Site icon Kannada News-suddikshana

ವಡ್ನಾಳ್ ರಾಜಣ್ಣ ಗರಂ ಆಗಿದ್ದೇಕೆ..?

ವಡ್ನಾಳ್ ರಾಜಣ್ಣ ಗರಂ ಆಗಿದ್ದೇಕೆ..?

ದಾವಣಗೆರೆ: ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಗೆಲುವಿಗೆ ಶ್ರಮಿಸೋಣ. ಅದನ್ನು ಬಿಟ್ಟು ಜೈ ಹಾಕ ಹಾಕೋದು ಸರಿಯಲ್ಲ ಎಂದು ವೇದಿಕೆ ಮೇಲೆ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಸಿಟ್ಟಾದ ಘಟನೆ ನಡೆಯಿತು.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಚನ್ನಗಿರಿ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರಜಾ ಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡವರು ಪೋಸ್ಟರ್ ಹಿಡಿದು ಕಿರುಚಾಟ ನಡೆಸಿದರು. ಇದರಿಂದ ವೇದಿಕೆಯಲ್ಲಿ ಸಿಟ್ಟಿಗೆದ್ದ ರಾಜಣ್ಣ, ಕ್ಷೇತ್ರದಲ್ಲಿ ಒಟ್ಟು 8 ಜನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದು, ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ನಾಯಕರು ಬಂದ ಮೇಲೆ ಘೋಷಣೆ ಯಾರ ಪರವೂ ಹಾಕಬೇಡಿ ಎಂದು ಕರೆ ನೀಡಿದರು.

ಯಾರಿಗೆ ಟಿಕೆಟ್ ಕೊಡಬೇಕೆಂಬುದನ್ನು ಹೈಕಮಾಂಡ್ ನಿರ್ಧರಿಸಿಸುತ್ತೆ. ಹಾಗಾಗಿ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡಿ, ಇಲ್ಲಾ ಅಂದ್ರೆ ಸರಿ ಇರೋಲ್ಲ ಎಂದು ಎಚ್ಚರಿಕೆ ನೀಡಿದರು. ಇದರಿಂದ ವೇದಿಕೆ ಮೇಲಿದ್ದ ಆಕಾಂಕ್ಷಿಗಳು ಮುಜುಗರ ಅನುಭವಿಸಬೇಕಾಯಿತು.

Exit mobile version