Site icon Kannada News-suddikshana

ಸಹೋದರನ ಪತ್ನಿ ಸ್ಪರ್ಧೆಯಿಂದ ತೊಂದರೆ ಇಲ್ಲ: ಸೋಮಶೇಖರ್ ರೆಡ್ಡಿ SOMASHEKHAR REDDY SAYS NO PROBLEM

SUDDIKSHANA NEWS

 

DAVANAGERE

ದಾವಣಗೆರೆ: ಸಹೋದರ ಜನಾರ್ದನ ರೆಡ್ಡಿ ಸ್ಥಾಪಿಸಿರುವ ಕಲ್ಯಾಣ ಪ್ರಗತಿ ಪಕ್ಷಕ್ಕೂ, ಬಿಜೆಪಿ (BJP)ಗೂ ಸಂಬಂಧ ಇಲ್ಲ. ಬಳ್ಳಾರಿ ಕ್ಷೇತ್ರದಲ್ಲಿ ಸಹೋದರನ ಪತ್ನಿ ವಿರುದ್ಧ ಸ್ಪರ್ಧಿಸುವುದರಿಂದ ನನಗೆ ತೊಂದರೆ ಇಲ್ಲ ಬಳ್ಳಾರಿ
ಶಾಸಕ ಸೋಮಶೇಖರ್ ರೆಡ್ಡಿ (SOMASHEKHAR REDDY) ತಿರುಗೇಟು ನೀಡಿದ್ದಾರೆ.

ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಳ್ಳಾರಿ ಗ್ರಾಮಾಂತರದಲ್ಲಿ ಸಾರಿಗೆ ಸಚಿವ ಶ್ರೀರಾಮುಲು (SHREERAMULU) ಸ್ಪರ್ಧೆ ಮಾಡುವುದಾಗಿ ಹೇಳಿರುವುದರಿಂದ ನನಗೆ ಆನೆ ಬಲ ಬಂದಿದೆ. 14ರಿಂದ 16 ಸಾವಿರ ಜನರಿಗೆ ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳಲ್ಲಿ ಪಟ್ಟಾ ವಿತರಣೆ ಮಾಡಲಾಗಿದೆ, ಮನೆ ಮನೆ ಬಾಗಿಲಿಗೆ ಹೋಗಿದೆ. ಆದ್ದರಿಂದ ಈ ಬಾರಿ ಗೆಲುವು ನನ್ನದೇ. ಗಡಿನಾಡು ಬಳ್ಳಾರಿ ಅಖಂಡ ಜಿಲ್ಲೆಯಲ್ಲಿ ಪಕ್ಷದ ಹತ್ತಕ್ಕೆ ಹತ್ತು ಅಭ್ಯರ್ಥಿಗಳು (CONDIDATES) ಜಯಭೇರಿ ಬಾರಿಸಲಿದ್ದಾರೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಭದ್ರಕೋಟೆ ಎಂದು ತಿಳಿಸಿದರು.

ಜಾರಿ ನಿರ್ದೇಶನಾಲಯ ಸ್ವತಂತ್ರ ಸಂಸ್ಥೆ. ಇಡಿ ದಾಳಿಗೂ ಬಿಜೆಪಿ ಸರ್ಕಾರಕ್ಕೂ ಸಂಬಂಧ ಏನೂ ಇಲ್ಲ. ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗುತ್ತಿದೆ. ಈ ಭಾಗದಲ್ಲಿ ಹೆಚ್ಚಿನ ಅಭ್ಯರ್ಥಿಗಳು ಗೆಲುವು
ಸಾಧಿಸಲಿದ್ದಾರೆ. ಜನಾರ್ದನ ರೆಡ್ಡಿ (JANARDHANA REDDY) ಪಕ್ಷದಿಂದ ಗೆಲುವಿಗೆ ಅಡ್ಡಿಯಾಗದು ಎಂದು ಅಭಿಪ್ರಾಯಪಟ್ಟರು.

Exit mobile version