Site icon Kannada News-suddikshana

ಮೋದಿ ಆಗಮನ ದಿನದಂದು ಉಪಾಹಾರ, ಊಟ ಏನೇನಿರುತ್ತೆ…? MODI PROGRAM DAY FOOD

SUDDIKSHANA KANNADA NEWS

DAVANAGERE

DATE:22-03-2023

ದಾವಣಗೆರೆ: ಮಹಾಸಂಗಮ (MAHASANGAMA) ಕ್ಕೆ 224 ಕ್ಷೇತ್ರಗಳಿಂದಲೂ ಜನರು ಆಗಮಿಸುತ್ತಾರೆ. 400 ಕೌಂಟರ್ ಗಳನ್ನು ತೆರೆಯಲಾಗುತ್ತದೆ. ಬೇರೆ ಬೇರೆ ಜಿಲ್ಲೆಗಳಿಂದ ಬರುವ ಜನರಿಗೆ ಬೆಳಿಗ್ಗೆ 9.30ರವರೆಗೆ ಉಪಾಹಾರ (TIFFEN) ದ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಜನರಿಗೆ ಉಪ್ಪಿಟ್ಟು, ಕೇಸರಿಬಾತು ಟಿಫನ್ ಇರಲಿದೆ. ಇನ್ನು ಕಾರ್ಯಕ್ರಮಕ್ಕೆ ಬರುವವರಿಗೆ ಊಟದ ವ್ಯವಸ್ಥೆ ಇರುತ್ತದೆ. ಒಂದು ಸಾವಿರ ಬಾಣಸಿಗರು ಇದ್ದು, ಮೂರು ತಂಡಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಮಧ್ಯಾಹ್ನ ಗೋಧಿ ಪಾಯಸ, ಮೊಸರನ್ನ, ಪಲಾವ್ ನೀಡಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ತಿಳಿಸಿದರು.

ಪಾರ್ಕಿಂಗ್ ವ್ಯವಸ್ಥೆ:

ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ಪಾರ್ಕಿಂಗ್ (PARKING) ವ್ಯವಸ್ಥೆಯನ್ನೂ ಮಾಡಲಾಗಿದೆ. 44 ಜಾಗಗಳನ್ನು ಗುರುತಿಸಲಾಗಿದ್ದು, ಮೂರು ಕಿಲೋಮೀಟರ್ ವರೆಗೆ 500 ಎಕರೆ ಜಾಗದಲ್ಲಿ ಈ ವ್ಯವಸ್ಥೆ ಮಾಡಲಾಗುವುದು. 45 ವಿಭಾಗಗಳನ್ನು ರಚಿಸಲಾಗಿದ್ದು, ರಕ್ಷಣೆ, ಸ್ವಚ್ಛತೆ, ಕುಡಿಯುವ ನೀರು, ಮಜ್ಜಿಗೆ ಸೇರಿದಂತೆ ಬೇರೆ ಬೇರೆ ಸಿದ್ಧತೆ (PREPARATION) ಕುರಿತಂತೆ ಕಾರ್ಯನಿರ್ವಹಿಸಲಿದೆ. ಮಹಾಸಂಗಮ (MAHASANGAMA) ಮುಗಿದ ಮೇಲೆ ಸ್ವಚ್ಛತೆಯನ್ನೂ ಈ ತಂಡ ಮಾಡಲಿದೆ. 5 ಸಾವಿರ ಪ್ರಬಂಧಕರಿದ್ದು, ಮೋದಿ ಅವರ ಸ್ವಾಗತ ತಂಡದಲ್ಲಿ 100 ಪ್ರಮುಖರು ಇರಲಿದ್ದಾರೆ ಎಂದರು.

ವೇದಿಕೆ ಹೇಗಿರುತ್ತೆ..?

ಒಟ್ಟು ಮೂರು ವೇದಿಕೆ (STAGE) ನಿರ್ಮಾಣ ಮಾಡಲಾಗುತ್ತಿದೆ. ಪ್ರಧಾನ ವೇದಿಕೆಯಲ್ಲಿ ನೂರು ಮಂದಿ ಮಾತ್ರ ಉಪಸ್ಥಿತರಿರುವರು. ಕೆಳಗಡೆ ಎರಡು ವೇದಿಕೆಗಳು ಇರಲಿವೆ. ಅಕ್ಕಪಕ್ಕದಲ್ಲಿ ವೇದಿಕೆ ಇರಲಿದೆ. ಒಂದೆಡೆ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಎಡ ವೇದಿಕೆಯಲ್ಲಿ 39 ಜಿಲ್ಲಾಧ್ಯಕ್ಷರು, ಮುಖಂಡರು, ಪ್ರಮುಖರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತದೆ.

2 ಲಕ್ಷ ಖುರ್ಚಿಗಳನ್ನು ಹಾಕಲಾಗುವುದು. ವಿಶಾಲ ಜಾಗವಿರುವುದರಿಂದ ಹೆಚ್ಚಿನ ಜನರಿಗೆ ತೊಂದರೆ ಆಗದು. ಶಾಮಿಯಾನದೊಳಗೆ ಚಿಕ್ಕದೊಳಗೆ ರೋಡ್ ಶೋ (ROAD SHOW) ನಡೆಸಲು ಯೋಜಿಸಲಾಗಿದ್ದು, ಎನ್ ಎಸ್ ಜಿ ಒಪ್ಪಿಗೆ ನೀಡುವ ವಿಶ್ವಾಸ ಇದೆ ಎಂದರು.

ಗೋಷ್ಠಿಯಲ್ಲಿ ಶಾಸಕರಾದ ಎಸ್. ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ವಕ್ತಾರ ಶಿವಶಂಕರ್, ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್ ಮತ್ತಿತರರು ಹಾಜರಿದ್ದರು.

Exit mobile version