಮುಂದುವರಿದಿದ್ದು, ಹತ್ಯೆಗೆ
ಕಾರಣ ಏನು ಎಂಬ ಬಗ್ಗೆ ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂದು ಎಸ್ಪಿ (SP) ರಿಷ್ಯಂತ್ ಮಾಹಿತಿ ನೀಡಿದರು.

Exit mobile version